ಬಂಟ್ವಾಳ : ಶತಮಾನೋತ್ತರ ಬೆಳ್ಳಿ ಹಬ್ಬ ಆಚರಣಾ ಅಂಗವಾಗಿ ಚರ್ಚ್ ದಿನವನ್ನು ಭಾನುವಾರ ವಿಜೃಂಭಣೆಯಿಂದ ಆಚರಿಸಲಾಯಿತು. ಬಳ್ಳಾರಿ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಬಿಷಪ್ ಹೆನ್ರಿ ಡಿ’ಸೋಜ ರವರು ಬೊರಿಮಾರ್ ಚರ್ಚ್ ಗೆ ಆಗಮಿಸಿ ದಿವ್ಯ ಬಲಿ ಪೂಜೆಯನ್ನು ನೆರವೇರಿಸಿದರು. ಶತಮಾನೋತ್ತರ ಬೆಳ್ಳಿಹಬ್ಬ ಆಚರಿಸುತ್ತಿರುವ ಬೊರಿಮಾರ್ ಧರ್ಮ ಕೇಂದ್ರದ ಧರ್ಮಗುರುಗಳಿಗೆ ಹಾಗೂ ಸಮಸ್ತ ಕ್ರೈಸ್ತ ಪ್ರಜೆಗಳಿಗೆ ಅಬಿನಂದನೆಗಳನ್ನು ಸಲ್ಲಿಸಿದರು.

ಸಂತ ಜೋಸೆಫರ ದೇವಾಲಯ ಬೊರಿಮಾರ್ ಒಂದು ಸಣ್ಣ ದೇವಾಲಯ ಆದರೂ ಇಲ್ಲಿ ಶತಮಾನೋತ್ತರ ಬೆಳ್ಳಿ ಹಬ್ಬದ ಅಂಗವಾಗಿ ಆಚರಿಸುತ್ತಿರುವ ಎಲ್ಲಾ ಕಾರ್ಯಕ್ರಮಗಳು ಮಾದರಿಯಾಗಿದರ ಎಂದವರು ಮೆಚ್ಚುಗೆ ವ್ಯಕ್ತ ಪಡಿಸಿದರು. ಇದೇ ಸಮಯದಲ್ಲಿ ಪಾಲನಾ ಸಮಿತಿಯ ವತಿಯಿಂದ ಶ್ರೀಲಂಕಾದಲ್ಲಿ ಬಾಂಬ್ ಸ್ಪೋಟದಿಂದ ಮೃತರಾದರಿಗೆ ಕ್ಯಾಂಡಲ್ ಹೊತ್ತಿಸಿ ವಿಶೇಷ ಪ್ರಾರ್ಥನೆಯನ್ನು ಬಿಷಪ್ ರವರು ನೆರವೇರಿಸಿದರು. ಚರ್ಚ್ ಧರ್ಮಗುರುಗಳು ವಂದನೀಯ ಗ್ರೆಗರಿ ಪಿರೇರಾ ಮತ್ತು ಪಾಲನಾ ಸಮಿತಿಯ ಉಪಾಧ್ಯಕ್ಷರಾದ ರೋಷನ್ ಬೊನಿಫಾಸ್ ಮಾರ್ಟಿಸ್ ರವರನ್ನು ಬಿಷಪ್ ರವರು ಶಾಲು ಹೊದಿಸಿ ಅಬಿನಂದಿಸಿದರು. ಪೂಜೆಯ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬಿಷಪ್ ಡಿ’ಸೋಜರವರನ್ನು ಮತ್ತು ಚರ್ಚ್ ದಿನವನ್ನು ಆರಂಭ ಮಾಡಿದ ವಂದನೀಯ ಧರ್ಮಗುರುಗಳು ಮೆಲ್ವಿನ್ ನೊರೊನ್ಹಾರಿಗೆ ಮತ್ತು ಗುರುದೀಕ್ಷೆ ಪಡೆದು ಮೂವತ್ತೆಂಟು ವರ್ಷಗಳನ್ನು ಪೂರೈಸಿದ ವಂದನೀಯ ಗ್ರೆಗರಿ ಪಿರೇರಾರವರನ್ನು ಸನ್ಮಾನಿಸಲಾಯಿತು. ಪಕ್ಷಿಕೆರೆ ದೇವಾಲಯದ ಧರ್ಮಗುರು ವಂದನೀಯ ಮೆಲ್ವಿನ್ ನೊರೊನ್ಹಾ, ಆಗ್ರಾ ಧರ್ಮ ಪ್ರಾಂತ್ಯದ ಧರ್ಮಗುರು ವಂದನೀಯ ಮರಿಯನ್ ಲೋಬೊ, ಬ್ರದರ್ ಜೋನ್ಸನ್ ಉಪಸ್ಥಿತರಿದ್ದರು. ಕಾರ್ಯಕ್ರಮದ ನಿಮಿತ್ತ ಎಲ್ಲರಿಗೂ ಭೋಜನದ ವ್ಯವಸ್ಥೆ ಮಾಡಲಾಗಿತ್ತು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here