ಬಂಟ್ವಾಳ: ಎಪ್ರಿಲ್, ಮೇ ತಿಂಗಳು ನೀರು ಕಡಿಮೆಯಾಗುವಂತಹ ಸಮಯ. ಎಲ್ಲಾ ಕಡೆಗಳಲ್ಲಿ ಯೂ ಕುಡಿಯುವ ನೀರಿಗಾಗಿ ಹಾಹಾಕಾರಗಳು ಕೇಳಿ ಬರುವ ಸಮಯ.
ಈ ಬಾರಿಯೂ ದ.ಕ.ಜಿಲ್ಲೆಯ ಹಲವು ಕಡೆಗಳಲ್ಲಿ ಕುಡಿಯುವ ನೀರಿಗಾಗಿ ಕೂಗು ಕೇಳಿ ಬಂದಿದೆ. ಕುಡಿಯಲು ನೀರಿಲ್ಲದ ಇಂತಹ ಸಮಯದಲ್ಲಿ ಕಂಪೆನಿಯೊಂದು ಕಾರಿಂಜೇಶ್ವರನ ತೀರ್ಥ ಸ್ನಾನದ ಕೆರೆಯಿಂದ ನೀರನ್ನು ರಸ್ತೆಯ ಕಾಮಾಗಾರಿಗೆ ಬಳಸುತ್ತಿದ್ದು ಸಾರ್ವಜನಿಕ ವಲಯದಲ್ಲಿ ಬಾರೀ ಆಕ್ರೋಶ ವ್ಯಕ್ತವಾಗಿದೆ.

ಬಂಟ್ವಾಳ ದಿಂದ ಪುಂಜಾಲಕಟ್ಟೆ ಯವರೆಗೆ ನಡೆಯುವ ಚತುಷ್ಪತ ಕಾಮಗಾರಿಗೆ ಈ ನೀರನ್ನು ಬಳಸಲಾಗುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ.
ಕಾವಳಮೂಡೂರು ಗ್ರಾಮ‌ಪಂಚಾಯತ್ ವ್ಯಾಪ್ತಿಯಲ್ಲಿರುವ ಹಿಂದೂ ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟ ವಗ್ಗ ಕಾರಿಂಜೇಶ್ವರ ದೇವಸ್ಥಾನದ ಗದಾ ತೀರ್ಥದ ಒಡಲು ಖಾಲಿಯಾಗುತಿದೆ ಆದರೂ ಸ್ಥಳೀಯ ನಾಯಕರೆಲ್ಲ ಮೌನರಾಗಿದ್ದರೆ .

ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ನಡೆಸುತ್ತಿರುವ ಸುದಾಕರ ಶೆಟ್ಟಿ ಅವರ ಮೊಗರೋಡಿ ಖಾಸಗಿ ಸಂಸ್ಥೆ ಯು ನೀರನ್ನು ಅಕ್ರಮವಾಗಿ ದಿನಕ್ಕೆ 100 ಟ್ಯಾಂಕರಿಗಿಂತಲೂ ಅಧಿಕವಾಗಿ ತೆಗೆಯುತ್ತಿದ್ದು ಗದಾ ತೀರ್ಥದ ಕೆರೆಯು ಬರಿದಾಗಬಹುದು ಇದರಿಂದ ಕ್ಷೇತ್ರದ ಪಾವಿತ್ರ್ಯತೆಗೆ ದಕ್ಕೆ ಬರಬಹುದು ಕ್ಷೇತ್ರದ ಸಮಿತಿಯು ಮತ್ತು ಅಲ್ಲಿನ ಸರಕಾರಿ ಅಧಿಕಾರಿಗಳು ಮೌನರಾಗಿರುವುದು ಸಂಶಯಾಸ್ಪದಕವಾಗಿದೆ .

ನಾಲ್ಕು ಕಡೆಗಳಲ್ಲಿ ಕೆರೆಗೆ ಪೈಪ್ ಗಳನ್ನು ಅಳವಡಿಸಿದ್ದು ನಾಲ್ಕು ಟ್ಯಾಂಕ್ ರುಗಳ ಮೂಲಕ ದಿನಪೂರ್ತಿ ಇಲ್ಲಿಂದ ನೀರನ್ನು ಪಂಪ್ ಮಾಡಿ ಕೊಂಡುಹೋಗಲಾಗುತ್ತಿದೆ.
ಮಳೆ ಇರಲಿ ಬೇಸಿಗೆ ಇರಲಿ ಈ ಕೆರೆಯ ನೀರು ಸಿಹಿ ಯಾಗಿರುತ್ತದೆ. ಸಾಕಷ್ಟು ಹಿನ್ನಲೆ ಇರುವ ಈ ತೀರ್ಥ ಸ್ನಾನ ದ ಕೆರೆಯ ನೀರನ್ನು ಅಕ್ರಮವಾಗಿ ಖಾಸಗಿ ಸಂಸ್ಥೆ ಬಳಸುತ್ತಿರುವುದಕ್ಕೆ ವ್ಯಾಪಕ ಅಕ್ರೋಶ ವ್ಯಕ್ತವಾಗಿದ್ದಲ್ಲದೆ ಜಿಲ್ಲಾಧಿಕಾರಿ ಅವರು ಸೂಕ್ತ ಕ್ರಮಕೈಗೊಳ್ಳಲು ವಿನಂತಿ ಸಿದ್ದಾರೆ. ದಯವಿಟ್ಟು ಶಾಸಕರು ಈ ಬಗ್ಗೆ ಕ್ರಮ ಕೈಗೊಳ್ಳಬೇಕಾಗಿ ವಿನಂತಿಯನ್ನು ಸ್ಥಳೀಯರು ಮಾಡಿದ್ದಾರೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here