ರವಿ ಚಿನಾ ಹಳ್ಳಿ0

ಸರ್ವ ಸಮತಾ ಭಾವಕ್ಕಿಂತ ಮಿಗಿಲಾದ ತಪವಿಲ್ಲ, ಕ್ಷಮೆಯ ಮೀರಿಸುವಂತ ಸದ್ಗುಣವು ಬೇರಿಲ್ಲ, ದುಡಿಮೆಗಿಂತರಿದಾದ ದೇವ ಪೂಜೆಯದಿಲ್ಲ, ಶ್ರೀನಿಧಿಯ ಒಲುಮೆಗೆ ಮತ್ತೇನೂ ಬೇಕಿಲ್ಲ, ಇಷ್ಟು ಸಾಕೆಲ್ಲವೇ ನಮ್ಮ ಜೀವನ ಉದ್ದಾರವಾಗಲು, ಈ ಸಿನಿಮಾದ ಮೊದಲ ಪ್ರಾರ್ಥನೆಯೇ ಇದಾದ ಮೇಲೆ ಆ ಚಲನ ಚಿತ್ರ ಇನ್ನು ಹೇಗಿರಬಹುದು, ಹೇಗಿರಬಹುದೇನು ಕರ್ನಾಟಕದಲ್ಲಿ ಒಂದು ಕ್ರಾಂತಿಯನ್ನೇ ಮಾಡಿ, ಇಂದಿಗೂ ಈ ಚಲನ ಚಿತ್ರ ಎಂದರೆ ಮುಂದೆಯೂ ಒಂದು ಕ್ರಾಂತಿಯೇ, ಅಂತಹ ಒಂದು ಮಹಾನ್ ಕಲಾಕೃತಿಯೇ ನನ್ನ ಮನದಲ್ಲಿ ಅಚ್ಚಳಿಯದೇ ಉಳಿದಿರುವ ಮಹಾನ್ ಚಿತ್ರ , ಅಣ್ಣನವರು ನಟಿಸಿದ ” ಬಂಗಾರದ ಮನುಷ್ಯ”
ಸ್ನೇಹಿತರೆ ಈ ಚಲನ ಚಿತ್ರದ ಕೆಲವು ನನಗಿಷ್ಟವಾದ ನುಡಿಗಳನ್ನು ಈ ಅಂಕಣದಲ್ಲಿ ಬರೆವೆ ನೀವು ಸಹ ಓದಿ ನೋಡಿ,

ಓದ್ದೋರು ಎಷ್ಟೋಮಂದಿ ಹಳ್ಳಿಲಿ ಹುಟ್ದೋರೆ, ಮಣ್ಣ ಬಂಗಾರವೆಂಬ ಬುದ್ದಿಬಲದಿಂದ, ಊರಿಗೆ ಅವನು ಕಣ್ಣಾದ, ಉರಿಯ ಸೂರ್ಯ ಒಬ್ಬ ಸಾಕು ಈ ಭೂಮಿನ್ ಬೆಳಗೋಕೆ, ರಾಜೀವ ಒಬ್ಬ ಸಾಕು, ರಾಜೀವ ಒಬ್ಬ ಸಾಕು ಈ ಹಳ್ಳಿನ ಬೆಳಗೋಕೆ, ಈ ಹಳ್ಳಿನ ಬೆಳಗೋಕೆ,

ಏನ್ ಚಾಮಯ್ಯ, ನಾವು ಬೆಳಸಿದ ಮರಗಳು ನಮ್ಮ ಮೇಲೆ ಬೀಳುಬಹುದಾ, ಯಾ ವಳ್ಳೆ ಮಾತೇಳಿದ್ರಿ, ಒಮ್ಮೊಮ್ಮೆ ಮಳೆಗಾಳಿ, ಬಿರ್ಗಾಳಿ ಬೀಸುದ್ರೆ ಬೀಳ್ತವೆ ಕಣಪ್ಪ,

ಅಕ್ಕ ಇದ್ದರೆ ತಿನ್ನೋಣ ಇಲ್ಲಾಂದ್ರೆ ಉಪವಾಸ ಇರೋಣ, ಇಲ್ಲಾಂತ ಯಾರನ್ನೂ ಕೇಳ್ಬಾರ್ದಕ್ಕ, ಇದ್ರೆ ತಿನ್ನೋಣ ಇಲ್ಲಾಂದ್ರೆ ಉಪವಾಸ ಇರೋಣ, ನಮಗಿಲ್ಲಾಂತ ನಾವು ಯಾರ್ನೂ ಕೇಳಬಾರ್ದು, ಅದ್ರಲ್ಲೂ ನಮ್ಮ ಹತ್ತಿರದವ್ರತಾವ ಕೇಳ್ಳೇ ಬಾರ್ದು,
ತಾಯಿ ಬಿದ್ದೋಕ್ತಿರೋ ಕುಟುಂಬಕ್ಕೆ ಅನ್ನ ಕೊಡುಬೇಕೂಂತ ನಿನ್ನ ಸೇವೆ ಮಾಡ್ತೀನಿ , ಅಜ್ಞಾನಿ ತಪ್ಪು ಮಾಡದ್ರೂ ನೀನು ಅನ್ನ ಕೊಟ್ಟು ಸಾಕು ತಾಯಿ,
ಹಸಿದು ಹಸಿದು ಊಟ ಮಾಡಿದರೆ ಊಟ ರುಚಿ , ತಡೆದು ತಡೆದು ಮದುವೆ ಯಾದರೆ ಜೀವನ ಚೆನ್ನ,
ಎತ್ತಿದ ಗುದ್ಲಿ ಇಳಿಸ ಬೇಡ , ಒಡೆಯನಿಗೆ ಎರಡು ಬಗೀಬೇಡ ಅಂತ ಬದುಕಿದ್ರೆ ತಾನೇ ಶಿವ ಮೆಚ್ಚೋದು,
ಬಿದ್ದೋಕ್ತಿದ್ದ ಮನೆ ಉಳಿಸ ಬೇಕೂಂತ ನಿನ್ನ ಸೇವೆ ಮಾಡ್ದೆ, ನಾನು ಅಜ್ಞಾನಿ ತಪ್ಪು ಮಾಡಿದರೂ ಹೊಟ್ಟೆತುಂಬಾ ಊಟ ಕೊಟ್ಟು ಸಾಕಿದೆ ತಾಯಿ, ನಿನ್ನ ಸೇವೆ ಬಿಟ್ಟು ನಾನು ಬಲು ದೂರ ಹೋಗ್ತಾ ಇದ್ದೇನೆ ತಾಯಿ, ಮುಂದೆಯೂ ಸಹ ನೀನು ಕೈ ಹಿಡಿದು ಸಲಹು ತಾಯಿ,
ಅಯ್ಯೋ ಅಂತಹ ಚಿತ್ರದಲ್ಲಿ ಬರುವ ಡೈಲಾಗ್ ಗಳನ್ನು ಬರೀತ ಹೋದರೆ ಇನ್ನು ಬರೀಬಹುದು , ಇದು ಕೇವಲ ಬಂಗಾರದ ಮನುಷ್ಯ ದ ಜಲಕ್ ಅಷ್ಟೇ,
ಸ್ನೇಹಿತರೆ ಬಂಗಾರದ ಮನುಷ್ಯ ಚಲನ ಚಿತ್ರವನ್ನು ನೋಡಿದ ಅದೆಷ್ಠೋ ವಿದ್ಯಾವಂತರು ನಗರದಿಂದ ಹಳ್ಳಿಗಳಿಗೆ ಹೋಗಿ ಹಸಿರು ಕ್ರಾಂತಿಯನ್ನು ಮಾಡಸಿದ ಒಂದು ಶಕ್ತಿಶಾಲಿ ಸಿನಿಮಾ, ಟಿ ಕೆ ರಾಮರಾವ್ ಅವರ ಕಾದಂಬರಿ ಆಧರಿತ ಚಲನಚಿತ್ರ, ಶ್ರೀನಿಧಿ ಪ್ರೊಡಕ್ಷನ್ ಅಡಿಯಲ್ಲಿ ಬಂದ ಈ ಚಿತ್ರದ ನಿರ್ದೇಶಕರು ಸಿದ್ದಲಿಂಗಯ್ಯನವರು, ಇದರ ನಿರ್ಮಾಪಕರು ಲಕ್ಷ್ಮಣ್ ರವರು, ಅಂದರೆ ಈ ಗ್ರೂಪ್ ನ ಸದಸ್ಯ ನಾಗಣ್ಣನವರ ತೀರ್ಥರೂಪುಗಳು, ಇದರಲ್ಲಿ ಮಹಾನ್ ಪ್ರತಿಭೆಗಳಾದ ಬಾಲಕೃಷ್ಣ, MP ಶಂಕರ್, ವಜ್ರಮುನಿ, ಶ್ರೀನಾಥ್, ಜೋಕರ್ ಶ್ಯಾಮ್ , ಭಾರತಿ, ಅದೋನಿ ಲಕ್ಷ್ಮೀದೇವಿ ಹೀಗೆ ಹಲವಾರು ಪ್ರತಿಭಾನ್ವಿತ ರಿಂದ ತುಂಬಿ ತುಳುಕಿದ ಚಿತ್ರ,
ನಾಯಕ ನಟರಾದ ಅಣ್ಣನವರು ಮೊದಲು ಊರಿಗೆ ಬಂದಾಗ ರೈಲಿನಿಂದ ಇಳಿದಾಗ ತನ್ನ ಊರ ಕಂಡು ಮೈ ಪುಳಕಿತರಾಗೊ ಸಮಯ, ಸಾಹುಕಾರ ರಾಚ್ಯೂತಪ್ಪನವರು ಇದಾಗದ ಕೆಲಸ ಎಂದಾಗ ಮನಸ್ಸು ಒಂದಿದ್ದರೆ ಏನು ಬೇಕಾದರೂ ಸಾಧಿಸಬಹುದೆಂಬ ನಾಯಕನ ಆತ್ಮಸ್ಥೈರ್ಯ, ಓ ಒಂದೊಂದು ಸಹ ಅಜರಾಮರ, ಇಂತಹ ಮಹೋನ್ನತ ಕೃತಿಯ ಬಗ್ಗೆ ಬರೆಯುತ್ತಾ ಹೋದರೆ ನಾನೇ ಅಲ್ಪನಾಗುತ್ತೇನೋ ಎನ್ನುವ ನನ್ನ ಅಳುಕು, ಅಳಕೇನು ಖಂಡಿತ ನಾನು ಅಲ್ಪನೇ, ಸುಮಾರು ೨ ವರ್ಷಕ್ಕೂ ಮಿಗಿಲಾಗಿ ಓಡಿದ ಈ ಚಿತ್ರ ಒಂದು ಮಹಾನ್ ಚಿತ್ರ, ನನಗೆ ತಿಳಿದಿದ್ದನ್ನು ನಿಮ್ಮ ಮುಂದೆ ಗೀಚಿದ್ದೇನೆ , ದಯಮಾಡಿ ಈ ಚಿತ್ರದ ಬಗ್ಗೆ ನೀವೂ ಸಹ ಬರೆಯಿರಿ, ಧನ್ಯವಾದಗಳು

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here