


ಬಂಟ್ವಾಳ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬಂಟ್ವಾಳದ ವತಿಯಿಂದ ರಾಯಚೂರು ನಗರದ ನವೋದಯ ಎಂಜಿನಿಯರಿಂಗ್ ವಿದ್ಯಾರ್ಥಿನಿ ಮಧು ಹತ್ಯೆಯ ಕುರಿತುಮಧುವಿನ ಸಾವಿನ ನ್ಯಾಯಕ್ಕಾಗಿ ಆಗ್ರಹಿಸಿ ಹಾಗೂ ಮೃತ ವಿದ್ಯಾರ್ಥಿನಿ ಕುಟುಂಬಕ್ಕೆ ದುಃಖ ಮರೆಸುವ ಶಕ್ತಿಯನ್ನು ನೀಡಲಿ ಎಂದು ಎಬಿವಿಪಿ ಬಂಟ್ವಾಳ ವತಿಯಿಂದ ಸಂತಾಪ ಸೂಚಿಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ವಿದ್ಯಾರ್ಥಿ ಪರಿಷತ್ ನ ಹಿರಿಯ ಕಾರ್ಯಕರ್ತರಾದ ಸುದಿತ್ ಶೆಟ್ಟಿ ಹಾಗೂ ಅ.ಭಾ.ವಿ.ಪ ಬೆಂಬಲಿತ ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ನಾಯಕರಾದ ಮನು ದೇವ್ ನೆರೆದ ವಿದ್ಯಾರ್ಥಿ ಸಮೂಹವನ್ನುದ್ದೇಶಿಸಿ ಮಾತುಗಳನ್ನಾಡಿದರು.
ಈ ಸಂದರ್ಭದಲ್ಲಿ ಅ.ಭಾ.ವಿ.ಪ ಮಂಗಳೂರು ಜಿಲ್ಲಾ ಸಂಚಾಲಕರಾದ ಆಶಿಶ್ ಅಜ್ಜಿಬೆಟ್ಟು , ತಾಲ್ಲೂಕು ಸಂಚಾಲಕರಾದ ದೀರಜ್ ಸಹಸಂಚಾಲಕರಾದ ಶ್ರೀನಿಧಿ , ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಹರ್ಷಿತ್ ಕೊಯಿಲ ,ನಗರ ಕಾರ್ಯದರ್ಶಿ ಪ್ರತೀಕ್ ಹಾಗೂ ವಿದ್ಯಾರ್ಥಿ ಪ್ರಮುಖರಾದ ಅಖಿಲಾಶ್ ,ಪ್ರತೀಕ್ ನೂಜಿಪಾಡಿ, ಭರತ್, ಅಭಿಲಾಶ್, ಅಭಿನ್, ವಿಜಯ್ ಉಪಸ್ಥಿತರಿದ್ದರು.





