ಮಂಗಳೂರು: ಅಂತಾರಾಷ್ಟ್ರೀಯ  ಸೇವಾ ಸಂಸ್ಥೆಯ ಮಂಗಳೂರು, ಹಾಸನ, ಕೊಡಗು, ಚಿಕ್ಕಮಗಳೂರು ಜಿಲ್ಲೆಗಳನ್ನೊಳಗೊಂಡ ಲಯನ್ಸ್ ಜಿಲ್ಲೆ 317ಡಿಯ 2019-20ನೇ ಸಾಲಿಗೆ ದ್ವಿತೀಯ ಉಪ ಗವರ್ನರ್ ಆಗಿ ವಸಂತ ಕುಮಾರ್ ಶೆಟ್ಟಿಯವರು ಚುನಾಯಿತರಾಗಿದ್ದಾರೆ.
ಕಳೆದ 46 ವರ್ಷಗಳಿಂದ ಬಂಟ್ವಾಳದಲ್ಲಿ ಹತ್ತು ಹಲವಾರು ಜನೋಪಯೋಗಿ ಹಾಗೂ ನಿರಂತರವಾದ ಸೇವಾ ಕಾರ್ಯಗಳನ್ನು ಮಾಡುತ್ತಾ ಬರುತ್ತಿರುವ ಲಯನ್ಸ್ ಕ್ಲಬ್ ಬಂಟ್ವಾಳಕ್ಕೆ ಪ್ರಪ್ರಥಮವಾಗಿ ಈ ಉಪ ಗವರ್ನರ್ ಹುದ್ದೆಯು ಇತ್ತೀಚೆಗೆ ಮಂಗಳೂರಿನಲ್ಲಿ ಲಯನ್ಸ್ ಜಿಲ್ಲಾ ಸಮ್ಮೇಳನದಲ್ಲಿ ನಡೆದ ಚುನಾವಣೆಯಲ್ಲಿ ಒಲಿದು ಬಂದಿದೆ. ಲಯನ್ಸ್ ಜಿಲ್ಲೆಯನ್ನು 2021-22ನೇ ಸಾಲಿನಲ್ಲಿ ವಸಂತ ಕುಮಾರ್ ಶೆಟ್ಟಿಯವರು ಲಯನ್ಸ್ ಜಿಲ್ಲಾ ಗವರ್ನರ್ ಆಗಿ ಮುನ್ನಡೆಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here