Tuesday, October 31, 2023

ವಿದೇಶಿ ಪಾರ್ಸೆಲ್ ನಲ್ಲಿ ಬಂದ ಹೆಚ್ಚುವರಿ ಬ್ಯಾಗೊಂದನ್ನು ಪೋಲೀಸರಿಗೆ ಒಪ್ಪಿಸಿ ಕುಟುಂಬವೊಂದು ಮಾನವೀಯತೆ ಮೆರೆದಿದೆ

Must read

ಬಂಟ್ವಾಳ: ವಿದೇಶದಿಂದ ಬರುವ ಯಾರದೋ ಲಗೇಜ್ ಬ್ಯಾಗೊಂದು ಪಾರ್ಸೆಲ್ ಮೂಲಕ ಬಂಟ್ವಾಳಕ್ಕೆ ಬಂದ ಬಗ್ಗೆ ವರದಿಯಾಗಿದೆ.

ಅಬುದಾಬಿಯಿಂದ ಇತಿಹಾದ್ ಎರ್ ಏಸ್ ಬೆಂಗಳೂರು ಏರ್ ಪೋರ್ಟ್ ನಲ್ಲಿ ಎ.17 ರಂದು ಬಂದಿದೆ.

ಬೆಂಗಳೂರಿಗೆ ವಿಮಾನದಲ್ಲಿ ಬಂದ ಕುಟುಂಬವೊಂದರ ಲಗೇಜ್ ಬ್ಯಾಗ್ ಜೊತೆ ಇತರ ಹೆಚ್ಚುವರಿ ಬ್ಯಾಗ್ ವೊಂದು ಬಂದಿದ್ದು ಅದನ್ನು ಬಂಟ್ವಾಳ ನಗರ ಪೋಲೀಸ್ ಠಾಣೆಗೆ ನೀಡಲಾಗಿದೆ.

ಅಬುಧಾಬಿ ಯಿಂದ ಪರ್ಲಿಯಾ ಕುಟುಂಬ ವೊಂದು ಬೆಂಗಳೂರು ಬಂದು ಆ ಬಳಿಕ ಇವರ ಲಗೇಜ್ ಗಳನ್ನು ಪಾರ್ಸೆಲ್ ಮೂಲಕ ಮನೆಗೆ ತಲುಪಿಸಲು ಹಣ ನೀಡಿದ್ದರು.
ಆದರೆ ಮನೆಗೆ ಪಾರ್ಸೆಲ್ ಮೂಲಕ ಬಂದ ಇವರ ಪಾರ್ಸೆಲ್ ಜೊತೆ ಇನ್ನು ಒಂದು ಹೆಚ್ಚು ವರಿ ಬ್ಯಾಗ್ ಬಂದಿದೆ.

ಪರ್ಲಿಯಾ ನಿವಾಸಿ ಇಕ್ಬಾಲ್ ಬಂಟ್ವಾಳ ನಗರ ಪೋಲೀಸ್ ಠಾಣೆಯ ಎಸ್.ಐ.ಚಂದ್ರಶೇಖರ್ ಅವರ ಕೈಗೆ ನೀಡಿದೆ.
ಈ ಬ್ಯಾಗ್ ನಲ್ಲಿ ಮನೆ ಉಪಯೋಗದ ವಸ್ತಗಳಿದ್ದು ಸಂಬಂಧಿಸಿದವರು ಬಂಟ್ವಾಳ ನಗರ ಪೋಲೀಸ್ ಠಾಣೆಯನ್ನು ಸಂಪರ್ಕ ಮಾಡಲು ಕೋರಲಾಗಿದೆ.

ಈ ಸಂದರ್ಭದಲ್ಲಿ ಸುಧಾಕರ ತೋನ್ಸೆ ಶಾಹುಲ್ ಪರ್ಲಿಯಾ ಉಪಸ್ಥಿತರಿದ್ದರು.

More articles

Latest article