



ಬಂಟ್ವಾಳ : ಮದುವೆ ಅಂದರೆ ಮನೆಯಲ್ಲಿ ತಿಂಗಳುಗಳ ಕಾಲ ಸಂಭ್ರಮ ಸಡಗರ ಸಂತೋಷ. ಮನೆಯವರು ಎಲ್ಲರೂ ಒಟ್ಟಾಗಿ ಸೇರಿ ಸಂಭ್ರಮಿಸುವ ಸಮಯ.
ಆದರೆ ಮದುವೆಯ ಮರುದಿನವೇ ಮದುಮಗ ಮದುಮಗಳನ್ನು ಬಿಟ್ಟು ಕರ್ತವ್ಯ ಕ್ಕೆ ಮರಳಬೇಕಾದ ಸಂದಿಗ್ಧ ಪರಿಸ್ಥಿತಿ ಇದ್ದಾಗ ಮಾತ್ರ ಕೊಂಚ ಬೇಸರ ಅಗುವುದು ಸಹಜ.
ಇಲ್ಲೇನಪ್ಪಾ ವಿಶೇಷ ಅಂತೀರಾ
ಇವರ ಹೆಸರು ಯಲ್ಲಪ್ಪ ಇವರ ಊರು ಅನಮಟ್ಟಿ, ಕೆಲಸ ಪೋಲೀಸ್ ಸಬ್ ಇನ್ಸ್ ಪೆಕ್ಟರ್. ಬಂಟ್ವಾಳ ವೃತ್ತದ ವಿಟ್ಲ ಪೋಲೀಸ್ ಠಾಣೆಯ ಎಸ್.ಐ.ಯಲ್ಲಪ ಅವರ ವಿವಾಹವು ಎ.10 ರಂದು ದಾವಣಗೆರೆ ಯಲ್ಲಿ ಅಮೃತಾ ಅವರೊಂದಿಗೆ ನಡೆಯಿತು. ಎ. 11 ,ರಂದು ಯಲ್ಲಪ್ಪ ಅವರ ಅನಮಟ್ಟಿಯ ಮನೆಯಲ್ಲಿ ಆರತಕ್ಷತೆ ಕಾರ್ಯಕ್ರಮ ನಡೆಯಿತು.
ಆದರೆ ಆರತಕ್ಷತೆ ಕಾರ್ಯಕ್ರಮ ಮುಗಿದ ಕೂಡಲೇ ಕಾರ್ಯಕ್ರಮ ಕ್ಕೆ ಹಾಕಿಕೊಂಡಿದ್ದ ಬಟ್ಟೆಗಳನ್ನು ಕಳಚಿ ಖಾಕಿ ತೊಟ್ಟು ಸಂಜೆಯೇ ವಾಪಾಸು ವಾಹನ ಹತ್ತಿ ವಿಟ್ಲ ಕ್ಕೆ ವಾಪಸಾಗಿ ಬೆಳಿಗ್ಗೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ.
ಚುನಾವಣೆಯ ಈ ಸಮಯದಲ್ಲಿ ರಜೆ ನೀಡದ ಹಿನ್ನೆಲೆಯಲ್ಲಿ ಮದುವೆ ಕಾರ್ಯಕ್ರಮ ಮುಗಿದ ಕೂಡಲೇ ಕರ್ತವ್ಯಕ್ಕೆ ಹಾಜರಾಗಿ ನಿಷ್ಠೆ ಮೆರೆದಿದ್ದಾರೆ.
ಚುನಾವಣೆ ನಿನ್ನೆ ಮುಗಿದಿದ್ದು ಮತ್ತೆ ರಜೆಯಲ್ಲಿ ಇವರು ಹೋಗಲಿದ್ದಾರೆ. ಮದುವೆ ಅರತಕ್ಷತೆ ಕಾರ್ಯಕ್ರಮ ಮುಗಿದ ಕೂಡಲೇ ಕರ್ತವ್ಯಕ್ಕೆ ಹಾಜರಾಗಿ ಮೇಲಾಧಿಕಾರಿಗಳಿಂದಲೂ ಶಹಬ್ಬಾಸ್ ಗಿರಿ ಗಿಟ್ಟಿಸಿಕೊಂಡರು.





