ಮುಂಬಯಿ, ಎ.೧೭: ರೀಡ್ ಎಗ್ಝಿಬಿಶನ್ ಮತ್ತು ಕಾರ್‍ಯುಗೇಟೆಡ್ ಇಂಡಸ್ಟ್ರೀಯಲ್ ಅಸೋಸಿಯೇಶನ್ ವತಿಯಿಂದ ನಡೆಸಲ್ಪಟ್ಟ ಅಂತರಾಷ್ಟ್ರೀಯ ಸಮಾವೇಶದಲ್ಲಿ ಕರ್ನಾಟಕ ರಾಜ್ಯದ ಉಡುಪಿ ಕಾರ್ಕಳ ಮೂಲದ ಮುಂಬಯಿನ ವೆಲ್‌ವಿನ್ ಪೇಪರ್ ಪ್ರಾಡಕ್ಟ್ ಸಂಸ್ಥೆಯ ಕಾರ್ಯಾಧ್ಯಕ್ಷ ವಿನ್ಸೆಂಟ್ ಮಥಾಯಸ್ ಇವರಿಗೆ ಅಂತರಾಷ್ಟ್ರೀಯ ಪ್ರಶಸ್ತಿ ‘ವರ್ಲ್ಡ್ ಕಾರ್‍ಯುಗೇಟೆಡ್ ಆವಾರ್ಡ್ ೨೦೧೯’ ಪ್ರಾಪ್ತಿಯಾಗಿದೆ.

ಕಳೆದ ಎ.೭ರಂದು ಚೈನಾದಲ್ಲಿರುವ ಶಂಗೈನ ಹೊಟೇಲ್ ಸಭಾಗೃಹದಲ್ಲಿ ಆಯೋಜಿಸಲಾಗಿದ್ದ ಜಾಗತಿಕ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆದಿದ್ದು ಸಮಾರಂಭದಲ್ಲಿ ಆಧುನಿಕ ಮತ್ತು ಅತ್ಯತ್ತಮ ಪರಿಶೋಧಕ ಕಲ್ಪನೆ, ಸಮಾಜದ ಜವಾದ್ಬಾರಿ ಇಟ್ಟುಕೊಂದು ಮಾರುಕಟ್ಟೆ ಮತ್ತು ಕಾರ್ಯನಿರ್ವಾಹಣೆಯಲ್ಲಿ ಉತ್ತಮ ಸಾಧನೆ ಹಾಗೂ ಗ್ಲೋಬಲ್ ಕಾರ್‍ಯುಗೇಟೆಡ್ ಇಂಡಸ್ಟ್ರೀಯಲ್ಲಿಯನ್ನು ಅಭಿವೃದ್ಧಿ ಪಥಕ್ಕೆ ಗುರುತಿಸಿ ಕೊಂಡಿರುವರನ್ನು ಆಯ್ಕೆಗೊಳಿಸಿ ಪ್ರಶಸ್ತಿ ಪ್ರದಾನಿಸಿ ಗೌರವಿಸಲಾಯಿತು.

ಈ ಬಾರಿಯ ೨೦೧೯ರಲ್ಲಿ ವೆಲ್‌ವಿನ್ ಪೇಪರ್ ಪ್ರಾಡಕ್ಟ್ ದೇಶದಲ್ಲಿ ನ್ಯೂ ಫ್ಯಾಕ್ಟರಿ ಪ್ರಾಡಕ್ಟ್ ಪ್ರಶಸ್ತಿಗೆ ನೇಮಿಸಲಾಗಿದ್ದು, ಆನ್‌ಲೈನ್ ಚುನಾವಣೆ ಮೂಲಕ ಸುಮಾರು೧೪ ಇಂಡಸ್ಟ್ರೀಯಲ್ ಅಂತರಾಷ್ಟ್ರೀಯ ತೀರ್ಪುದಾರ ನೇಮಕಾತಿಯಲ್ಲಿ ಆಯ್ಕೆಪ್ರಕ್ರಿಯೆ ಚುನಾವಣೆಯಲ್ಲಿ ವೆಲ್‌ವಿನ್ ಸಂಸ್ಥೆಯು ಪ್ರಥಮ ಸ್ಥಾನದಲ್ಲಿ ವಿಜೇತವೆಣಿಸಿತು. ಚೈನಾ ಮತ್ತು ಮಿಡಲ್ ಈಸ್ಟ್ ಕಂಪೆನಿಗಳೊಂದಿನ ಸ್ಪರ್ಧೆಯಲ್ಲಿ ವೆಲ್‌ವಿನ್ ನ್ಯೂ ಫ್ಯಾಕ್ಟರಿ ಪ್ಲಾನಿಂಗ್ ವಿಭಾಗದಲ್ಲಿ ದ್ವಿತೀಯ ಸ್ಥಾನಕ್ಕೆ ಭಾಜನವಾಯಿತು.

ಕಾರ್‍ಯುಗೇಟೆಡ್ ಇಂಡಸ್ಟ್ರೀಯಲ್ಲಿ ಭಾರತ ರಾಷ್ಟ್ರದಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸುವುದೇ ಒಂದು ಅಸಾಧರಣಾ ಮತ್ತು ಸ್ಥೈರ್ಯತ್ವದ ದೊಡ್ಡ ಸಾಧನೆಯಾಗಿದೆ. ನಮ್ಮ ಜಯ ರಾಷ್ಟ್ರದ ಮತ್ತು ಮಹಾರಾಷ್ಟ್ರದ ಉದ್ಯಮದ ಜಯವಾಗಿದೆ ಎಂದು ವೆಲ್‌ವಿನ್ ಪೇಪರ್ ಪ್ರಾಡಕ್ಟ್ ಕಾರ್ಯಾಧ್ಯಕ್ಷ ವಿನ್ಸೆಂಟ್ ಮಥಾಯಸ್ ಅನಿಸಿಕೆ ವ್ಯಕ್ತಪಡಿಸಿದ್ದಾರೆ. ಸಮಾವೇಶದಲ್ಲಿ ವೆಲ್‌ವಿನ್ ಸಂಸ್ಥೆಯ ನಿರ್ದೇಶಕ ವರ್ಟನ್ ಮಥಾಯಸ್ ಭಾಗವಹಿಸಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here