Tuesday, October 31, 2023

ಲೋಕಸಭಾ ಚುನಾವಣೆಗೆ ಬಂಟ್ವಾಳ ವಿಧಾನ ಸಭಾ ಕ್ಷೇತ್ರ ಸಂಪೂರ್ಣ ಸಜ್ಜು: ಎ.ಆರ್.ಒ. ಮಹೇಶ್

Must read

ಬಂಟ್ವಾಳ: ಎ.18 ರಂದು ನಡೆಯವ ಲೋಕಸಭಾ ಚುನಾವಣೆಗೆ ಬಂಟ್ವಾಳ ವಿಧಾನ ಸಭಾ ಕ್ಷೇತ್ರ(205) ಸಂಪೂರ್ಣ ಸಜ್ಜಾಗಿದ್ದು ಬೇಕಾದ ಸಕಲ ವ್ಯವಸ್ಥೆ ಗಳು ಅಚ್ಚುಕಟ್ಟಾಗಿ ಸಿದ್ದವಾಗಿದೆ ಎಂದು ಎ.ಆರ್.ಒ. ಮಹೇಶ್ ತಿಳಿಸಿದ್ದಾರೆ.
ಅವರು ತಾಲೂಕು ಕಂದಾಯ ಇಲಾಖೆಯ ಚುನಾವಣಾ ಕಛೇರಿಯಲ್ಲಿ ಮಾಧ್ಯಮ ವರಿಗೆ ಮಾಹಿತಿ ನೀಡಿದರು.
ಶಾಂತಿಯುತ ಮತದಾನಕ್ಕೆ ಬೇಕಾದ ಸಕಲ ವ್ಯವಸ್ಥೆ ಗಳನ್ನು ಕಲ್ಲಿಸಲಾಗಿದ್ದು ಸಿಬ್ಬಂದಿ ಗಳಿಗೆ ಚುನಾವಣಾ ಕಾರ್ಯಕ್ಕೆ ಬೇಕಾದ ಎಲ್ಲಾ ಮಾಹಿತಿಗಳನ್ನು ನೀಡಲಾಗಿದೆ.
 ಯಾವುದೇ ಗೊಂದಲ ಗಳಿಗೆ ಎಡೆಮಾಡದೆ ಉತ್ತಮ ರೀತಿಯಲ್ಲಿ ಚುನಾವಣೆ ನಡೆಯುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಂಟ್ವಾಳ ವಿಧಾನ‌ಸಭಾ ಕ್ಷೇತ್ರದ ಲ್ಲಿ ಒಟ್ಟು 222166 ಮತದಾರರಿದ್ದಾರೆ, ಅದರಲ್ಲಿ 109351 ಪುರುಷ ಹಾಗೂ 112810ಹಾಗೂ 5 ಜನ ಇತರ ಮತದಾರರಿದ್ದಾರೆ .
ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಇಷ್ಟು ಮತದಾರರಿಗೆ ಒಟ್ಟು 249 ಮತಗಟ್ಟೆಗಳಿವೆ.
ನಾಳೆ ಮೊಡಂಕಾಪು ಶಾಲೆಯಲ್ಲಿ ಮಸ್ಟರಿಂಗ್ ಹಾಗೂ ಡಿ.ಮಸ್ಟರಿಂಗ್ ಕಾರ್ಯಕ್ರಮ ನಾಳೆ ಬೆಳಿಗ್ಗೆ ನಡೆಯಲಿದೆ ಇದಕ್ಕೆ ಬೇಕಾದ ಎಲ್ಲಾ ಪೂರ್ವ ಸಿದ್ಧತೆಗಳನ್ನು ಮಾಡಲಾಗಿದೆ.
85 ಸೂಕ್ಷ್ಮ ಹಾಗೂ ಅತೀ ಸೂಕ್ಷ್ಮ ಮತಗಟ್ಟೆಗಳನ್ನಾಗಿ ವಿಂಗಡಿಸಿ ಗುರುತು ಮಾಡಲಾಗಿದೆ.
35 ಮತಗಟ್ಟೆಗಳಲ್ಲಿ ಮೈಕ್ರೋ ಅಫೀಸರ್ ಗಳನ್ನು ನೇಮಕ ಮಾಡಲಾಗಿದೆ.
ಅದೇ ರೀತಿ 17 ಕಡೆಗಳಲ್ಲಿ ನೇರವಾಗಿ ವೆಬ್ ಕಾಸ್ಟಿಂಗ್ ಸಿಸ್ಟೆಮ್ ವ್ಯವಸ್ಥೆ ಮಾಡಲಾಗಿದ್ದು , ಅಮೂಲಕ ಸಾರ್ವಜನಿಕ ರು ನೇರವಾಗಿ ನೋಡಬಹುದು .
ಅದೇ ರೀತಿ ವಿಶೇಷವಾಗಿ 15 ಮತಗಟ್ಟೆಗಳ ಕಡೆಗಳಲ್ಲಿ ಪೂರ್ಣ ಪ್ರಮಾಣದ ವೀಡಿಯೋ ಗ್ರಾಫರ್ ಗಳನ್ನು ಹಾಕಲಾಗಿದೆ.
ಬೇರೆ ಬೇರೆ ಮತಗಟ್ಟೆಗಳಿಗೆ ತೆರಳಲು ಸುಮಾರು  125 ವಾಹನಗಳನ್ನು ಕ್ರೋಡೀಕರಣ ಮಾಡಲಾಗಿದೆ, ಒಟ್ಟು 96 ಮಾರ್ಗಗಳಿವೆ , ಅದಕ್ಕೆ ಒಬ್ಬರು ಮಾರ್ಗಾಧಿಕಾರಿಗಳಿದ್ದಾರೆ. ಈ ವಾಹನದಲ್ಲಿ ಮತಗಟ್ಟೆ ಅಧಿಕಾರಿ,  ಪೋಲೀಸ್ ಅಫೀಸರ್, ಮೈಕ್ರೋ ಅಫೀಸರ್ ಹಾಗೂ ಮಾರ್ಗಾಧಿಕಾರಿಗಳು ತೆರಳುತ್ತಾರೆ.
 ಮತಗಟ್ಟೆಗಳ ಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ಗಳಿಗೆ ಮತದಾನ ಚಲಾವನೆಗಾಗಿ  ಎಲೆಕ್ಸನ್ ಡ್ಯೂಟಿ ಸರ್ಟಿಫಿಕೇಟ್ ಗಳನ್ನು ನೀಡಲಾಗಿದೆ.
ಬಂಟ್ವಾಳ ವಿಧಾನ ಸಭಾ ಕ್ಷೇತ್ರ ಕ್ಕೆ ಸಂಬಂಧ ಪಟ್ಟಂತೆ ಬೂತ್ ನಂ.61  ಇದನ್ನು ಪಿಂಕ್‌ ಬೂತ್ ಎಂದು ಪರಿಗಣಿಸಿ ಅಲ್ಲಿಗೆ ವಿಶೇಷ ವಾಗಿ ಪೂರ್ವ ಸಿದ್ಧತೆಗಳನ್ನು ಮಾಡಲಾಗಿದೆ.
ಪ್ರತಿ ಬೂತ್ ಗಳಲ್ಲಿ ಬಿ.ಎಲ್.ಒ.ಬೂತ್ ಲೆವಲ್ ಅಫೀಸರ್ ಗಳಿಗೆ ಚುನಾವಣೆ ಯ ಸಂದರ್ಭದಲ್ಲಿ ಯಾವ ರೀತಿಯಲ್ಲಿ ಕೆಲಸ ಮಾಡಬೇಕು ಎಂಬ ಮಾಹಿತಿ ನೀಡಲಾಗಿದೆ.
ಬಿ.ಎಲ್.ಒ.ಗಳಿಂದ ವಿತರಣೆಯಾಗಿರುವ ಒಟರ್ ಸ್ಲಿಪ್ ಕೇವಲ ಮಾಹಿತಿಗಾಗಿ  ಇದನ್ನು ಎಲ್ಲರಿಗೂ ತಿಳಿಸಲಾಗಿದೆ .
ಅದೇ ರೀತಿಯಲ್ಲಿ ಬೂತ್ ಲೆವಲ್ ಅಸಿಸ್ಟೆಂಟ್ ಎಂದು ನೇಮಕ ಮಾಡಲಾಗಿದೆ. ಅವರು ವಿಶೇಷ ಚೇತನರಿಗೆ , ಆಸಕ್ತರಿಗೆ ಗ್ರಾಮ ಪಂಚಾಯತ್ ವತಿಯಿಂದ ಪ್ರತಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಲ್ಲಿ ಬರುವ ಮತಗಟ್ಟೆಗಳ ಸಂಖ್ಯೆ ಗನುಗುಣವಾಗಿ ಒಂದು ಅಥವ ಎರಡು ವಾಹನಗಳನ್ನು ಸರಕಾರದ ವತಿಯಿಂದ ತಯಾರು ಮಾಡಲಾಗಿದೆ, ಅಮೂಲಕ ವಿಶೇಷ ಚೇತನ ರು ಆಶಕ್ತರು ಮತದಾನ ಮಾಡಲು ಅವಕಾಶ ನೀಡಲಾಗಿದೆ. ವಿಶೇಷ ಚೇತನರಿಗೆ ವೀಲ್ ಚ್ಯೇರ್ ಕೂಡಾ ವ್ಯವಸ್ಥೆ ಮಾಡಲಾಗಿದೆ. ಗುರುತು ಚೀಟಿ ನೀಡಿ ಸ್ವಯಂ ಸೇವಕ ರನ್ನು ನೇಮಕ ಮಾಎಲಾಗಿದ್ದು ಅವರು ಇವರಿಗೆ ಸಹಾಯ ಮಾಡಲಿದ್ದಾರೆ.
ಮತಗಟ್ಟೆಗಳಿಗೆ ತೆರಳುವ ಸಿಬ್ಬಂದಿ ಗಳಿಗೆ ನೀರಿನ ವ್ಯವಸ್ಥೆ ಹಾಗೂ ಊಟದ ವ್ಯವಸ್ಥೆ ಜೊತೆ   ಮೂಲಭೂತ ಸೌಕರ್ಯಗಳನ್ನು ಒದಗಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ತಿಳಿಸಿದರು.

More articles

Latest article