ಬಂಟ್ವಾಳ: ರಾಜ್ಯದಲ್ಲಿ ಲೋಕಸಭೆ ಚುನಾವಣೆಗೆ ಮೊದಲ ಹಂತದಲ್ಲಿ ಮತದಾನ ನಡೆಯುವ 14 ಕ್ಷೇತ್ರಗಳಿಗೆ ಮಂಗಳವಾರ ಬಹಿರಂಗ ಪ್ರಚಾರ ಅಂತ್ಯಗೊಳ್ಳಲಿದ್ದು, ಕಾಂಗ್ರೆಸ್‌-ಜೆಡಿಎಸ್‌ ಹಾಗೂ ಬಿಜೆಪಿ ನಾಯಕರು ಇಡೀ ದಿನ ಅಭ್ಯರ್ಥಿಗಳ ಪರ ಬಿರುಸಿನ ಪ್ರಚಾರ ನಡೆಸುವ ಸಾಧ್ಯತೆ ಇದೆ.
ಗುರುವಾರ ಬೆಳಗ್ಗೆ 7ರಿಂದ ಸಂಜೆ 6ರ ವರೆಗೆ ಮತದಾನ ನಡೆಯಲಿದ್ದು, ಮತದಾನಕ್ಕೆ 48 ಗಂಟೆಗಳ ಮುಂಚೆ ಮಂಗಳವಾರ ಸಂಜೆ 6 ಗಂಟೆಗೆ ಬಹಿರಂಗ ಪ್ರಚಾರ ಕೊನೆಗೊಳ್ಳಲಿದೆ.
ಹೀಗಾಗಿ ಕೊನೇ ದಿನ ಪ್ರಚಾರಕ್ಕೆ ಬರುವಂತೆ ಅಭ್ಯರ್ಥಿಗಳು ನಾಯಕರ ದುಂಬಾಲು ಬಿದ್ದಿದ್ದಾರೆ. ಮೊದಲ ಹಂತದಲ್ಲಿ ಉಡುಪಿ- ಚಿಕ್ಕಮಗಳೂರು, ದಕ್ಷಿಣ ಕನ್ನಡ, ಕೋಲಾರ, ಚಿಕ್ಕ ಬಳ್ಳಾಪುರ, ತುಮಕೂರು, ಹಾಸನ, ಚಿತ್ರದುರ್ಗ, ಬೆಂಗಳೂರು ಗ್ರಾಮಾಂತರ, ದಕ್ಷಿಣ, ಉತ್ತರ, ಕೇಂದ್ರ, ಮೈಸೂರು-ಕೊಡಗು, ಚಾಮರಾಜನಗರ, ಮಂಡ್ಯ ಕ್ಷೇತ್ರದಲ್ಲಿ ಮತದಾನ ನಡೆಯಲಿದೆ.

ಅಬ್ಬರದ ಪ್ರಚಾರ ಕಂಡು ಬಂದಿಲ್ಲ: ಬಂಟ್ವಾಳ ವಿಧಾನಸಭಾ ಕ್ಷೇತ್ರದಿಂದ ಪ್ರಬಲ ರಾಜಕೀಯ ಪಕ್ಷಗಳು ಬಿಜೆಪಿ ಮತ್ತು ಕಾಂಗ್ರೇಸ್ ಯಾವುದೇ ಅಬ್ಬರದ ಪ್ರಚಾರದಲ್ಲಿ ತೊಡಗಿಸಿಕೊಂಡಿರಲಿಲ್ಲ.
ಸ್ಟಾರ್ ಪ್ರಚಾರಕರೂ ಕೂಡಾ ಬಂಟ್ವಾಳಕ್ಕೆ ಕಾಲಿಡಲಿಲ್ಲ, ಪ್ರತಿ ಎಲೆಕ್ಸನ್ ಟೈಮ್ ನಲ್ಲಿ ಏನಾದರೊಂದು ಕಿರಿಕ್ ಕಾಣುತ್ತಿದ್ದ ಬಂಟ್ವಾಳ ವಿಧಾನ ಸಭಾ ಕ್ಷೇತ್ರ ಈ ಬಾರಿಯ ಲೋಕಸಭಾ ಚುನಾವಣೆ ಯ ಪ್ರಚಾರ ದ ಸಂದರ್ಭದಲ್ಲಿ ಸಪ್ಪೆಯಾಗಿದೆ ಎಂದು ಹೇಳಲಾಗುತ್ತದೆ.
ಮೋದಿ ಮೋದಿ ಅಂತ ಕೆಲವರು ಹೇಳಿದರೆ ಇನ್ನು ಕೆಲವರು ರಾಹುಲ್‌ ಎನ್ನುತ್ತಾರೆ, ಅಂತೂ ಸ್ಥಳೀಯ ಅಭ್ಯರ್ಥಿ ಗಳ ಬಗ್ಗೆ ಎರಡು ಪಕ್ಷಗಳ ಒಲವು ಅಷ್ಟಕ್ಕೇ..
ಮತದಾನದ ದಿನದಂದು ನಮ್ಮ ಹಕ್ಕು ಚಲಾಯಿಸುತ್ತೇವೆ ಆದರೆ ಪ್ರಚಾತಕ್ಕೆ ನಾವು ಹೋಗಲ್ಲ ಎಂದು ಕೆಲ ಕಾರ್ಯಕರ್ತರು ಹೇಳಿದರೆ, ಇನ್ನೂ ಕೆಲವರು ನಾವು ದುಡಿದು ಊಟ ಮಾಡಬೇಕು ಮತ್ತೆ ಯಾಕೆ ರಾಜಕೀಯ ಪ್ರಚಾರ ದ ಕಾಟ, ನಾವು ಮತದಾನದ ಹಕ್ಕನ್ನು ಚಲಾಯಿಸುವ ಸಾಕು ಎನ್ನುತ್ತಾರೆ, ಇನ್ನು ಕೆಲವರಿಗೆ ಅಭ್ಯರ್ಥಿ ಗಳ ಮೇಲೆ ಅಸಮಾಧಾನ ಹಾಗಾಗಿ ನಾವು ಪ್ರಚಾರದ ಸಮಯದಲ್ಲಿ ಮೌನ ಎನ್ನುತ್ತಾರೆ.
ಉರಿಯುವ ಬೆಂಕಿಯಂತಿರುವ ಬಿಸಿಲಿನ ತಾಪವನ್ನು ಲೆಕ್ಕಿಸಿದೆ ಕೆಲವರು ಮನೆಮನೆ ಬೇಟಿ ಮಾಡುವ ಪ್ರಚಾರದಲ್ಲಿ ತೊಡಗಿದ್ದಾರೆ.
ಇಂದು ಸಂಜೆಯವರೆಗೆ ಬಹಿರಂಗ ಪ್ರಚಾರದಲ್ಲಿ ರಾಜಕೀಯ ಪಕ್ಷಗಳ ಕಾರ್ಯಕರ್ತರು ತೊಡಗಿಸಿಕೊಂಡರೆ ಸಂಜೆ 6 ಗಂಟೆಯ ಬಳಿಕ ಮತದಾನದವರಗೂ ಮನೆಮನೆ ಬೇಟಿ ಕಾರ್ಯದಲ್ಲಿ ತೊಡಗುತ್ತಾರೆ. 144 ಸೆಕ್ಸನ್ ಜಾರಿಯಲ್ಲಿರುವುದರಿಂದ ಕನಿಷ್ಟ ಐದು ಮಂದಿ ಕಾರ್ಯಕರ್ತರು ಪ್ರಚಾರ ಮಾಡಬಹುದು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here