



ನನಗೂ
ಕೂಡಿಡುವುದನ್ನು ಕಲಿಯಬೇಕು
ಏಳು ಜನ್ಮಕ್ಕಾಗುವಷ್ಟು…!
ಹಣವನ್ನಲ್ಲ
ಅದಕ್ಕೆ ಬುದ್ದಿ ಇದ್ದರೆ ಸಾಕು
ಬಂಗಾರವಲ್ಲ
ಅದಕ್ಕೆ ಹಣವಿದ್ದರೆ ಸಾಕು
ಈ ಹಣ ಬಂಗಾರ ಸಂಪತ್ತು ಹೆಸರು
ಎಲ್ಲಾ ಗಳಿಸಬಹುದು, ಕೂಡಿಡಬಹುದು
ಕೂಡಿಡಲಾಗದನ್ನು ಕೂಡಿಡಬೇಕು
ನಾನೇ ಮೊದಲು..!
ಅದೇ
ಶುದ್ಧ ಗಾಳಿ
ಶುದ್ಧ ನೀರು
ಏಳು ಜನ್ಮಕ್ಕಾಗುವಷ್ಟು ಕೂಡಿಡಬೇಕು
ಉಪಾಯವೊಂದು ತಿಳಿಸಿ ಬಿಡಿ
ನನ್ನ ಮನೆಯ ನಲ್ಲಿಯಲ್ಲಿ ಬರೋ
ನೀರು
ಪ್ಯೂರಿಫೈಡ್ ನೀರಿಗಿಂತ ಶುದ್ಧವಾಗಿರಬೇಕು
ನಾನ್ ಉಸಿರಾಡೋ ಗಾಳಿ
ಶುದ್ಧ ಆಮ್ಲಜನಕ ಆಗಿರಬೇಕು
ಕಾಸು ಕೊಟ್ಟರು ಸಿಗಬಾರದು..!
ಕೂಡಿಡುವ ವಿಧ್ಯೆಯೊಂದು
ಕಲಿಯಬೇಕು
ನಿಮಗೆ ತಿಳಿದಿದೆಯೇ..!?
✍ಯತೀಶ್ ಕಾಮಾಜೆ





