ಬಂಟ್ವಾಳ: ಬಿ.ಸಿ.ರೋಡಿನ ಹೃದಯಭಾಗದಲ್ಲಿರುವ ಎರಡು ರಿಕ್ರಿಯೇಷನ್ ಕ್ಲಬ್ ಗೆ ಬಂಟ್ವಾಳ ನಗರ ಪೊಲೀಸರು ದಾಳಿ ನಡೆಸಿ 148ಕ್ಕೂ ಅಧಿಕ ಮಂದಿಯನ್ನು ವಶ ಪಡಿಸಿರುವ ಘಟನೆ ಭಾನುವಾರ ಸಂಜೆ ನಡೆದಿದೆ.   ಜುಗಾರಿ ಹಾಗೂ ಇನ್ನಿತರ ಪರವಾನಗಿರಹಿತ ವಿಡೀಯೊ ಗೇಮಾಗಳನ್ನು ಆಡುತ್ತಿರುವ ಶಂಕೆ ಯ ಹಿನ್ನಲೆಯಲ್ಲಿ ಈ ದಾಳಿ ಕಾರ್ಯಾಚರಣೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.

  ಬಂಟ್ವಾಳ ಎಎಸ್ಪಿ ಸೈದುಲ್ ಅದಾವತ್ ಅವರ ನೇತೃತ್ವದಲ್ಲಿ ನಗರ ಠಾಣೆಯ ಎಸ್ ಐ ಚಂದ್ರ ಶೇಖರ್ ಮತ್ತವರ ತಂಡ ಪೊಲೀಸರು ಎರಡು ವಾಣಿಜ್ಯ ಸಂಕೀರ್ಣಗಳಿಗೆ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ. ಈ ಸಂದರ್ಭ ಎರಡು ಕ್ಲಬ್ ನಲ್ಲಿದ್ದ ಒಟ್ಟುಸುಮಾರು 148ಕ್ಕೂ ಅಧಿಕ ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.ಅಲ್ಲದೆ ನಗದು, ಮೊಬೈಲ್, ಇಸ್ಪೀಟ್ ಎಲೆ ಮತ್ತಿತರ ಸೊತ್ತುಗಳನ್ನು ವಶ ಪಡಿಸಿದ್ದಾರೆ.

ಪೊಲೀಸ್ ಠಾಣೆಯ ಅನತಿದೂರದಲ್ಲಿಯೇ ಈ ವಾಣಿಜ್ಯ ಸಂಕೀರ್ಣಗಳಿವೆ ಈ ಎರಡರಲ್ಲಿ ಒಂದು ಅನಧಿಕೃತವಾಗಿ ನಡೆಯುತ್ತಿದೆ ಎಂದು ಹೇಳಲಾಗಿದೆ.  ದಾಳಿಯ ವೇಳೆ ಕ್ಲಬ್ ನಲ್ಲಿದ್ದ ಕೆಲವರು ತಮ್ಮ ಬಳಿಯಲ್ಲಿದ್ದ ನಗದು, ಚಿನ್ನಾಭರಣ, ಮೊಬೈಲ್ ಗಳನ್ನು ಮಹಡಿಯಿಂದ ಕೆಳಕ್ಕೆ ಎಸೆದಿದ್ದು, ಕೆಳ ಭಾಗದಲ್ಲಿ ಇದ್ದವರು ಇದನ್ನು ಹೆಕ್ಕಿ ಕೊಂಡ ಪ್ರಸಂಗವು ನಡೆಯಿತು.   ಈ ಸಂದರ್ಭ ವಾಣಿಜ್ಯ ಸಂಕೀರ್ಣದ ಹೊರಗೆ ಜನ ಜಮಾಯಿಸತೊಡಗಿದ್ದು, ಪೊಲೀಸ್ ಕಾರ್ಯಾಚರಣೆಯನ್ನು ಕುತೂಹಲದಿಂದ ವೀಕ್ಷಿಸುತ್ತಿರುವುದು ಕಂಡು ಬಂತು. ರಾತ್ರಿವರೆಗೂ ಕಾರ್ಯಾಚರಣೆ ನಡೆದಿದ್ದು, ವಿಚಾರಣೆಯ ಬಳಿಕವಷ್ಟೇ ಸ್ಪಷ್ಟ ಮಾಹಿತಿ ನೀಡಲಾಗುತ್ತದೆ ಎಂದು ಪೊಲೀಸ್ ಠಾಣಾ ಮಾಹಿತಿ ತಿಳಿಸಿದೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here