ವಿಟ್ಲ: ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್ ನಿಯಮಿತ 2018-19ನೇ ಸಾಲಿನಲ್ಲಿ 475 ಕೋಟಿ ರೂ.ಗೂ ಮಿಕ್ಕಿ ವ್ಯವಹಾರ ನಡೆಸಿದ್ದು, ಸುಮಾರು 2.45 ಕೋಟಿ ರೂ. ನಿವ್ವಳ ಲಾಭ ಗಳಿಸಿ, ಕಳೆದ ಸಾಲಿಗಿಂತ 19 ಕೋಟಿ ಹೆಚ್ಚಿನ ವ್ಯವಹಾರ ನಡೆಸಿದೆ ಎಂದು ಬ್ಯಾಂಕಿನ ಅಧ್ಯಕ್ಷ ಎಲ್. ಎನ್. ಕೂಡೂರು ಹೇಳಿದರು.
ಅವರು ವಿಟ್ಲ ಪ್ರಧಾನ ಶಾಖೆಯಲ್ಲಿ ಬ್ಯಾಂಕ್ ವ್ಯವಹಾರಗಳನ್ನು ಗ್ರಾಹಕರಿಗೆ ತಿಳಿಸುವ ಉದ್ದೇಶದಿಂದ ನಡೆದ ನಿರ್ದೇಶಕರ ಸಭೆಯಲ್ಲಿ ಮಾಹಿತಿ ಬಿಡುಗಡೆ ಮಾಡಿ ಮಾತನಾಡಿದರು.
ಬಂಟ್ವಾಳ ಹಾಗೂ ಪುತ್ತೂರು ತಾಲೂಕಿನ ಶಾಖೆಗಳಲ್ಲಿ 6056 ಸದಸ್ಯರಿದ್ದು, 2.23 ಕೋಟಿ ರೂ. ಪಾಲು ಬಂಡವಾಳ ಹೊಂದಿದೆ. 90.09 ಕೋಟಿ ರೂ. ಠೇವಣಿ ಹೊಂದಿ, ಕಳೆದ ವರ್ಷಕ್ಕಿಂತ ಶೇ. 8.68 ಹೆಚ್ಚಳವಾಗಿದೆ. 54.54 ಕೋಟಿ ರೂ ಹೊರ ಬಾಕಿ ಸಾಲವಿದ್ದು, ಶೇ. 92.26 ಸಾಲ ವಸೂಲಾತಿಯಾಗಿದೆ. 5.33 ಕೋಟಿ ರೂ ಕ್ಷೇಮ ನಿಧಿ ಹಾಗೂ 7.71ಕೋಟಿ ರೂ ಇತರ ನಿಧಿಯನ್ನು ಹೊಂದಿದೆ. 108 ಕೋಟಿ ರೂ. ದುಡಿಯುವ ಬಂಡವಾಳವಿದ್ದು, 2.86 ಕೋಟಿ ರೂ. ಗಳ ಚರ, ಸ್ಥಿರ ಆಸ್ತಿಯನ್ನು ಹೊಂದಿದೆ ಎಂದರು.
ಬ್ಯಾಂಕ್ ಹಿಂದಿನ ಹಲವಾರು ವರ್ಷದಿಂದ ಆಡಿತ್ ವರ್ಗೀಕರಣದಲ್ಲಿ ’ಅ’ ತರಗತಿಯಲ್ಲಿದ್ದು, ಮುಂದೆಯೂ ಇದನ್ನು ಕಾಯ್ದಿರಿಸಿಕೊಳ್ಳಲಿದೆ. 2019-20 ನೇ ಸಾಲಿನಲ್ಲಿ ಬ್ಯಾಂಕು 500 ಕೋಟಿಗೂ ಮಿಕ್ಕಿದ ವ್ಯವಹಾರ ನಡೆಸಿ 3 ಕೋಟಿ ರೂಗೂ ಮಿಕ್ಕಿ ಲಾಭ ದಾಖಲಿಸುವ ಗುರಿ ಹೊಂದಿದೆ. ಅಲ್ಲದೇ 100 ಕೋಟಿ ರೂ ಠೇವಣಿ ಸಂಗ್ರಹಿಸುವ ಹಾಗೂ ಶೇ.96 ಸಾಲ ವಸೂಲಾತಿ ಮಾಡುವ ಗುರಿಯನ್ನು ಇಟ್ಟುಕೊಳ್ಳಲಾಗಿದೆ. ಬ್ಯಾಂಕಿನ 33 ಮಂದಿ ನುರಿತ ಸಿಬ್ಬಂದಿಗಳ ಪೂರ್ಣ ಸಹಕಾರದೊಂದಿಗೆ ಇದನ್ನು ಸಾಧಿಸಲಾಗುವುದು ಎಂದರು.

ಸಭೆಯಲ್ಲಿ ಉಪಾಧ್ಯಕ್ಷ ಎ಼ ಜಗನ್ನಾಥ ಸಾಲ್ಯಾನ್, ನಿದೇಶಕರಾದ ನೀರ್ಕಜೆ ಅನಂತ ಭಟ್, ಪ್ರಕಾಶ ಕೆ. ಎಸ್. ಉರಿಮಜಲು, ಹರೀಶ್ ನಾಯಕ್ ಎಂ. ವಿಟ್ಲ, ದಿನೇಶ್ ವಿ. ವಿಟ್ಲ, ವಿಶ್ವನಾಥ ಎಂ. ವೀರಕಂಭ, ಉದಯ ಕುಮಾರ್ ಆಲಂಗಾರು, ಕೃಷ್ಣ ಕೆ. ಕನ್ಯಾನ, ಮನೋರಂಜನ್ ಕೆ. ಆರ್. ಕರೈ, ಗೀತಾ ವಿಟ್ಲ, ಪ್ರೀತಾ ಭಟ್ ಕೆ. ವಿಟ್ಲ, ಮುಖ್ಯ ಕಾರ್‍ಯ ನಿರ್ವಾಹಕ ಮೋನಪ್ಪ ಗೌಡ ಶಿವಾಜಿನಗರ ಉಪಸ್ಥಿತರಿದ್ದರು.

 

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here