Friday, October 27, 2023

ನಾವೆಲ್ಲ ಬಾಲ್ಯದಲ್ಲಿ ಬಹಳಷ್ಟು ಹೆದರುತ್ತಿದ್ದ ಎಪ್ರಿಲ್ 10 *ಪಾಸ್ ಪೈಲ್* ನ ದಿನ.. ..

Must read

ಹಳೆಯ ಈ ದಿನವನ್ನು ನೆನಪಿಸಿದ್ರೆ ಮೈ ಜುಮ್ಮೆನ್ನುತ್ತೆ..ಈ ದಿನ ಮುಂಜಾನೆ ಬೇಗನೆ ಎದ್ದು ಶುಚಿಯಾಗಿ ಸ್ನಾನ ಮಾಡಿ, ತುಳಸಿ ಗಿಡಕ್ಕೆ ಅಡ್ಡ ಬಿದ್ದು ಹಳೆಯ ಮನೆಯಲ್ಲಿ ಅಲ್ಲಲ್ಲಿ ಇರುತ್ತಿದ್ದ ದೇವರ ಪೊಟೊ, ದೇವರ ಕ್ಯಾಲೆಂಡರ್ ಎಲ್ಲಕ್ಕೂ ಮೂರು ಮೂರು ಸಲ ಅಡ್ಡ ಬಿದ್ದು, ಲೆಕ್ಕಕ್ಕಿಂತ ಹೆಚ್ವೆ ಅಗರಬತ್ತಿ ಹಚ್ಚಿ, ಧರ್ಮಸ್ಥಳ, ಕಟೀಲು, ಸುಬ್ರಹ್ಮಣ್ಯ ದ ಹಳೆಯ ಪ್ರಸಾಧವನ್ನು ಹಣೆಗೆ ಲೇಪಿಸಿ ಪಾಸಗಲೆಂದು ಪ್ರಾರ್ಥಿಸುತ್ತಿದ್ದ ಈ ದಿನ…ಗೋಮಾತೆಯ ಮುಂದೆ ಎಡಕೈ, ಬಲಗೈ ಯನ್ನು ಚಕ್ಕಲ-ಮಕ್ಕಲ ಹಾಕಿ ಗೌರಿಯೆ, ಗೌರಿಯೆ ನಾನು ಪಾಸಾ ಪೈಲ ಎಂದು ಕೇಳಿ, ಅದು ತನ್ನ ನಾಲಿಗೆಯಿಂದ ಎಡಗೈ ನೆಕ್ಕಿದರೆ ಪೈಲ್ ಎಂತೂ, ಬಲಗೈ ನೆಕ್ಕಿದರೆ ಪಾಸ್ ಎಂತೂ ನಂಬುತ್ತಿದ್ದ ಆ ದಿನ..ಕಾಸರ್ಕನ ಚಿಗುರೆಲೆ, ಕಾಡು ಬಸಲೆ ಯ ಎಲೆ, ನೆಲ ನೆಲ್ಲಿ ಯ ತುದಿ ಕಿಸೆಯಲ್ಲಿಟ್ಟು ಶುಭ ಶಕುನವಾಗಲೆಂದು ನಂಬುತ್ತಿದ್ದ ದಿನ..,ಒಂದು ವೇಳೆ ನಾವು ಪಾಸದ್ರೆ ಸ್ವರ್ಗ ಸುಖ, ನಮ್ಮ ಆತ್ಮೀಯ ಸ್ನೇಹಿತ ಪೈಲಾದ್ರೆ ಅವನನ್ನು ತಬ್ಬಿ ಸಂತೈಸಿ ಅವನನ್ನು ಪಾಸ್ ಮಾಡಿಸಲು ಮಾಸ್ಟ್ರು, ಟೀಚರ್ಗಳಲ್ಲಿ ಕೈ ಮುಗಿದು ಲಾಬಿ ಮಾಡಿಸುತ್ತಿದ್ದದ್ದು..ಸಾರ್ ಅವನಿಗೆ ಪರೀಕ್ಷೆ ಟೈಮಲ್ಲಿ ಜ್ವರ ಇತ್ತು ಪಾಸ್ ಮಾಡಿ ಸಾರ್…ಎಂದು ಗೋಗರೆಯುವ ಪರಿ ಮರೆಯಲುಂಟೆ….ಹೇಗೂ ಸರ್ಕಾರದ ನಿಯಮಗಳೆಲ್ಲ ಬದಲಾಗಿ ಎಲ್ಲಾ ವಿದ್ಯಾರ್ಥಿಗಳು ಪಾಸ್ ಅಂತ ಬಂದ್ಮೇಲೆ ಎಪ್ರಿಲ್ 10 ರ ಈ ನೆನಪುಗಳೆಲ್ಲ ಮರೆಯಾಗಿ ಹೋಯ್ತು…
ಎನೇ ಆಗಲಿ ಮಕ್ಕಳೆ ಎಲ್ಲರೂ ಪಾಸ್ ಆಗಿ ಭವಿಷ್ಯದ ಭವ್ಯ ಭಾರತದ ಸತ್ಪ್ರಜೆಗಳಾಗಿ ಎಂಬ ಹಾರೈಕೆಯೊಂದಿಗೆ..

🖋 *ಹರೀಶ್ ಮಂಜೊಟ್ಟಿ*..

More articles

Latest article