Friday, October 27, 2023

ಜೋಡುಮಾರ್ಗ ಜೇಸಿ ವತಿಯಿಂದ ಉಚಿತ ಮಧುಮೇಹ ತಪಾಸಣಾ ಶಿಬಿರ

Must read

ಬಂಟ್ವಾಳ: ಜೇಸಿಐ ಜೋಡುಮಾರ್ಗ ನೇತ್ರಾವತಿ ಹಾಗೂ ಅನುಯಶ್ ಆರೋಗ್ಯ ಪ್ರತಿಷ್ಠಾನ, ಪೂನಾ ಇದರ ಜಂಟಿ ಆಶ್ರಯದಲ್ಲಿ ಉಚಿತ ಮಧುಮೇಹ ತಪಾಸಣಾ ಶಿಬಿರವನ್ನು ಬಿ.ಸಿ.ರೋಡಿನ ಹೃದಯ ಭಾಗವಾದ ಖಾಸಗಿ ಬಸ್ ನಿಲ್ದಾಣದ ಬಳಿ ನಡೆಸಲಾಯಿತು. ಈ ಕಾರ್ಯಕ್ರಮವನ್ನು ಬಿ.ಸಿ.ರೋಡಿನ ಪ್ರಖ್ಯಾತ ವೈದ್ಯರಾದ ಡಾ| ವೀಣಾ ತೋಳ್ಪಾಡಿಯವರು ಉದ್ಘಾಟಿಸಿ ಮಧುಮೇಹದಂತಹ ಕಾಯಿಲೆಗಳನ್ನು ಪ್ರಾರಂಭದಲ್ಲಿಯೇ ಗುರುತಿಸಿ ಅದಕ್ಕೆ ತಕ್ಕುದಾದಂತಹ ಚಿಕಿತ್ಸೆ ಹಾಗು ಆಹಾರ ಪದ್ಧತಿಯನ್ನು ರೂಢಿಸಿಕೊಂಡರೆ ಮಧುಮೇಹವನ್ನು ದೂರವಿರಿಸಬಹುದು ಎಂದು ಅವರು ತಿಳಿಸಿದರು.

ಹಾಗೂ ಈ ಕಾಯಿಲೆಯ ಬಗ್ಗೆ ಜನಸಾಮಾನ್ಯರಲ್ಲಿ ಇರುವಂತಹ ಸಂದೇಹಗಳ ಬಗ್ಗೆ ವಿವರಿಸಿದರು. ಜೇಸಿಐ ವಲಯ ೧೫ರ ಉಪಾಧ್ಯಕ್ಷರಾದ ದಾಮೋದರ ಪಾಟಾಳಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ತದನಂತರ ಸುಮಾರು ೨೫೦ ಕ್ಕೂ ಮಿಕ್ಕಿ ಸಾರ್ವಜನಿಕರಿಂದ ಅವರ ರಕ್ತದ ಮಾದರಿ ಸಂಗ್ರಹಿಸಿ ಅವರ ರಕ್ತದಲ್ಲಿರುವ ಸಕ್ಕರೆ ಪ್ರಮಾಣವನ್ನು ಸ್ಥಳದಲ್ಲೇ ತಿಳಿಸಲಾಯಿತು. ಸಾಮಾನ್ಯವಾಗಿ ಇಂತಹ ಕಾರ್ಯಕ್ರಮಗಳು ೪ ಗೋಡೆಗಳ ನಡುವೆ ನಡೆಯುತ್ತಿದ್ದರಿಂದ ಜನಸಾಮಾನ್ಯರಿಗೆ ತ್ವರಿತವಾಗಿ ಇದರ ಪ್ರಯೋಜನ ಪಡೆಯುವಲ್ಲಿ ಕಷ್ವವಾಗುತ್ತಿದ್ದು. ಆದರೆ ಈ ಬಾರಿ ಹೊರಾಂಗಣದ ಜನನಿಬಿಡ ಪ್ರದೇಶದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದರಿಂದ ಈ ಕಾರ್ಯಕ್ರಮವು ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಪಾತ್ರವಾಯಿತು. ಅಧ್ಯಕ್ಷರಾದ ಹರ್ಷರಾಜ್ ಸಿ, ಕಾರ್ಯದರ್ಶಿ ರವೀಂದ್ರ ಕುಕ್ಕಾಜೆ, ಜೇಸಿರೆಟ್ ಅಧ್ಯಕ್ಷೆ ಅಮಿತಾ ಹರ್ಷರಾಜ್, ಉಪಾಧ್ಯಕ್ಷರುಗಳಾದ ಧೀರಜ್ ಹೆಚ್, ಜಯರಾಜ್ ಎಸ್. ಬಂಗೇರ, ಗಾಯತ್ರಿ ಲೋಕೇಶ್, ಸುಧಾಕರ್ ವೈ, ಜೇಜೇಸಿ ಅಧ್ಯಕ್ಷ ರೋನಿತ್ ಉಪಸ್ಥಿತರಿದ್ದರು.

 

More articles

Latest article