ಬಂಟ್ವಾಳ: ಮುಹಿಯ್ಯುದ್ದೀನ್ ಜುಮಾ ಮಸೀದಿ ಇದರ ಸಹಕಾರದೊಂದಿಗೆ ಖಿದ್ ಮತುಲ್ ಇಸ್ಲಾಂ ಎಸೋಸಿಯೇಶನ್ ಪರಂಗಿಪೇಟೆ ಇವರ ವತಿಯಿಂದ 6 ನೇ ವರ್ಷದ 10 ಜೋಡಿ ಸರಳ ಸಮೂಹಿಕ ವಿವಾಹ ಕಾರ್ಯಕ್ರಮ ಪರಂಗಿಪೇಟೆ ನೇತ್ರಾವತಿ ನದಿ ದಡದಲ್ಲಿ ನಡೆಯಿತು.
ಕುಂಪಣಮಜಲು ಅರಫಾ ಮಸೀದಿಯ ಖತೀಬರಾದ ಅಬ್ದುಲ್ ನಾಸೀರ್ ಧಾರಿಮಿ ದುವಾ ನಡೆಸಿ ದರು.

ಮುಖ್ಯ ಅತಿಥಿ ತ್ವಾಹಾ ಜುಮಾ ಮಸೀದಿ ಹತ್ತನೇ ಮೈಲು ಕಲ್ಲು ಇದರ ಖತೀಬ್ ಜಾಫರ್ ಮುಸ್ತಾನಿ ಮಾತನಾಡಿ ವಿವಾಹ ದ ಹೆಸರಿನಲ್ಲಿ ನಡೆಯುವ ಅನಾಚಾರಗಳು ಒಂದು ಕಡೆಯಾದರೆ ಸಹಾಯಕ್ಕಾಗಿ ಅರ್ಜಿ ಕೈಯಲ್ಲಿಟ್ಟುಕೊಂಡು ಮಸೀದಿ ಮಸೀದಿ ಅಳೆದಾಡುವ ಪೋಷಕರು ಒಂದುಕಡೆ, ಇಂತಹ ಸಂದರ್ಭದಲ್ಲಿ
ವರ್ಷಂಪ್ರತಿ ಖಿದ್ ಮತುಲ್ ಇಸ್ಲಾಂ ಎಸೋಶಿಯೇಶನ್ ನಡೆಸುವ ಸರಳ ಸಾಮೂಹಿಕ ವಿವಾಹವು ಮಹತ್ತರ ಕಾರ್ಯವಾಗಿದೆ ಎಂದು ಅವರು ಹೇಳಿದರು.
ಕುಟುಂಬ ಜೀವನದ ಪ್ರಥಮ ಕಾರ್ಯ ವಿವಾಹವಾಗಿದೆ, ಈ ಸಾಮೂದಾಹಿಕ ಸೇವೆಗೆ ತಕ್ಕ ಪ್ರತಿಫಲ ಸ್ರಷ್ಟಿಕರ್ತ ನೀಡಲಿ ಎಂದು ಹಾರೈಸಿದರು.
ಪರಂಗಿಪೇಟೆ ಮುಹೀದ್ದೀನ್ ಜುಮಾ ಮಸೀದಿ ಅಧ್ಯಕ್ಷ ಮಹಮ್ಮದ್ ಬಾವ ಅಧ್ಯಕ್ಷತೆ ವಹಿಸಿ ಮಾತನಾಡಿದರು
2000 ,ಇಸವಿಯಲ್ಲಿ ಪ್ರಾರಂಭವಾದ ಬಳಿಕ ಇಂದಿನವರೆಗೆ ಸುಮಾರು 59 ಜೋಡಿಗಳು ದಾಂಪತ್ಯ ಕ್ಕೆ ಕಾಲಿಡಲು ಈ ಸಂಘಟನೆ ಪ್ರಮುಖ ಪಾತ್ರವಹಿಸಿದೆ.

ಪ್ರಸ್ತಾವಿಕ ವಾಗಿ ಮಾತನಾಡಿದ ಮಾಜಿ ಜಿ.ಪಂ.ಸದಸ್ಯ ಉಮ್ಮರ್ ಫಾರೂಕ್ ಅವರು ಈ ವರೆಗೆ 59 ಜೋಡಿಗಳಿಗೆ ಸಾಮೂಹಿಕ ವಿವಾಹ ಈ ಸಂಘಟನೆಯ ಮ‌ೂಲಕ ನಡೆದಿದೆ.
ಈ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲು ಇಲ್ಲಿನ ಸಮಸ್ತ ಜನರ ಸಹಕಾರದಿಂದ ಸಾಧ್ಯವಾಗಿದೆ ಎಂದು ಹೇಳಲು ಸಂತೋಷ ವಾಗುತ್ತಿದೆ.
ಬಡ ಕುಟುಂಬದ ಸಂಕಟ ವನ್ನು ತಿಳಿದು ನಮ್ಮ ಮನೆಯ ಕುಟುಂಬದ ಹೆಣ್ಣು ಮಕ್ಕಳ ಸಮಸ್ಯೆ ಎಂದು ತಿಳಿದು ದೇವರು ಮೆಚ್ಚುವ ಉತ್ತಮ ಕಾರ್ಯಕ್ರಮ ವನ್ನು ಖಿದ್ ಮತುಲ್ ಇಸ್ಲಾಂ ಎಸೋಶಿಯೇಶನ್ ಮೂಲಕ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.
ಹಾಪೀಲ್ ಮಹಮ್ಮದ್ ರಂಝೀ ಕಿರಾಅತ್ ಪಠಿಸಿದರು.
ವೇದಿಕೆಯಲ್ಲಿ ವಳಚ್ಚಿಲ್ ಜುಮಾ ಮಸೀದಿಯ ಗೌರವ ಅಧ್ಯಕ್ಷ ಝಫರುಲ್ಲಾ ಒಡೆಯರ್,
ಬದ್ರಿಯಾ ಮಸೀದಿ ಖತೀಬ್ ಅಬುಸಾಲಿ ಪೈಝಿ,
ಹಾಜಿ ಅಬ್ದುಲ್‌ ರಝಾಕ್ ಮಲೇಷಿಯಾ, ಪರಂಗಿಪೇಟೆ ಮದರಸದ ಸದರ್ ಮುಅಲ್ಲಿಮ್ ಇಸ್ಮಾಯಿಲ್,
ಹಜಾಜ್ ಗ್ರೂಪ್ ಮಾಲಕ ಹನೀಪ್ ಹಾಜಿ ಗೋಳ್ತಮಜಲು,
ನಂಡೆ ಪೆಂಗಲ್ ರುವಾರಿ ಮುಸ್ತಫಾ ಎಸ್.ಎಮ್, ಉದ್ಯಮಿ ಇಸ್ಮಾಯಿಲ್ ಕೆ.ಇ.ಇ.ಎಲ್, ಪರಂಗಿಪೇಟೆ ಪ್ರಧಾನ ಕಾರ್ಯದರ್ಶಿ ಯೂಸುಫ್ ಅಲಂಕಾರ್, ಪುದು ಗ್ರಾ.ಪಂ.ಅಧ್ಯಕ್ಷ ರಮ್ಲಾನ್ ಮಾರಿಪಳ್ಳ, ಗ್ರಾ.ಪಂ.ಮಾಜಿ‌ ಅಧ್ಯಕ್ಷ ಹನೀಪ್, ಹಿರಿಯರಾದ ಎಪ್.ಎ.ಖಾದರ್, ನೂರುಲ್ ಹುದಾ ಮದ್ರಸ ಕುಂಜತಕಲ ಇದರ ಮಾಜಿ ಅಧ್ಯಕ್ಷ ಅಬೀದ್ ಆಲಿ, ಅರಪಾ ಗ್ರೂಪ್ ನ ಲತೀಪ್ ,
ಸೆಲಿಂ ಟೈಲರ್ ಪರಂಗಿಪೇಟೆ, ಎಂ.ಎನ್.ಟಿ.ಟ್ರೇಡಿಂಗ್ ಕಂಪನಿಯ ಮಾಲಕ ಅಲ್ತಾಫ್ ಮೇಲ್ಮನೆ, ಅಬುಬಕ್ಕರ್,

ಸಂಘಟನೆಯ ಪ್ರಮುಖರಾದ ಉಮ್ಮರ್ ಫಾರೂಕ್, ಮಹಮ್ಮದ್ ಬಾವ, ಯೂಸುಫ್ ಅಲಂಕಾರ್, ಎಪ್.ಎನ್.ಬಶೀರ್, ಹಾಶೀಫ್ ಇಕ್ಬಾಲ್, ಮಜೀದ್ ಪರಂಗಿಪೇಟೆ ಉಪಸ್ಥಿತರಿದ್ದರು.

ಶಿಕ್ಷಕ ಮಹಮ್ಮದ್ ತುಂಬೆ, ಅಬ್ದುಲ್ ಹಮೀದ್ ಗೋಳ್ತಮಜಲುವ ಕಾರ್ಯಕ್ರಮ ನಿರೂಪಿಸಿದರು.
ಅಸೀಪ್ ಇಕ್ಬಾಲ್ ವಂದಿಸಿದರು.

ಮಹೀದ್ದೀನ್ ಜುಮಾ ಮಸೀದಿ ಪರಂಗಿಪೇಟೆ ಇದರ ಸಹಕಾರದಿಂದ ಖಿದ್ ಮತುಲ್ ಇಸ್ಲಾಂ ಎಸೋಶಿಯೇಶನ್ ಪರಂಗಿಪೇಟೆ ಇವರ ವತಿಯಿಂದ ನಡೆದ ಸರಳ ಸಾಮೂಹಿಕ ವಿವಾಹದ ಲ್ಲಿ
ಮಹಮ್ಮದ್ ನೌಪಲ್ ಕೆಂಜಾರು ರಾಜಗುಡ್ಡೆ ಅಜ್ವಿನಾ ಕೊಜಪ್ಪಾಡಿ ಹರೆಕಳ, ಮಹಮ್ಮದ್ ಶಾಫಿ ಅಮ್ಲಮೊಗರು ನಸೀಮಾ ತಿಲಕನಗರ ಅಮ್ಲಮೊಗರು, ಗಫಾರ್ ಬಾರಿಯಾ ಕಲ್ಲೇರಿ ತಾಹೀರಾ ಕೊಯಿಲ, ಮಹಮ್ಮದ್ ಅನ್ಸಾರ್ ಪರಂಗಿಪೇಟೆ ರಮ್ಜೀನತ್ ಸುಜೀರ್ ಕೊಡಂಗೆ, ಕಲಂದರ್ ಶಾಫಿ ಬಸ್ತಿಗುಡ್ಡೆ ಬೆಳ್ಳಾರೆ ಆಶೀಕಾ ಕೊಡಿಂಬಾಡಿ, ಅಬ್ದುಲ್ ರಶೀದ್ ಸುಜೀರ್ ದೈಯಡ್ಕ ಅನೀಶಾ ಸುಜೀರ್ ದೈಯಡ್ಕ, ಅಸ್ಲಾಂ ಪರ್ಲಡ್ಕ ಕಾಸರಗೋಡು ವಹೀದಾ ಆಲಡ್ಕ ಪಾಣೆಮಂಗಳೂರು, ಇಸ್ಮಾಯಿಲ್ ಎಂ. ಕೊಯಿಲ ಉಪ್ಪಿನಂಗಡಿ ನಶೀಮಾ ಬಾರಿಯಾ ಕಲ್ಲೇರಿ ಒಟ್ಟು ಹತ್ತು ಜೋಡಿ ಇಂದು ಪರಂಗಿಪೇಟೆ ನದಿ ಕಿನಾರೆಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here