ಬಂಟ್ವಾಳ: ರೋಟರಿ ಕ್ಲಬ್ ಬಂಟ್ವಾಳ ಟೌನ್ ಇದರ ಪ್ರಾಯೋಜಕತ್ವದಲ್ಲಿ ನೂತನ ಕ್ಲಬ್ ಪರಂಗಿಪೇಟೆ ಯ ಜಂಟಿ ಸಭೆ ಸೇವಾಂಜಲಿ ಸಭಾಂಗಣದಲ್ಲಿ ನಡೆಯಿತು.
ನೂತನ ಕ್ಲಬ್ ನ ಪ್ರಥಮ ಅಧ್ಯಕ್ಷರಾದ ಜಯರಾಮ ಶೇಖ ನೇತೃತ್ವದಲ್ಲಿ ನಡೆದ ಸಭೆಯಲ್ಲಿ  ಪದಾಧಿಕಾರಿಗಳ ಆಯ್ಕೆ ನಡೆಯಿತು. 2ನೇ ಅವಧಿಗೆ ಅಧ್ಯಕ್ಷರಾಗಿ ರಮೇಶ್ ಎಂ ತುಂಬೆ, ಉಪಾಧ್ಯಕ್ಷರಾಗಿ ಪುರುಷೋತ್ತಮ ಭಂಡಾರಿ, ಕಾರ್ಯದರ್ಶಿ ರಮೇಶ್ ಶೆಟ್ಟಿ, ಕೋಶಾಧಿಕಾರಿಯಾಗಿ ನಾರ್ಬರ್ಟ್ ಡಿಸೋಜ, ಸಾರ್ಜೆಂಟ್ ಗಿರೀಶ್ ಶೆಟ್ಟಿ, ಜೊತೆ ಕಾರ್ಯದರ್ಶಿ ರಾಜೇಶ್ ಬಿ ಅಂಚನ್,  ಟಿ ಆರ್ ಎಫ್ ಚೆಯರ್ ಮೇನ್ ಆಗಿ ಅಬ್ದುಲ್ ಸಲಾಂ, ಮೆಂಬರ್ ಶಿಪ್ ಚೆಯರ್ ಮೇನ್ ಆಗಿ ಸುರೇಂದ್ರ ಕಂಬ್ಳಿ, ನಿರ್ದೇಶಕರಾಗಿ  ಕ್ಲಬ್ ಸರ್ವಿಸ್  ತಾರಾನಾಥ ಕೊಟ್ಟಾರಿ, ಕಮ್ಯೂನಿಟಿ ಸರ್ವಿಸ್ ಅರ್ಜುನ್ ಪೂಂಜ,  ವೊಕೇಷನಲ್ ಸರ್ವಿಸ್ ಸುಮಲತಾ ಕಂಬ್ಳಿ, ಯೂತ್ ಸರ್ವಿಸ್ ನೌಶಾದ್, ಇಂಟರ್ ನ್ಯಾಷನಲ್ ಸರ್ವಿಸ್ ಸುರೇಂದ್ರ ಶೆಟ್ಟಿ ಯವರನ್ನು  ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಸಭೆಯಲ್ಲಿ ರೋಟರಿ ಜಿಲ್ಲೆ 3181ಇದರ ಅಸಿಸ್ಟೆಂಟ್ ಗವರ್ನರ್ ಪ್ರಕಾಶ್ ಕಾರಂತ್, ವಲಯ ಕಾರ್ಯದರ್ಶಿ ನಾರಾಯಣ ಹೆಗ್ಡೆ, ವಲಯ ಸೇನಾನಿ ಸಂಜೀವ ಪೂಜಾರಿ ಗುರುಕೃಪ, ರೋಟರಿ ಕ್ಲಬ್ ಬಂಟ್ವಾಳ ಟೌನ್ ಇದರ ಅಧ್ಯಕ್ಷರಾದ ಉಮೇಶ್ ನಿರ್ಮಲ್, ಕಾರ್ಯದರ್ಶಿ ಜಯರಾಜ್ ಬಂಗೇರ, ಉಪಸ್ತಿತರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here