ಬಂಟ್ವಾಳ: ಮನೆಯ ಮಾಲಕನಿಗೆ ಹುಷಾರಿಲ್ಲ, ಮನೆಯ ಜವಬ್ದಾರಿಗೆ ಯಾರು ಇಲ್ಲ , ಎರಡು ಹೆಣ್ಣು ಮಕ್ಕಳಿಂದ ಮನೆಯ ಸಂಪೂರ್ಣ ಜೀವನ ಸಾಗಬೇಕಾಗಿದೆ.
ತಂದೆಯ ಔಷಧದ ಖರ್ಚಿಗೆ ಹಣ ಸಾಕಾಗುವುದಿಲ್ಲ, ಇದರ ಜೊತೆ ಬೀಳುವ ಸ್ಥಿತಿಯಲ್ಲಿರುವ ಸಣ್ಣ ಗುಡುಸಲು. ಇದು ನಗ್ರಿ ಗೋವಿಂದ ಕುಲಾಲ ಅವರ ಮನೆ.

ಕಡು ಬಡತನದಲ್ಲಿರುವ ಕುಟುಂಬದ ಸಂಪೂರ್ಣ ಜವಬ್ದಾರಿ ವಹಿಸಿ ಇದೀಗ ಮನೆ ನಿರ್ಮಾಣ ದ ನೆರವಿಗೆ ಯವಕರು ಮುಂದಾಗಿದ್ದಾರೆ.

ಬಂಟ್ವಾಳ ತಾಲೂಕು ಸಜೀಪ ಮೂಡ ಗ್ರಾಮದ ನಗ್ರಿ ನಿವಾಸಿ ಮಿನಾಕ್ಷಿ ಗೋವಿಂದ ಕುಲಾಲ್ ಮತ್ತು ಎರಡು ಹೆಣ್ಣು ಮಕ್ಕಳಿರುವ ಬಡತನದಿಂದ ಬೆಳೆದು ಬಂದ ಕುಟುಂಬ. ಕುಟುಂಬಕ್ಕೆ ಆಸರೆಯಾಗಿದ್ದ ಗಂಡ ಗೋವಿಂದ ಕುಲಾಲ್ ಅವರು ಕೆಲವು ವರ್ಷಗಳ ಹಿಂದೆ ಪಾರ್ಶ್ವವಾಯುವಿಗೆ ತುತ್ತಾಗಿದ್ದಾರೆ.. ಸ್ಥಳೀಯರ ಸಂಘಸಂಸ್ಥೆಗಳ ಮತ್ತು ನಾಗರಿಕರ ಸಹಾಯದಿಂದ ಔಷಧಿಗೆ ಮತ್ತು ಮನೆ ನಿರ್ವಹಣೆಗ ಸಹಾಯ ಮಾಡುತ್ತಿದ್ದಾರೆ. ಇವರ ಮನೆ ಹಳೆಯದಾಗಿದ್ದು ಬೀಳುವ ಪರಿಸ್ಥಿತಿಯಲ್ಲಿ ಇದೆ.

ಕಳೆದ ಎರಡು ವರ್ಷದ ಹಿಂದೆ ಸಂಘ ಸಂಸ್ಥೆಯ ಯುವಕರಿಂದ ರಿಪೇರಿ ಮಾಡಿಕೋಟ್ಟಿದ್ದರು ಮತ್ತೆ ಅದೇ ಯುವಕರು ಹೋಸ ಮನೆ ನಿರ್ಮಾಣ ಕಾರ್ಯಕ್ಕೆ ಕೈ ಜೋಡಿಸಿದ್ದಾರೆ ಎ.3 ರಂದು ಬುದವಾರ ಅಡಿಗಲ್ಲು ಇಟ್ಟಿದ್ದಾರೆ ಸಹೃದಯಿಗಳು ಅವರ ಕಾರ್ಯಕ್ಕೆ ಮತ್ತು ನಮ್ಮ ಮನೆ ನಿರ್ಮಾಣಕ್ಕೆ ಸಹಾಯಹಸ್ತ ನೀಡಬೇಕಾಗಿ ವಿನಂತಿ ನನ್ನ ಖಾತೆ ..ಕರ್ಣಾಟಕ ಬ್ಯಾಂಕ್ ಮಂಚಿ.. ಖಾತೆ ಸಂಖ್ಯೆ: 4652500101879401
Ifsc code : KARB0000465
ತಮ್ಮ ಕೈಲಾದಷ್ಟು ಸಹಾಯ ಮಾಡಬೇಕಾಗಿ ವಿನಂತಿ.  ಲೋಹಿತ್ ಪನೊಲಿಬೈಲ್ 9731530124 ಯಶವಂತ್ ನಗ್ರಿ 9916054307 ರವಿ ನಗ್ರಿ 9741502667.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here