ಬಂಟ್ವಾಳ: ಹಿಂದುತ್ವದ ವಿಷಯ ಬಂದರೆ ನಳಿನ್ ಗಿಂತ ಮಿಥುನ್ ರೈ ಯೋಗ್ಯ ..ಕಲ್ಲಡ್ಕ ಡಾ! ಪ್ರಭಾಕರ್ ಭಟ್ ಎಂಬ ಬರಹ ಗಳು ಪೇಸ್ ಬುಕ್ ಹಾಗೂ ಸಾಮಾಜಿಕ ಜಾಲತಾಣ ದಲ್ಲಿ ಹರಿದಾಡತೊಡಗಿದ್ದು ಬಾರೀ ವಿವಾದ ಉಂಟಾಗುತ್ತಿದೆ.

ಜಾಲತಾಣದಲ್ಲಿ ಡಾ! ಭಟ್ ಹೆಸರು ಬಳಸಿ ತಪ್ಪು ಸಂದೇಶ ರವಾನೆ : ಕಾನೂನು ಕ್ರಮಕ್ಕೆ ಪೋಲೀಸ್ ಠಾಣೆಗೆ ದೂರು.
ಈ ರೀತಿಯಲ್ಲಿ ಕಾನೂನು ಬಾಹಿರ ಸಂದೇಶವನ್ನು ರವಾನಿಸುವ ವ್ಯಕ್ತಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಲು
ಕಲ್ಲಡ್ಕ ಡಾ! ಪ್ರಭಾಕರ್ ಭಟ್ ಅವರು ಬಂಟ್ವಾಳ ನಗರ ಪೋಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆಯಾದ ಬಳಿಕ ದ.ಕ.ಜಿಲ್ಲೆಯ ರಾಜಕೀಯ ತವರೂರು ಅಗಿರುವ ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಚಾಲೇಂಜಿಗ್ ವಾರ್ ಶುರುವಾಗಿದೆ.
ರಾಜ್ಯದ ಬಿಜೆಪಿ ಹೈಕಮಾಂಡ್ ಎಂದೇ ಬಿಂಬಿತವಾಗಿರುವ ಆರ್.ಎಸ್.ಎಸ್.ಪ್ರಮುಖ ಕಲ್ಲಡ್ಕ ಡಾ ಪ್ರಭಾಕರ್ ಭಟ್ ಅವರ ಹೆಸರು ಬಳಕೆ ಮಾಡುವುದು ಅವರ ವಿರುದ್ದ ಪರ ಹೇಳಿಕೆಗಳು , ಹಾಗೂ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡುವುದು ಶುರುವಾಗಿದೆ.‌
ಅಮೂಲಕ ಯವಕರ ಮೇಲೆ ಪರಿಣಾಮ ಬೀರುವುದು ಎರಡು ಪಕ್ಷಗಳ ಉದ್ದೇಶ.
ಈ ಬಾರಿ ಯ ಲೋಕ ಸಭಾ ಚುನಾವಣಾ ಸಂದರ್ಭದಲ್ಲಿ ಯೂ ಕಲ್ಲಡ್ಕ ಡಾ ಭಟ್ ಅವರು ಹೆಸರನ್ನು ಬಳಸಿಕೊಂಡು ಸಾಮಾಜಿಕ ಜಾಲತಾಣದ ಲ್ಲಿ ತಪ್ಪು ಸಂದೇಶಗಳನ್ನು ಬಿತ್ತರಿಸುವ ಕೆಲಸಗಳು ಆಗುತ್ತಿವೆ.
ಈ ಹಿನ್ನೆಲೆಯಲ್ಲಿ ಭಟ್ ಅವರು ಬಿಸಿರೋಡಿನ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ನಾನು ಜಿಲ್ಲೆಯ ಪ್ರತಿಷ್ಠಿತ ವಿದ್ಯಾ ಸಂಸ್ಥೆ ವಿವೇಕಾನಂದ ವಿದ್ಯಾವರ್ಧಕ ಸಂಘ, ಪುತ್ತೂರು ಇದರ ಅಧ್ಯಕ್ಷ ನಾಗಿದ್ದೇನೆ. ಲೋಕಸಭಾ ಚುನಾವಣೆ ಯ ಈ ಸಂಧರ್ಭದಲ್ಲಿ ಸಾಮಾಜಿಕ ಜಾಲತಾಣದಲ್ಲಿ ನನ್ನ ಹೆಸರು ದುರುಪಯೋಗ ಪಡಿಸುತ್ತಿರುವುದು ಗಮನಕ್ಕೆ ಬಂದಿದೆ. ಇತ್ತೀಚಿಗೆ ಭಾವಚಿತ್ರ ಹಾಗೂ ಹೆಸರು ಹಾಕಿ ಸಾಮಾಜಿಕ ಜಾಲತಾಣಗಳಾದ ಪೇಸ್ ಬುಕ್, ವಾಟ್ಸ್ ಪ್ ಗಳಲ್ಲಿ ಕಾಂಗ್ರೇಸ್ ಪಕ್ಷದ ಲೋಕಸಭಾ ಅಭ್ಯರ್ಥಿ ಮಿಥುನ್ ರೈ ಪರವಾಗಿ ಭಾರತೀಯ ಜನತಾ ಪಾರ್ಟಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲು ವಿರುದ್ಧ ವಾಗಿ ಇದ್ದೇನೆ ಎಂಬ ತಪ್ಪು ಸಂದೇಶಗಳು ರವಾನೆಯಾಗುತ್ತಿದೆ. ಹಿಂದುತ್ವ ಮತ್ತು ರಾಷ್ಟ್ರೀಯ ತೆಯ ವಿಚಾರಧಾರೆ ಯ ಪರವಾಗಿರುವ ಭಾರತೀಯ ಜನತಾ ಪಾರ್ಟಿ ಗೆ ನನ್ನ ಬೆಂಬಲವಿರುತ್ತದೆ..ಅದರಿಂದ ನನ್ನ ವಿಚಾರಕ್ಕೆ ವಿರುದ್ದವಾಗಿರುವ ರೀತಿಯಲ್ಲಿ ನಾನು ಅ ರೀತಿಯ ಯಾವುದೇ ಸಂದೇಶ ಗಳನ್ನು ಅಥವಾ ಟಿಪ್ಪಣಿ ಗಳನ್ನು ಹಾಕಿರುವುದಿಲ್ಲ.
ಈ ರೀತಿಯ ವಿಚಾರಗಳ ನ್ನು ರವಾನಿಸುತ್ತಿರುವ ವ್ಯಕ್ತಿ ಗಳು ಉದ್ದೇಶ ಪೂರ್ವಕವಾಗಿ ನನ್ನ ವಿರುದ್ದ ನನಗೆ ಅಪಮಾನ ಮಾಡುವಂತೆ ಮತ್ತು ನನ್ನ ವಿಚಾರಕ್ಕೆ ವಿರುದ್ಧ ವಾಗಿ ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿರುವುದು ಸಂಪೂರ್ಣ ಕಾನೂನು ಬಾಹಿರ ವಾಗಿರುತ್ತದೆ.
ಅದರಿಂದ ಸಂದೇಶ ಗಳನ್ನು ಸ್ರಷ್ಟಿಸಿ ಜಾಲತಾಣದಲ್ಲಿ ತಪ್ಪು ಸಂದೇಶಗಳನ್ನು ರವಾನಿಸುತ್ತಿರುವ ವ್ಯಕ್ತಿ ಗಳನ್ನು ಪತ್ತೆ ಹಚ್ಚಿ ಸೂಕ್ತವಾದ ಕಾನೂನು ಕ್ರಮಕೈಗೊಳ್ಳಲು ದೂರಿನಲ್ಲಿ ತಿಳಿಸಿದ್ದಾರೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here