ಬಂಟ್ವಾಳ: ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ವತಿಯಿಂದ ತಾಲೂಕು ಮಟ್ಟದ ಕಾರ್ಮಿಕರ ಸಮಾವೇಶ ಬಿ.ಸಿ.ರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ಮಂಗಳವಾರ ಸಂಜೆ ನಡೆಯಿತು.
ಸಿಐಟಿಯು ಜಿಲ್ಲಾಧ್ಯಕ್ಷ ಬಾಲಕೃಷ್ಣ ಶೆಟ್ಟಿ ಮಾತನಾಡಿ, ಕೇಂದ್ರ ಸರಕಾರದ ಕಾರ್ಮಿಕ ವಿರೋಧಿ ನೀತಿಯಿಂದ ಕಳೆದ ೫ ವರ್ಷಗಳಿಂದ ಕಾರ್ಮಿಕರು ಸಂಕಷ್ಟದ ಜೀವನ ಅನುಭವಿಸುವಂತಾಗಿದೆ. ಯಾವುದೇ ಸರಕಾರವು ಕಾರ್ಮಿಕರ ಅಭ್ಯುದಯಕ್ಕೆ ಹಾಗೂ ಕಾರ್ಮಿಕರ ಭದ್ರತೆಗಾಗಿ ಸೂಕ್ತ ಯೋಜನೆ ರೂಪಿಸಿಲ್ಲ ಎಂದವರು, ಬೀಡಿ ಕಾರ್ಮಿಕರಿಗೆ, ಅಕ್ಷರ ದಾಸೋಹ, ಅಂಗನವಾಡಿ, ಕಟ್ಟಡ ಕಾರ್ಮಿಕರ ಹಿತ ರಕ್ಷಕರು ಯಾರು ಎಂಬುವುದು ಜನರಿಗೆ ತಿಳಿಸುವ ಮೂಲಕ ಕಾರ್ಮಿಕ ವರ್ಗಕ್ಕೆ ಪ್ರಜ್ಞೆ ಮೂಡಿಸಬೇಕಾಗಿದೆ ಎಂದು ಅವರು ಹೇಳಿದರು.
ರೈತ ಸಂಘದ ಕಾರ್ಯದರ್ಶಿ ಯಾದವ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ, ಕೇಂದ್ರ ಸರಕಾರವು ಕೃಷಿ ಭೂಮಿಯನ್ನು ವಿದೇಶಿ ಕಂಪೆನಿ ಹಾಗೂ ಕಾರ್ಪೋರೆಟ್‌ಗಳಿಗೆ ಮಾರಾಟ ಮಾಡಿದೆ. ರೈತರ ಸಾವಿರಾರು ರೂ. ಸಾಲವನ್ನು ಮನ್ನಾ ಮಾಡದ ಕೇಂದ್ರ ಸರಕಾರ ರೈತ ವಿರೋಧಿಯಾಗಿದೆ. ನಮ್ಮ ಬದುಕಿಗೂ ರಾಜಕೀಯಕ್ಕೂ ಸಂಬಂಧವಿದ್ದು, ಕಾರ್ಮಿಕ ವರ್ಗ ಜಾಗೃತರಾಗಬೇಕಿದೆ ಎಂದು ಹೇಳಿದರು.
ಸಿಐಟಿಯು ತಾಲೂಕು ಅಧ್ಯಕ್ಷ ಸಂಜೀವ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷ ಉದಯ ಕುಮಾರ್, ಅಕ್ಷರ ದಾಸೋಹದ ಅಧ್ಯಕ್ಷ ವಿನಯ ನಡುಮುಗೇರು, ಮುಖಂಡರಾದ ರಾಬರ್ಟ್, ಶಾಂತಾ ವಾಮದಪದವು, ಲೋಲಾಕ್ಷ, ವಾಸುಗಟ್ಟಿ ಉಪಸ್ಥಿತರಿದ್ದರು.
ಸಿಐಟಿಯು ತಾಲೂಕು ಕಾರ್ಯದರ್ಶಿ ರಾಮಣ್ಣ ವಿಟ್ಲ ಪ್ರಸ್ತಾವಿಸಿ, ಸ್ವಾಗತಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here