



ಬಂಟ್ವಾಳ: ಬುರೂಜ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ರಝಾನಗರ ಮೂಡುಪಡುಕೋಡಿ ಇಲ್ಲಿ ಪ್ರಸಕ್ತ ಸಾಲಿನ ಕರಾಟೆಯ ಬೆಲ್ಟ್ ಅಪ್ಗ್ರೇಡಿಂಗ್ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡ ಕರಾಟೆ ಪಟುಗಳಿಗೆ ತಾವು ಗಳಿಸಿದ ಪ್ರಶಸ್ತಿ ಪತ್ರ ಮತ್ತು ಬೆಲ್ಟ್ ನೀಡಿ ಗೌರವಿಸುವ ಕಾರ್ಯಕ್ರಮವನ್ನು ಕೈಗೊಳ್ಳಲಾಯಿತು.
ಉತ್ತೀರ್ಣಗೊಂಡ ಕರಾಟೆ ಪಟುಗಳು Yellow – 30, Orange – 19, Green – 16 , Blue – 9, Purple – 5 ಬೆಲ್ಟ್ ಗಳಿಸಿರುತ್ತಾರೆ. ಪರೀಕ್ಷೆಯು ಸಂಸ್ಥೆಯ ಕರಾಟೆ ಶಿಕ್ಷಕರಾದ ಜನಾಬ್ ನದೀಮ್ ಮತ್ತು ಜನಾಬ್ ಸರ್ಫ್ರಾಯ್ ಇವರ ನೇತೃತ್ವದಲ್ಲಿ ಆಯೋಜಿಸಲಾಯಿತು. ಉತ್ತೀರ್ಣಗೊಂಡ ವಿದ್ಯಾರ್ಥಿಗಳಿಗೆ ಶಾಲಾ ಸಂಚಾಲಕರಾದ ಜನಾಬ್ ಶೇಕ್ ರೆಹ್ಮತ್ತುಲ್ಲಾ ಮತ್ತು ಹೈಸ್ಕೂಲ್ ವಿಭಾಗದ ಮುಖ್ಯ ಶಿಕ್ಷಕಿಯಾದ ಜಯಶ್ರೀ ಸಿ.ಸಾಲ್ಯಾನ್ ಪ್ರಶಸ್ತಿ ಪತ್ರ ಮತ್ತು ಬೆಲ್ಟ್ ನೀಡಿ ಅಭಿನಂದಿಸಿದರು.





