


ಬಂಟ್ವಾಳ;ಚಿನ್ನದ ಪೇಟೆ ಬಂಟ್ವಾಳದ ನಂದನ ಹಿತ್ಲು ವಿನ ಶ್ರೀವೈದ್ಯನಾಥ ಅರಸು,ಜುಮಾದಿ ಬಂಟ ದೈವಸ್ಥಾನದ ಕಾಲಾವಧಿ ನೇಮೋತ್ಸವ ಎ.೧-೩ರವರೆಗೆ ನಡೆಯಲಿದೆ.ಈ ವರ್ಷ ವೈದ್ಯನಾಥ ದೈವಯಕ್ಕೆ ನೂತನ ಪಾಪೆ ಬಂಡಿಯ ಸಮರ್ಪಣೆಯು ಜರಗಲಿದೆ. ದೈವದ ಅಭಯದಂತೆ ಈಗಾಗಲೇ ಪಾಪೆಬಂಡಿಯ ನಿರ್ಮಾಣ ಕಾರ್ಯವುಪೂರ್ಣಗೊಂಡಿದ್ದು,ಮಾ.30 ಇದನ್ನುಅದ್ದೂರಿಯ ಮೆರವಣಿಗೆಯ ಮೂಲಕ ಕ್ಷೇತ್ರಕ್ಕೆ ತರಲಾಗುತ್ತದೆ.ಅಂದು ಸಂಜೆ ಬಿ.ಸಿ.ರೋಡಿನ ಪೊಳಲಿ ದ್ವಾ ಬಳಿಯಿಂದ ಹೊರಡುವ ಪಾಪೆ ಬಂಡಿಯ ಮೆರವಣಿಗೆ ಬಂಟ್ವಾಳ ಬೈಪಾಸ್ ರಸ್ತೆಯಾಗಿ ಬಂದು ಶ್ರೀಕ್ಷೇತ್ರವನ್ನು ತಲುಪಲಿದೆ ಎಂದು ಕ್ಷೇತ್ರದ ಆಡಳಿತ ಸಮಿತಿ ಅಧ್ಯಕ್ಷ ಗಣೇಶ್ ಸುವರ್ಣತುಂಬೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





