ಒಡಿಯೂರು: ವೃತ್ತಿಧರ್ಮ, ನಂಬಿಕೆಯಿಂದ ಕೂಡಿದ ವ್ಯವಹಾರ ಫಲಕಾರಿಯಾಗಿರುತ್ತದೆ. ಅರಿವು ಜಾಗೃತಗೊಂಡಾಗ ಆರೋಗ್ಯಪೂರ್ಣ ವ್ಯಕ್ತಿತ್ವ ನಿರ್‍ಮಾಣವಾಗುತ್ತದೆ. ಸೇವೆ ಮತ್ತು ವೃತ್ತಿ ಕರ್ತವ್ಯವಾದಾಗ ಸಮಾಜ ಕಟ್ಟಲು ಸಾಧ್ಯ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.
ಅವರು ಭಾನುವಾರ ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದಲ್ಲಿ ಒಡಿಯೂರು ಶ್ರೀ ಚ್ಯಾರಿಟೇಬಲ್ ಟ್ರಸ್ಟ್, ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್ ಸಂಚಾಲಿತ ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆ ಸಹಯೋಗದಲ್ಲಿ ವಿಟ್ಲ ರೋಟರಿ ಕ್ಲಬ್, ವಿಟ್ಲ ಜೇಸಿಐ, ಪುತ್ತೂರು ಇಂಡಿಯನ್ ಡೆಂಟಲ್ ಅಸೋಸಿಯೇಶನ್ ವತಿಯಿಂದ ಮಣಿಪಾಲ ಕಾಲೇಜು ಆಫ್ ಡೆಂಟಲ್ ಸೈನ್ಸಸ್ ಮಂಗಳೂರು ಮತ್ತು ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಶಾಲಿಟಿ ಕಣ್ಣಿನ ಆಸ್ಪತ್ರೆ ಮಂಗಳೂರು-ಉಡುಪಿ ಮತ್ತು ವಿಟ್ಲ ಪುಷ್ಪಕ್ ಹೆಲ್ತ್ ಕೇರ್ ಅವರು ಆಯೋಜಿಸಿದ ಉಚಿತ ದಂತ-ಕಣ್ಣು ಹಾಗೂ ಮಧುಮೇಹ ತಪಾಸಣೆ ಮತ್ತು ಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.
ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆ ನಿರ್ದೇಶಕ ಕಿರಣ್, ವಿಟ್ಲ ರೋಟರಿ ಕ್ಲಬ್ ಅಧ್ಯಕ್ಷ ಡಾ.ಚರಣ್ ಕಜೆ, ಮಾಜಿ ಅಧ್ಯಕ್ಷ ಸಂಜೀವ ಪೂಜಾರಿ, ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ಸಂಚಾಲಕ ಗಣಪತಿ ಭಟ್ ಸೇರಾಜೆ, ಪ್ರಸಾದ್ ನೇತ್ರಾಲಯದ ವೈದ್ಯಾಧಿಕಾರಿ ಡಾ.ಕೃಸ್, ಕೆಎಂಸಿ ಆಸ್ಪತ್ರೆಯ ಡಾ. ಕಾವೇರಿ ಚಂಗಪ್ಪ ಉಪಸ್ಥಿತರಿದ್ದರು.
ವಿಟ್ಲ ಪುಷ್ಪಕ್ ಹೆಲ್ತ್ ಕೇರ್ ವೈದ್ಯಾಧಿಕಾರಿ ಡಾ.ವಿ.ಕೆ.ಹೆಗ್ಡೆ ಪ್ರಸ್ತಾವಿಸಿ ಸ್ವಾಗತಿಸಿದರು. ವಿಟ್ಲ ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ಭಾಸ್ಕರ್ ಶೆಟ್ಟಿ ನಿರೂಪಿಸಿದರು. ವಿಟ್ಲ ಜೇಸಿಐ ಅಧ್ಯಕ್ಷ ಬಾಲಕೃಷ್ಣ ವಿಟ್ಲ ವಂದಿಸಿದರು. ರೇಣುಕಾ ರೈ ಆಶಯಗೀತೆ ಹಾಡಿದರು. 100 ಮಂದಿ ಕಣ್ಣು, 48 ಮಂದಿ ದಂತ, 89 ಮಂದಿ ಮಧುಮೇಹ ತಪಾಸಣೆ ನಡೆಸಿ, ಈ ಶಿಬಿರದ ಪ್ರಯೋಜನ ಪಡೆದುಕೊಂಡರು.

 

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here