


ಬಂಟ್ವಾಳ: ಅಕ್ಕರಂಗಡಿ ಜುಮಾ ಮಸೀದಿ ಗೆ ಸಂಬಂಧಪಟ್ಟ ಜಮೀನನ್ನು ಅನೆಕ್ಷರ್ ಜಿ ಪ್ರಕಾರ ಸರ್ವೆ ಕಾರ್ಯ ಮಾಡುವ ವೇಳೆ ಎಸ್.ಐ.ಗಳಿಬ್ಬರ ಮೇಲೆ ಗುಂಪಿನಿಂದ ಹಲ್ಲೆ ಗೆ ಯತ್ನ ಒರ್ವನ ಬಂಧನ ಹಾಗೂ ಲಾಠಿ ಚಾರ್ಜ್ ಮಾಡಿದ ಘಟನೆ ನರಿಕೊಂಬು ಗ್ರಾಮ ಪಂಚಾಯತ್ ವ್ಯಾಪ್ತಿಯ ಪಾಣೆಮಂಗಳೂರು ಎಂಬಲ್ಲಿ ನಡೆದಿದೆ.
ಬಂಟ್ವಾಳ ನಗರ ಠಾಣಾ ಪೋಲೀಸ್ ಸಬ್ ಇನ್ಸ್ಪೆಕ್ಟರ್ ಚಂದ್ರಶೇಖರ್ ಹಾಗೂ ಗ್ರಾಮಾಂತರ ಎಸ್.ಐ.ಪ್ರಸನ್ನ ಅವರ ಮೇಲೆ ಜಮೀನಿನ ಅಳತೆಯ ವೇಳೆ ಹಲ್ಲೆ ಗೆ ಮುಂದಾದಾಗ ಗುಂಪಿನ ಮೇಲೆ ಲಾಠಿ ಪ್ರಹಾರ ನಡೆಸಿ ದ್ದಾರೆ.
ಕೆಲ ಹೊತ್ತು ಇಲ್ಲಿ ಗೊಂದಲದ ಪರಿಸ್ಥಿತಿ ಕೂಡಾ ನಿರ್ಮಾಣ ವಾಗಿತ್ತು.
ಜಮೀನಿನ ಅಳತೆಯ ವೇಳೆ ಕಾನೂನು ಸುವ್ಯವಸ್ಥೆ ಗೆ ಭಂಗ ಬರುತ್ತದೆ ಸಾದ್ಯತೆ ಗಳಿವೆ ಎಂಬ ಕಾರಣ ಕ್ಕಾಗಿ ಹೆಚ್ಚುವರಿ ಪೋಲೀಸರು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದರು.
ಅಳತೆಯ ವೇಳೆ ಬಂಟ್ವಾಳ ಎ.ಎಸ್.ಪಿ.ಸೈದುಲು ಅಡಾವತ್ , ಬಂಟ್ವಾಳ ವ್ರತ್ತ ನಿರೀಕ್ಷಕ ಶರಣ್ ಗೌಡ, ಹಾಗೂ ನಗರ ಠಾಣಾ ಎಸ್. ಐ.ಚಂದ್ರಶೇಖರ್, ಗ್ರಾಮಾಂತರ ಎಸ್.ಐ.ಪ್ರಸನ್ನ, ಟ್ರಾಫಿಕ್ ಎಸ್.ಐ.ಮಂಜುನಾಥ ಅವರು ಸ್ಥಳದಲ್ಲಿದ್ದು ಹೆಚ್ಚಿನ ಕ್ರಮ ಕೈಗೊಂಡಿದ್ದರು.





