ಬಂಟ್ವಾಳ : ಮತದಾನ ಪ್ರತಿಯೊಬ್ಬ ಪ್ರಜೆಯ ಹಕ್ಕು.. ಈ ಹಕ್ಕನ್ನು ಸಮರ್ಥವಾಗಿ ಚಲಾಯಿಸಬೇಕು, ಮತದಾನದಿಂದ ಯಾರೂ ಕೂಡಾ ವಂಚಿತರಾಗಬಾರದು ಎಂಬುದು ಜಿಲ್ಲಾಡಳಿತದ ಉದ್ದೇಶ ಮತ್ತು ಪ್ರತಿ ಗ್ರಾಮ ಪಂಚಾಯತ್ ವ್ಯಾಪ್ತಿಯಯಲ್ಲೂ ಮತದಾನ ಜಾಗ್ರತಿ ಕಾರ್ಯಕ್ರಮ ಮಾಡಲಾಗುತ್ತಿದೆ.
ಆದರೆ ಹತ್ತು ವರ್ಷಗಳಿಂದ ತಮ್ಮ ಭರವಸೆಗಳನ್ನು ಈಡೇರಿಸದ ಜನಪ್ರತಿನಿಧಿಗಳ ಮೇಲಿನ ಕೋಪದಿಂದ ನಾಯಿಲದಲ್ಲಿ ಲೋಕಸಭಾ ಚುನಾವಣೆಗೆ ಮತದಾನ ಬಹಿಷ್ಕಾರ ಮಾಡುತ್ತೇವೆ ಎಂದು ‌ಬ್ಯಾನರ್ ಹಾಕಿದ್ದಾರೆ.

ನೀರು ಕೊಡುತ್ತೇವೆ, ರಸ್ತೆ ಮಾಡಿಕೊಡುತ್ತೇವೆ ಹೀಗೆ ನಾನಾ ಭರವಸೆಗಳು, ಅದು ಚುನಾವಣೆಯ ಸಂಧರ್ಭದಲ್ಲಿ ಮತನೀಡಬೇಕು ಎಂಬ ಉದ್ದೇಶದಿಂದ.
ಚುನಾವಣೆ ಮುಗಿದ ಬಳಿಕ ಮಾತ್ರ ಭರವಸೆಗಳಿಗೆ ತಿಲಾಂಜಲಿ ನೀಡಿ, ಸಮಸ್ಯೆ ಗಳು ಬಗೆಹರಿಯದೆ ಹಾಗೆ ಉಳಿದು ಬಿಡುತ್ತದೆ.
ನಮಗೆ ನೀಡಿದ ಭರವಸೆಗಳನ್ನು ಮೊದಲು ಪೂರೈಸಿ ಇಲ್ಲದಿದ್ದರೆ ಮತದಾನ ಮಾಡುವುದಿಲ್ಲ ಎಂಬ ಕೂಗು ಬಂಟ್ವಾಳ ತಾಲೂಕಿನಲ್ಲಿ ಪ್ರಥಮವಾಗಿ ಕೇಳಿ ಬಂದಿದೆ.
ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮ ಪಂಚಾಯತ್ ವ್ಯಾಪ್ತಿಯ ಬೋರುಗುಡ್ಡೆ ಎಂಬಲ್ಲಿ ಮತದಾನ ಬಹಿಷ್ಕಾರ ಮಾಡುತ್ತೇವೆ ಎಂಬ ಬ್ಯಾನರ್ ಒಂದು ಹಾಕಲಾಗಿದೆ.
ನಾಯಿಲದಿಂದ ಬೊರುಗುಡ್ಡೆ ಸಂಪರ್ಕಿಸುವ ಈ ರಸ್ತೆ ಡಾಮರು ಕಾಣದೆ ಹೊಂಡಗುಂಡಿಗಳಿಂದ ತುಂಬಿದ್ದು ರಸ್ತೆ ಯಲ್ಲಿ ಸಂಚಾರ ಮಾಡಲು ಸಾಧ್ಯವಿಲ್ಲ .
ಸುಮಾರು ಹತ್ತು ವರ್ಷಗಳಿಂದ ಬೋರುಗುಡ್ಡೆ ರಸ್ತೆಯನ್ನು ರಿಪೇರಿ ಮಾಡಿಕೊಡುವಂತೆ ಒತ್ತಾಯಿಸುತ್ತಲೆ ಬಂದಿದ್ದರು.
ಆದರೆ ಚುನಾವಣೆಯ ಸಂಧರ್ಭದಲ್ಲಿ ರಾಜಕಾರಣಿಗಳು ಮನೆ ಬಾಗಿಲಿಗೆ ಬಂದು ಭರವಸೆ ನೀಡುತ್ತಾರೆ. ಚುನಾವಣೆ ನಡೆದ ಬಳಿಕ ಇತ್ತ ತಲೆ ಕೂಡಾ ಹಾಕುವುದಿಲ್ಲ ಎಂಬುದು ಇವರ ಆರೋಪ.
ಸುಮಾರು 2.50 ಕಿಮಿ ರಸ್ತೆಯು ತೀರಾ ಹದಗೆಟ್ಟಿದ್ದು ಈ ಭಾಗದಲ್ಲಿ ಸುಮಾರು 100 ಕ್ಕೂ ಅಧಿಕ ಮನೆಗಳಿವೆ.
ಇಲ್ಲಿ ಯಾರಿಗಾದರೂ ಅನಾರೋಗ್ಯದ ಸಮಸ್ಯೆ ಉಂಟಾದರೆ ರಿಕ್ಷಾ ಅಥವಾ ಇತರ ಯಾವೊಂದು ವಾಹನಗಳು ಈ ರಸ್ತೆಯಲ್ಲಿ ಬರುವುದಿಲ್ಲ ಎಂಬುದು ಇಲ್ಲಿಯವರ ಆರೋಪ.

ಚುನಾವಣೆ ಬಂದಾಗ ಜನಪ್ರತಿನಿಧಿಗಳು ಮತದಾರರ ಬಳಿ ತೆರಳಿ ಭರವಸೆಗಳನ್ನು ನೀಡುವುದು ಮಾಮೂಲಿ ಬಳಿಕ ಮರೆತು ಬಿಡುವ ರಾಜಕಾರಣಿಗಳಿಗೆ ಬುದ್ದಿ ಕಲಿಸುವ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಂಡಿದ್ದೇವೆ ಎಂದು ಇಲ್ಲಿಯವರು ಹೇಳುತ್ತಾರೆ.
ಒಟು ಕೇಳಲು ಬರುವಾಗ ಅಮ್ಮ ಎಂದು ಕರೆಯುವರು ಮತ್ತೆ ಎಲ್ಲಿ ಹೋಗುತ್ತಾರೆ ಎಂಬುದು ಪ್ರಶ್ನೆ. ಸಮಸ್ಯೆ ಯ ಬಗ್ಗೆ ಜನಪ್ರತಿನಿದಿಗಳಲ್ಲಿ ಹೇಳಿದಾಗ ನಿಮ್ಮ ಒಟು ಸಿಕ್ಕಿಲ್ಲ ಎಂದು ಹೇಳುತ್ತಾರೆ.
ಪ್ರತಿ ಚುನಾವಣೆಯ ಸಂದರ್ಭದಲ್ಲಿ ತೆಂಗಿನಕಾಯಿ ಒಡೆದು ರಸ್ತೆಯ ಭರವಸೆ ನೀಡುತ್ತಾರೆ ಎಂದು ಆರೋಪ ವ್ಯಕ್ತಪಡಿಸಿದ್ದಾರೆ.
ಸಂಸದ , ಶಾಸಕ ಸಹಿತ ಜಿಲ್ಲಾಧಿಕಾರಿ ಯವರಿಗೆ ಈ ಬಗ್ಗೆ ಲಿಖಿತವಾದ ದೂರು ನೀಡಿದರಾದರೂ ಯಾರು ಲೆಕ್ಕಕ್ಕೆ ತೆಗೆದುಕೊಂಡಿಲ್ಲ.
ಯಾವೊಂದು ಮೂಲಭೂತ ಸೌಕರ್ಯಗಳು ಈ ಭಾಗಕ್ಕೆ ಸಿಕ್ಕಿಲ್ಲ ಎಂಬ ಆರೋಪ ಸ್ಥಳೀಯರದ್ದು.
ಒಟ್ಟಿನಲ್ಲಿ ಸಂಬಂಧಿಸಿದ ಅಧಿಕಾರಿಗಳು ಸ್ಥಳಕ್ಕೆ ಬೇಟಿ ನೀಡಿ ನಮ್ಮ ಭರವಸೆ ಗಳನ್ನು ಪೂರೈಸಿದಿದ್ದರೆ ಈ ನಿರ್ಧಾರದಿಂದ ಹಿಂದಕ್ಕೆ ಸರಿಯುವುದಿಲ್ಲ ಎಂಬ ಮಾತನ್ನು ಹೇಳಿದ್ದಾರೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here