


ಬಂಟ್ವಾಳ: ಅಕ್ಕರಂಗಡಿ ಜುಮಾ ಮಸೀದಿಗೆ ಸಂಬಂಧ ಪಟ್ಟ ಜಮೀನಿನನ್ನು ಅನೆಕ್ಷರ್ ಜಿ ರಂತೆ ಮಾ23 ಸರ್ವೆ ನಡೆಸಲು ನ್ಯಾಯಾಲಯದ ಅದೇಶದಂತೆ ಜಿಲ್ಲಾಧಿಕಾರಿ ನ್ಯಾಯಾಲಯ ಸಂಬಂಧಿಸಿದ ಇಲಾಖೆ ಗೆ ಅದೇಶ ನೀಡಿದೆ.
ಅಕ್ಕರಂಗಡಿ ಜುಮಾ ಮಸೀದಿಗೆ ಸಂಬಂಧ ಪಟ್ಟ ನರಿಕೊಂಬು ಗ್ರಾಮದ ಸ.ನಂ.50/1 ರ 1.49 ಎಕ್ರೆ ಜಮೀನಿನ ನ್ನು ANNEXURE G ಪ್ರಕಾರ ಅಳತೆ ಮಾಡಿ ವಾಸ್ತವಾಂಶ ವರದಿ ನೀಡುವಂತೆ ಸಂಬಂಧಿಸಿದ ಇಲಾಖೆ ಗೆ ಉಚ್ಚನ್ಯಾಯಾಲಯದ ಆದೇಶದಂತೆ ಜಿಲ್ಲಾಧಿಕಾರಿ ನ್ಯಾಯಲಯ ಅದೇಶ ನೀಡಿದೆ.
ಮಾ.23 ರಂದು ಅಕ್ಕರಂಗಡಿ ಜುಮಾ ಮಸೀದಿ ಗೆ ಸಂಬಂದಪಟ್ಟ ಸ್ಥಳದ ಸರ್ವೆ ಕಾರ್ಯವನ್ನು ಉಲ್ಲೇಖಿತ ಆದೇಶ ದಂತೆ ನಡೆಸಲು ನೋಟೀಸ್ ನೀಡಲಾಗಿದೆ .
ನಗರ ಠಾಣೆ ಗೆ ಮನವಿ: ನರಿಕೊಂಬು ಗ್ರಾಮದ ಅಕ್ಕರಂಗಡಿ ಜುಮಾ ಮಸೀದಿ ಜಮೀನಿನ ವಿವಾದ ಅಳತೆಯ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಬಂದೋಬಸ್ತಿಗಾಗಿ ಮನವಿ ಅರ್ಜಿಯನ್ನು ಅಕ್ಕರಂಗಡಿ ಜುಮಾ ಮಸೀದಿ ಯ ಪ್ರಮುಖರು ನೀಡಿದ್ದಾರೆ.
ಈ ಜಮೀನಿಗೆ ಸಂಬಂಧಿಸಿದಂತೆ ಹಿಂದೆಯೂ ಅಳತೆ ಕಾರ್ಯ ಗಳು ನಡೆದಿದ್ದು ಅ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆಗೆ ಭಂಗ ತರುವ ಕೆಲಸ ಎದುರುದಾರರು ಮಾಡಿದ್ದರು, ಅ ದೂರು ಕೂಡ ದಾಖಲಾಗಿತ್ತು. ಹಾಗಾಗಿ ಮಾ23 ರಂದು ಅಳತೆಯ ಸಂದರ್ಭದಲ್ಲಿ ಅವರು ಕಾನೂನು ಸುವ್ಯವಸ್ಥೆ ಗೆ ದಕ್ಕೆ ತರುವ ಬಗ್ಗೆ ಅನುಮಾನವಿದ್ದು ಸೂಕ್ತ ಬಂದೋಬಸ್ತ್ ಮಾಡುವಂತೆ ಅಕ್ಕರಂಗಡಿ ಜುಮಾ ಮಸೀದಿಯವರು ಕೋರಿದ್ದಾರೆ.





