Thursday, October 26, 2023

ಕಾಂಕ್ರೀಟ್ ರಸ್ತೆ ಅಗೆದವರ ಮೇಲೆ ಕಠಿಣ ಕ್ರಮಕೈಗೊಳ್ಳಲು ಸಾರ್ವಜನಿಕರ ಆಗ್ರಹ

Must read

ಬಂಟ್ವಾಳ: ಇಲ್ಲಿನ ಪುರಸಭಾ ವ್ಯಾಪ್ತಿಯ ರೆಂಗೇಲು ಕಾಂಕ್ರೀಟ್ ರಸ್ತೆಯನ್ನು ನೀರಿನ ಪೈಪ್ ಅಳವಡಿಕೆಯ ಉದ್ದೇಶದಿಂದ ಸುಮಾರು ಅರ್ಧ ಕಿಲೋಮೀಟರ್ ಅಗೆದು ಹಾಕಿದ್ದು ಸಾರ್ವಜನಿಕರ ಆಕ್ರೋಶ ಕ್ಕೆ ಗುರಿಯಾಗಿದೆ.
ಮೆಲ್ಕಾರ್ ನಿಂದ ಬೊಂಡಾಲ ಕ್ಕೆ ಸಂಪರ್ಕ ಕಲ್ಪಿಸುವ ರೆಂಗೇಲು ರಸ್ತೆಯ ಕಾಂಕ್ರೀಟ್ ನ್ನು ಅಗೆದು ಪೈಪ್ ಅಳವಡಿಸುವ ಕಾರ್ಯ ಕ್ಕೆ ಸಾರ್ವಜನಿಕ ರು ಆಕ್ಷೇಪ ವ್ಯಕ್ತಪಡಿಸಿದರು.

ಬಹು ಗ್ರಾಮ ಕುಡಿಯುವ ನೀರಿನ ಯೋಜನೆಯ ಉದ್ದೇಶದಿಂದ ಕಾಂಕ್ರೀಟ್ ರಸ್ತೆಯ ನ್ನು ಮಧ್ಯೆಭಾಗದಲ್ಲಿ ಅಗೆದು ರಸ್ತೆಯಿಲ್ಲದಂತಾಗಿ ಮಾಡಿದ್ದಾರೆ.
ಕಳೆದ ಕೆಲ ವರ್ಷಗಳ ಹಿಂದೆ ಸಾಕಷ್ಟು ಹೋರಾಟದ ಮೂಲಕ‌ ಕೆಟ್ಟುಹೊಗಿದ್ದ ರಸ್ತೆಗೆ ಕಾಂಕ್ರೀಟ್ ಹಾಕಲಾಗಿತ್ತು, ಆದರೆ ಏಕಾಏಕಿ ಯಾವುದೇ ಮುನ್ಸೂಚನೆ ಇಲ್ಲದೆ ರಸ್ತೆಯ ಬಗ್ಗೆ ಒಂದು ಚೂರು ವ್ಯಾಮೋಹ ಇಲ್ಲದೆ , ಇಲ್ಲಿನ ಜನರ ಸಮಸ್ಯೆ ಅರಿಯದೆ ರಸ್ತೆಯ ನ್ನು ಅಗೆಯುವುದು ಯಾವ ನ್ಯಾಯ ಎಂದು ದೂರಿಕೊಂಡಿದ್ದಾರೆ.
ರಸ್ತೆಯ ನ್ನು ಅಗೆಯದೆ ಬದಲಿ ವ್ಯವಸ್ಥೆ ಮಾಡುವ ಮೂಲಕ ಸಮಸ್ಯೆ ಬಗೆಹರಿಸಲು ಇಲ್ಲಿನ ಸ್ಥಳೀಯ ಜನಪ್ರತಿನಿಧಿಗಳು ಮುತುವರ್ಜಿವಹಿಸಬೇಕಿತ್ತು.
ಕುಡಿಯುವ ನೀರಿನ ನೆಪದಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ ಈ ರಸ್ತೆಯ ನ್ನು ಹಾಳುಮಾಡಿದವರ ವಿರುದ್ದ ಕಠಿಣ ಕ್ರಮಕೈಗೊಳ್ಳಲು ಸಾಮಾಜಿಕ ಹೋರಾಟಗಾರ, ಈ ರಸ್ತೆ ಉಳಿಸಿ ಹೋರಾಟ ಗಾರ ಸಂಘದ ಅಧ್ಯಕ್ಷ ಶೇಖರ್ ರೆಂಗೇಲು ಒತ್ತಾಯಿಸಿದ್ದಾರೆ.

More articles

Latest article