ಬಂಟ್ವಾಳ: ಬಹುಭಾಷಾ ಚಿತ್ರನಟಿ, ಬಿಜೆಪಿ ನಾಯಕಿ ಮಾಳವಿಕಾ ಅವಿನಾಶ್ ಅವರು ಸೋಮವಾರ ಪೊಳಲಿ ಶ್ರೀರಾಜರಾಜೇಶ್ವರಿ ದೇವಳಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಬ್ರಹ್ಮಕಲಶ ಸಮಿತಿ ಅಧ್ಯಕ್ಷ, ಶಾಸಕ ಯು.ರಾಜೇಶ್ ನಾಯ್ಕ್ ಮತ್ತಿತರರು ಮಾಳಾವಿಕ ರನ್ನು ಸ್ವಾಗತಿಸಿದರು. ದೇವಳದ ಅರ್ಚಕರು ಪ್ರಾರ್ಥಿಸಿ ಪ್ರಸಾದ,ಸ್ಮರಣಿಕೆ ನೀಡಿ ಕ್ಷೇತ್ರದ ಇತಿಹಾಸವನ್ನು ತಿಳಿಸಿದರು.ಕ್ಷೇತ್ರದ ಮರದ ಕೆತ್ತನೆ,ವೈಭವ ಹಾಗೂ ಉಗ್ರಾಣವನ್ನು  ವೀಕ್ಷೀಸಿ ಮೆಚ್ಚುಗೆ ವ್ಯಕ್ತಪಡಿಸಿದರು.  ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು,     ನಾನು ಪೊಳಲಿಯ ಅಮ್ಮನಿಗೆ ಪ್ರಾರ್ಥನೆ ಸಲ್ಲಿಸಲು ಬಂದಿದ್ದೇನೆ. ನಾನೀಗಲೇ ಒಂದು ಪಕ್ಷದಲ್ಲಿ ಗುರುತಿಸಿಕೊಂಡಿದ್ದು, ಬೇರೆಯವರನ್ನು ಬೆಂಬಲಿಸುವುದಿಲ್ಲ  ನನ್ನಪಕ್ಷವನ್ನು ಮಾತ್ರ ಬೆಂಬಲಿಸುವುದಾಗಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಎಲ್ಲವನ್ನೂ ವರಿಷ್ಠರ ನಿರ್ಧಾರಕ್ಕೆ ಬಿಟ್ಟದ್ದು , ನಾನೊಬ್ಬಳು ಕಲಾವಿದೆ ನಿಜ. ಆದರೆ ನಾನೊಂದು ಪಕ್ಷದ ನಿಷ್ಠಾವಂತ ಕಾರ್ಯಕರ್ತೆ ಎಂದು ತಿಳಿಸಿದರು. ಶಾಸಕ ರಾಜೇಶ್  ನಾಯ್ಕ್ .ಯು, ಸುಲೋಚನಾ ಜಿ.ಕೆ.ಭಟ್, ದೇವದಾಸ ಶೆಟ್ಟಿ, ಉದಯಕುಮಾರ್ ರಾವ್ ಮೊದಲಾದವರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here