






ಪುಣಚ ಮನೆಲ ಕ್ರಿಸ್ತರಾಜ ಇಗರ್ಜಿಯ ವತಿಯಿಂದ ಮಹಿಳಾ ದಿವಸವನ್ನು ಆಚರಿಸಲಾಯಿತು. ಕಾರ್ಯಕ್ರಮವನ್ನು ಧರ್ಮಗುರುಗಳಾದ ಪಾವ್ಲ್ ಪ್ರಕಾಶ್ ಡಿ’ಸೋಜ ದೀಪ ಬೆಳಗಿಸಿ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷರಾದ ಅಂಬ್ರೋಸ್ ಮೊಂತೇರೊ, ಐವನ್ ಸಿಕ್ವೇರಾ, ಸ್ತ್ರೀ ಸಂಘಟನೆ ಅಧ್ಯಕ್ಷೆ ವೆಲಂತಿನ ಡಿ’ಸೋಜ, ಸೀ| ಸಿಂತಿಯಾ ಡಿ’ಸೋಜ ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಪುತ್ತೂರಿನ ನ್ಯಾಯವಾದಿ ಸಿಲ್ವಿಯಾ ಡಿ’ಸೋಜ ಮಹಿಳೆಯರ ವಿವಿಧ ಹಕ್ಕುಗಳ ಬಗ್ಗೆ, ಜನನ, ವಿವಾಹ ನೊಂದಣಿ ಬಗ್ಗೆ ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ವಿಶೇಷ ಸಾಧನೆಗೈದ ಮಹಿಳೆಯರನ್ನು ಗೌರವಿಸಲಾಯಿತು. ಕ್ಯಾಥೊಲಿಕ್ ಸಭಾ ಅಧ್ಯಕ್ಷ ಕ್ಸೇವಿಯಾರ್ ಡಿ’ಸೋಜ ಸ್ವಾಗತಿಸಿದರು. ಸಿರಿಲ್ ಫೆರಾವೋ ವಂದಿಸಿದರು. ಎವರೆಸ್ಟ್ ಮೊಂತೇರೋ ಕಾರ್ಯಕ್ರಮ ನಿರೂಪಿಸಿದರು.





