ಬಂಟ್ವಾಳ: ಮೈಸೂರು ಜಿಲ್ಲಾ ಅಪರಾಧ ವಿಭಾಗದ (ಡಿ.ಸಿ.ಬಿ) ಪೋಲೀಸ್ ಇನ್ಸ್ ಪೆಕ್ಟರ್ ಆಗಿ ಖಡಕ್ ಅಫೀಸರ್ ಬಂಟ್ವಾಳ ವ್ರತ್ತ ನಿರೀಕ್ಷಕ ಟಿ.ಡಿ.ನಾಗರಾಜ್ ಅವರು ಇಂದು ಅಧಿಕಾರ ಸ್ವೀಕರಿಸಿದರು.
ಬಂಟ್ವಾಳ ವ್ರತ್ತ ನಿರೀಕ್ಷಕ ಟಿ.ಡಿ.ನಾಗರಾಜ್ ಅವರಿಗೆ ಲೋಕಸಭಾ ಚುನಾವಣೆ ಯ ಹಿನ್ನೆಲೆಯಲ್ಲಿ ಮೈಸೂರು ಡಿ.ಸಿ.ಬಿ.ಗೆ ವರ್ಗಾವಣೆ ಅದೇಶ ಬಂದಿತ್ತು. ಈ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ ಬಂಟ್ವಾಳ ವ್ರತ್ತ ನಿರೀಕ್ಷಕ ಕಚೇರಿ ಯಿಂದ ರೀಲೀವ್ ಗೊಂಡ ನಾಗರಾಜ್ ಅವರು ಸಂಜೆ ಮೈಸೂರು ಡಿ.ಸಿ.ಬಿ ಕಚೇರಿಯಲ್ಲಿ ಚಾರ್ಜ್ ತೆಗೆದುಕೊಂಡರು.
ಕಳೆದ ವಿಧಾನಸಭಾ ಚುನಾವಣಾ ಸಂಧರ್ಭದಲ್ಲಿ ಕೋಮು ಗಲಭೆ ಯಿಂದ ಅಶಾಂತಿ ಉಂಟಾಗಿದ್ದ ಬಂಟ್ವಾಳಕ್ಕೆ ಇವರು ಬಹುಬೇಡಿಕೆಯ ಮೂಲಕ ಅಗಮಿಸಿದ್ದರು.
ಇವರು ಬಂದ ಬಳಿಕ ಯಾವೊಂದು ಕೊಮು ಗಲಭೆಯೂ ಇಲ್ಲಿ ನಡೆಯದಂತೆ ಕಾನೂನು ಸುವ್ಯವಸ್ಥೆ ಕಾಪಾಡಿಕೊಂಡು ಬಂದಿದ್ದರು.
ವಿವಿಧ ಕಡೆಗಳಲ್ಲಿ ಉತ್ತಮ ಅಧಿಕಾರಿ ಯಾಗಿ ಕರ್ತವ್ಯ ನಿರ್ವಹಿಸಿದ ಇವರಿಗೆ ಸ್ಟ್ರಾಂಗ್ ಆಪೀಸರ್ ಎಂಬ ಹೆಸರಿತ್ತು.
ಅದೇ ಹೆಸರನ್ನು ಬಂಟ್ವಾಳ ದಲ್ಲೂ ಉಳಿಸಿ ಜನಮೆಚ್ಚುಗೆ ಪಡೆದಿದ್ದರು.
ತೆರವಾದ ಬಂಟ್ವಾಳ ಸರ್ಕಲ್ ಅಫೀಸಿಗೆ ಯಾರು ಬರುತ್ತಾರೆ ಎಂಬುದನ್ನು ಕಾದು ನೋಡಬೇಕು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here