

ಬಂಟ್ವಾಳ: ಮನೆ, ಹೋಟೇಲ್ ಗಳ ಕೊಳಚೆ ನೀರು ಹರಿದು ಹೋಗದೆ ಚರಂಡಿಯ ಲ್ಲಿ ತುಂಬಿ ರಸ್ತೆಯ ಮೇಲೆ ಬಂದಿರುವ ಘಟನೆ ಬಿಸಿರೋಡ್ ಸಮೀಪದ ಕೈಕಂಬದಲ್ಲಿ ನಡೆದಿದೆ.
ಕೈಕಂಬದಲ್ಲಿರು ಪ್ಲಾಟ್ ಹಾಗೂ ಹೋಟೆಲ್ ಗಳ ಕೊಳಚೆ ನೀರು ಸರಾಗವಾಗಿ ಹರಿಯುವ ಬದಲು ಚರಂಡಿಯಲ್ಲಿ ತುಂಬಿ ಕಳೆದ ಮೂರು ದಿನಗಳಿಂದ ರಸ್ತೆಯಲ್ಲಿ ಹರಿಯುತ್ತಿರುವ ದ್ರಶ್ಯ ಕಂಡು ಬಂದಿದೆ.
ಸಾಂಕ್ರಾಮಿಕ ರೋಗದಿಂದ ಭಯಬೀತರಾದ ಸ್ಥಳೀಯ ರು ನೇರವಾಗಿ ಜಿಲ್ಲಾಧಿಕಾರಿ ಯವರಿಗೆ ಮೌಖಿಕವಾಗಿ ದೂರುನೀಡಿದ್ದಾರೆ.
ಜಿಲ್ಲಾಧಿಕಾರಿ ಯವರಿಗೆ ದೂರು ನೀಡಿದ ಬಳಿಕ ಸ್ಥಳೀಯ ಪುರಸಭಾ ಇಲಾಖೆ ಸಿಬ್ಬಂದಿ ಗಳನ್ನು ಸ್ಥಳ ಪರಿಶೀಲನೆ ಗೆ ಕಳುಹಿಸಿಕೊಟ್ಟಿದೆ.
ಇಲ್ಲಿನ ನಿವಾಸಿಗಳು ಮೂರುದಿನಗಳಿಂದ ಕಾಡಿಬೇಡಿದರೂ ಕಿಮ್ಮತ್ತಿನ ಪ್ರಯೋಜನ ಪಡೆಯಲು ಸಾಧ್ಯ ವಾಗಿಲ್ಲ. ಕೊನೆಗೆ ಜಿಲ್ಲಾಧಿಕಾರಿ ಯವರಿಗೆ ದೂರು ನೀಡಿದ ಬಳಿಕವಷ್ಟೆ ಪುರಸಭೆ ಕಾರ್ಯಪ್ರವತ್ತವಾಗಿದೆ , ತಾತ್ಕಾಲಿಕ ಪರಿಹಾರಕ್ಕೆ ಮುಂದಾಗಿದೆ.
ಈ ರಸ್ತೆಯ ಬದಿಯಲ್ಲಿ ಅನೇಕ ಅಂಗಡಿಗಳು ಮನೆಗಳು ಇವೆ, ಅಲ್ಲೇ ಹತ್ತಿ ರದಲ್ಲಿ ಪ್ರಾರ್ಥನಾ ಮಂದಿರ ಕೂಡಾ ಇದೆ, ರಸ್ತೆಯ ಮೂಲಕ ಶಾಲಾ ಮಕ್ಕಳು ನಡೆದು ಕೊಂಡು ಹೋಗುತ್ತಾರೆ, ಹಾಗಾಗಿ ಸಾಂಕ್ರಾಮಿಕ ರೋಗ ದ ಭಯ ಇವರಿಗೆ ಕಾಡುತ್ತಿದೆ.
ಸಮಸ್ಯೆ ಪರಿಹಾರ ಮಾಡಿ ಎಂದು ಅನೇಕ ಬಾರಿ ಸ್ಥಳೀಯ ಇಲಾಖೆಗೆ ಮನವಿ ಮಾಡಿದ್ದಾರೆ.
ಚರಂಡಿ ಬಂದ್ ಮಾಡಲಾಗಿತ್ತು: ಇದೇ ಭಾಗದಲ್ಲಿ ಕೆಲ ತಿಂಗಳ ಹಿಂದೆ ಕೊಳಚೆ ನೀರು ಸಮಸ್ಯೆ ಯ ಹಿನ್ನೆಲೆಯಲ್ಲಿ ಶಾಸಕ ರಾಜೇಶ್ ನಾಯಕ್ ಅವರು ಸ್ಥಳಕ್ಕೆ ಬೇಟಿ ನೀಡಿ ಸಮಸ್ಯೆ ಪರಿಹಾರಕ್ಕೆ ಪುರಸಭೆಯ ಅಧಿಕಾರಿಗಳಿಗೆ ಸೂಚಿಸಿದ್ದರು.
ಮಳೆ ನೀರು ಹರಿದುಹೋಗುವ ಚರಂಡಿಯ ಲ್ಲಿ ಇಲ್ಲಿನ ದೊಡ್ಡದೊಡ್ಡ ಪ್ಲಾಟ್ ಗಳ ಕೊಳಚೆ ನೀರು ಹರಿದು ಹೋಗುತ್ತಿದೆ, ಇದರಿಂದ ಸ್ಥಳೀಯ ನಿವಾಸಿಗಳಿಗೆ ಮಲೇರಿಯಾ ಜ್ವರ ಸಹಿತ ಚರ್ಮ ಸಂಬಂಧಿಸಿದ ರೋಗಗಳಿಂದ ಬಳಲುತ್ತಿದ್ದರು.
ಮನೆಯಂಗಳದಲ್ಲಿ ರು ಬಾವಿಗೂ ಈ ಕೊಳಚೆ ನೀರು ಇಳಿಯುತ್ತಿದ್ದು ಕುಡಿಯಲು ಅಸಾಧ್ಯ ವಾಗುತ್ತಿತ್ತು. ಹಾಗಾಗಿ ಈ ಸಮಸ್ಯೆ ಪರಿಹಾರಕ್ಕೆ ಪುರಸಭೆಗೆ ಲಿಖಿತ ವಾಗಿ ದೂರು ನೀಡಿದ್ದರು ಯಾವುದೇ ಸ್ಪಂದನೆ ನೀಡದ ಹಿನ್ನೆಲೆಯಲ್ಲಿ ಇಲ್ಲಿನ ನಿವಾಸಿಗಳು ಶಾಸಕ ರಾಜೇಶ್ ನಾಯಕ್ ಅವರಿಗೆ ದೂರು ನೀಡಿದ್ದರು. ಈ ದೂರಿನ ಹಿನ್ನೆಲೆಯಲ್ಲಿ ಅಧಿಕಾರಿಗಳ ಜೊತೆ ಸ್ಥಳಕ್ಕೆ ಭೇಟಿ ನೀಡಿದ ಅವರು ಸಮಸ್ಯೆ ಪರಿಹಾರಕ್ಕೆ ಕ್ರಮಕೈಗೊಳ್ಳಲು ಸೂಚಿಸಿದ್ದರು.
ಅದರಂತೆ ಮುಖ್ಯಾಧಿಕಾರಿ ರೇಖಾ ಶೆಟ್ಟಿ ಅಲ್ಲಿನ ಪ್ಲಾಟ್ ಮಾಲಕರಿಗೆ ನೋಟೀಸ್ ನೀಡಿ ಪ್ಲಾಟ್ ಗಳ ನೀರು ಮಳೆ ನೀರು ಹರಿದುಹೋಗುವ ಚರಂಡಿಯ ಲ್ಲಿ ಹರಿದು ಹೋಗದಂತೆ ಅವರ ಜಾಗದಲ್ಲಿ ಇಂಗು ಗುಂಡಿಗಳನ್ನು ಕೊರೆಯುವಂತೆ ತಿಳಿಸಿದ್ದರು.
ಆದರೆ ಯಾರೂ ಕೂಡಾ ನೋಟೀಸ್ ಗೆ ಜಗ್ಗದಾಗ ಸ್ವತ: ಮುಖ್ಯಾಧಿಕಾರಿ ಅವರೇ ಸ್ಥಳ ದಲ್ಲಿ ನಿಂತು ಪ್ಲಾಟ್ ಗಳಿಂದ ನೀರು ಹೊರಗೆ ಬರದಂತೆ ಚರಂಡಿಗಳನ್ನು ಮುಚ್ಚಿಸಿದ್ದರು, ಅದರೆ ಅದಾದ ಕೆಲವೇ ದಿನಗಳಲ್ಲಿ ಕಟ್ಟಿದ ಕಲ್ಲುಗಳನ್ನು ದೂಡಿ ಹಾಕಿ ನೀರು ಹಿಂದನ ಮಾದರಿಯಲ್ಲಿ ಹರಿದುಹೋಗುತ್ತಿದೆ ಎಂದು ಸ್ಥಳೀಯ ರು ದೂರುತ್ತಿದ್ದಾರೆ. ಅವರ ಮೇಲೆ ಕ್ರಿಮಿನಲ್ ಕೇಸು ದಾಖಲು ಮಾಡಲಾಗುವುದು ಎಂದು ಹೇಳಿ ಹೋದ ಅಧಿಕಾರಿಗಳು ಅಬಳಿಕ ಸ್ಥಳ ಕ್ಕೆ ಬಂದೇ ಇಲ್ಲ ಎಂದು ಸ್ಥಳೀಯ ನಿವಾಸಿ ಸಮಾದ್ ಕೈಕಂಬ ತಿಳಿಸಿದ್ದಾರೆ.








