ಬಂಟ್ವಾಳ:ಬಂಟ್ವಾಳ ಸಮಾಜ ಸೇವಾ ಸಹಕಾರಿ ಬ್ಯಾಂಕ್ ನಿಯಮಿತ, ಇದರ ಸಂಸ್ಥಾಪಕ ರಾದ ಸಮಾಜ ರತ್ನ , ಸ್ವಾತಂತ್ರ್ಯ ಯೋಧ ಡಾ! ಅಮ್ಮೆಂಬಳ ಬಾಳಪ್ಪ ಇವರ 97 ನೇ ಜನ್ಮ ದಿನಾಚರಣೆಯ ಅಂಗವಾಗಿ ಫೆ.24 ಆದಿತ್ಯವಾರ ಸಮಾಜ ಸೇವಾ ಸಹಕಾರಿ ಸಂಭ್ರಮ-2019 ಕಾರ್ಯ ಕ್ರಮ ಬೈಪಾಸು ಸಮಾಜ ಸಹಕಾರಿ ಭವನ ದಲ್ಲಿ 9.30 ಕ್ಕೆ ನಡೆಯಲಿದೆ ಎಂದು ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ಬೋಜ ಮೂಲ್ಯ ಹೇಳಿದರು.
ಅವರು ಬ್ಯಾಂಕ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಕಾರ್ಯಕ್ರಮವನ್ನು ಶ್ರೀ ಧಾಮ ಮಾಣಿಲದ ಶ್ರೀ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಉದ್ಘಾಟಿಸಲಿದ್ದಾರೆ.
ಶ್ರೀ ಕ್ಷೇತ್ರ ಮುಳಿಯ ಶ್ರೀ ಶ್ರೀ ಶ್ರೀ ಶಿವಾನಂದ ಸರಸ್ವತಿ ಸ್ವಾಮೀಜಿ ಉಪಸ್ಥಿತಿ ಇರುವರು.
ಶಾಸಕ ರಾಜೇಶ್ ನಾಯಕ್ ಸಹಿತ ಅನೇಕ ಗಣ್ಯರು ಕಾರ್ಯಕ್ರಮ ದಲ್ಲಿ ಪಾಲು ಪಡೆಯುತ್ತಾರೆ.
ಈ ಕಾರ್ಯ ಕ್ರಮದಲ್ಲಿ ಆರೋಗ್ಯ ತಪಾಸಣಾ ಶಿಬಿರ , ಯೋಗ ಮುದ್ರಾ ಶಿಬಿರ, ಸ್ವ ಸಹಾಯ ಸಂಘಗಳ ಸಮಾವೇಶ, ವಿಧ್ಯಾರ್ಥಿ ವೇತನ ವಿತರಣೆ, ಸಾಂಸ್ಕೃತಿಕ ವೈಭವ ಕಾರ್ಯಕ್ರಮ ಗಳು ನಡೆಯಲಿದೆ.
ಬ್ಯಾಂಕ್ ಸುಮಾರು 143 ಸ್ಬಸಹಾಯ ಸಂಘಗಳು ಹೊಂದಿದ್ದು , ಸುಮಾರು 1314 ಅಮೂಲ್ಯ ಸ್ವಸಹಾಯ ಸದಸ್ಯ ರಿದ್ದು ಅಮೂಲ್ಯ ಸ್ವಸಹಾಯ ಸಹಾಯ ಸಂಘಗಳ ಸಮಾವೇಶ ಜರಗಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಅಧ್ಯಕ್ಷ ಸುರೇಶ್ ಕುಲಾಲ್ , ಜನಾರ್ದನ ಕುಲಾಲ್, ವಿಶ್ವನಾಥ್, ವಿನಾಯಕ, ಅರುಣ್ ಕುಮಾರ್, ಪದ್ಮನಾಭ ವಿಟ್ಲ, ವಿಜಯ್ ಕುಮಾರ್, ಎಂ.ವಾಮನ ಟೈಲರ್, ವಿಜಯಲಕ್ಷ್ಮಿ, ಜಯಂತಿ, ವಿದ್ಯಾ ಉಪಸ್ಥಿತರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here