ಬಂಟ್ವಾಳ:  ಕಾಶ್ಮೀರದ ಪುಲ್ವಾಮದಲ್ಲಿ ಉಗ್ರಗಾಮಿಗಳ ಧಾಳಿಯಿಂದ ವೀರ ಮರಣ ಹೊಂದಿದ ವೀರ ಯೋಧರಿಗೆ ವಿಶ್ವ ಹಿಂದು ಪರಿಷತ್ ಮತ್ತು ಬಜರಂಗ ದಳ ಹಾಗೂ ಶ್ರೀಕೃಷ್ಣ ಮಂದಿರ ಅಮ್ಟೂರು ವತಿಯಿಂದ ನುಡಿ ನಮನಮನ ಕಾರ್‍ಯಕ್ರಮ ನಡೆಯಿತು. ಕಾರ್‍ಯಕ್ರಮದ ಪ್ರಾರಂಭದಲ್ಲಿ ಭಾರತಮಾತೆಯ ಭಾವಚಿತ್ರದ ಮುಂಭಾಗದಲ್ಲಿ ಎಲ್ಲಾ ಕಾರ್‍ಯಕರ್ತರು ಹಣತೆ ಹಿಡಿದು ವೀರ ಯೋಧರಿಗೆ ಶೃದ್ಧಾಂಜಲಿ ಸಲ್ಲಿಸಲಾಯಿತು.
ಕಾರ್‍ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಎಸ್.ಸಿ.ಮೋರ್ಚಾ ಅಧ್ಯಕ್ಷರಾದ ದಿನೇಶ್ ಅಮ್ಟೂರು ಮಾತನಾಡಿ ಇಂದಿನ ದಿನಗಳು ನಮಗೆ ಸವಾಲಿನ ದಿನಗಳಾಗಿವೆ. ದುರಂತವೆಂದರೆ ನಮ್ಮ ದೇಶದಲ್ಲಿದ್ದುಕೊಂಡು ನಮ್ಮ ದೇಶದ ಅನ್ನ ತಿಂದು ನಮಗೆ ದ್ರೋಹ ಬಗೆಯವುದು. ಕಾಶ್ಮೀರದಲ್ಲಿ ನಿತ್ಯವೂ ನರಕಯಾತನೆ ಅಲ್ಲದೇ ಅಲ್ಲಿನ ಸ್ಥಳೀಯರೇ ಉಗ್ರರಿಗೆ ಬೆಂಬಲ ನೀಡುವುದು ನೋವಿನ ಸಂಗತಿಯಾಗಿದೆ. ಕಾಶ್ಮೀರ ಮಾತ್ರವಲ್ಲದೇ ನಮ್ಮ ಸುತ್ತು ಮುತ್ತಲಿನಲ್ಲಿಯೂ ಇಂತಹ ಘಟನೆಗಳು ಕಂಡು ಬಂದಲ್ಲಿ ನಾವು ವಿರೋಧಿಸಬೇಕಾಗಿದೆ. ನಾವೂ ಯಾವಾಗಲೂ ಎಚ್ಚರಿಕೆಯಿಂದ ಒಗ್ಗಟ್ಟಾಗಿದ್ದು ದೇಶ ರಕ್ಷಣೆಗೆ ಒಂದೂಡಬೇಕು ಎಂದರು.
ವಿಟ್ಲ ತಾಲೂಕು ಬಜರಂಗ ದಳ ಸಂಚಾಲಕ ಅಕ್ಷಯ್ ರಜಪೂತ್ ಮಾತನಾಡಿ ದೇಶದ ತುತ್ತ ತುದಿಯ ಸಮಸ್ಯೆ ಎಂದುಕೊಂಡು ಕುಳಿತರೆ ನಮ್ಮಲ್ಲಿಗೂ ಬರಬಹುದು. ಕಾಶ್ಮೀರ ಎಂಬುದು ನಮ್ಮ ದೇಶದ ಅವಿಭಾಜ್ಯ ಅಂಗ ಇದನ್ನು ಕಳೆದುಕೊಳ್ಳಲು ಸಾಧ್ಯವಿಲ್ಲ. ಉಗ್ರರು ಎಲ್ಲೇ ಇರಲಿ ಅದರ ವಿರುದ್ದ ಧ್ವನಿಯೆತ್ತಲೇ ಬೇಕು ಎಂದು ಹೇಳಿದರು.
ಕಾರ್‍ಯಕ್ರಮದಲ್ಲಿ ಪಂಚಾಯತ್ ಸದಸ್ಯರುಗಳಾದ ಗೋಪಾಲ ಪೂಜಾರಿ ಮತ್ತು ಗೋಪಾಲಕೃಷ್ಣ ಪೂವಳ, ಬಜರಂಗ ದಳ ಅಮ್ಟೂರು ಘಟಕದ ಸಂಚಾಲಕ ಕೌಶಿಲ್ ಶೆಟ್ಟಿ, ಮನೀಶ್, ಮಂದಿರದ ಕಾರ್‍ಯದರ್ಶಿಯಾದ ಶ್ರೀಧರ ಸುವರ್ಣ, ಕುಶಾಲಪ್ಪ ಅಮ್ಟೂರು, ಮೋಹನ್ ಆಚಾರ್ಯ, ಮಂದಿರದ ಕಾರ್ಯಕರ್ತರು, ಬಜರಂಗದಳದ ಸದಸ್ಯರುಗಳು ಉಪಸ್ಥಿತರಿದ್ದರು. ಗೋಪಾಲ ಬಲ್ಯಾಯ ಇವರು ಕಾರ್‍ಯಕ್ರಮವನ್ನು ನಿರ್ವಹಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here