ಬಂಟ್ವಾಳ: ಚಿನ್ನದ ಪೇಟೆಯೆಂದೆ ಹೆಸರು ಪಡೆದಿರುವ ಬಂಟ್ವಾಳ ನಗರದ ಹೃದಯಭಾಗದಲ್ಲಿರುವ ನಂದನಹಿತ್ಲು ಶ್ರೀ ವೈದ್ಯನಾಥ, ಅರಸು ಜುಮಾದಿ ಬಂಟ ದೈವಸ್ಥಾನದ ಕಾಲಾವಧಿ ನೇಮೋತ್ಸವ ಹಾಗೂ ಶ್ರೀ ವೈದ್ಯನಾಥ ದೈವದ ಪಾಪೆಬಂಡಿ ಸಮರ್ಪಣೆಯ ಅಮಂತ್ರಣ ಪತ್ರವನ್ನು ಶ್ರೀ ಕ್ಷೇತ್ರದ ಅವರಣದಲ್ಲಿ ರವಿವಾರ ಬಿಡುಗಡೆಗೊಳಿಸಲಾಯಿತು.

ಶ್ರೀ ಕ್ಷೇತ್ರದ ಆಡಳಿತ ಮಂಡಳಿಯ ಗೌರವಾಧ್ಯಕ್ಷ ಸೇಸಪ್ಪ ಕೋಟ್ಯಾನ್ ಪಚ್ಚಿನಡ್ಕ ಅವರು ಅಮಂತ್ರಣ ಪತ್ರದ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಬಾಳಿಗಾ ಮನೆತನದ ಸುಧೀರ್ ಬಾಳಿಗಾ ಬಂಟ್ವಾಳ, ಆಡಳಿತ ಮಂಡಳಿಯ ಅಧ್ಯಕ್ಷ ಗಣೇಶ್ ಸುವರ್ಣ ತುಂಬೆ, ಕಾರ್ಯದರ್ಶಿ ಪ್ರಕಾಶ್ ಅಂಚನ್ , ಕೋಶಾಧಿಕಾರಿ ಲೋಕೇಶ್ ಬಂಗೇರ ಮಾಣಿ, ವಿಶ್ವನಾಥಪೂಜಾರಿ ಪೊನ್ನಂಗಿಲಗುತ್ತು, ಸಂಜೀವಪೂಜಾರಿ ಗಾಣದಪಡ್ಪು, ಲೋಕನಾಥ ಪೂಜಾರಿ ಬಡೆಕೊಟ್ಟು, ವೆಂಕಪ್ಪ ಪೂಜಾರಿ ಬಂಟ್ವಾಳ, ಗೋಪಾಲ ಸುವರ್ಣ, ಪುರಸಭಾ ಸದಸ್ಯೆ ದೇವಕಿ, ಶಶಿಧರ್ ಶೆಟ್ಟಿ, ದೇವದಾಸ, ಬಾಬು ಶೆಟ್ಟಿ, ಸೋಮಪ್ಪ ಪೂಜಾರಿ ಹೊಸ್ಮಾರ್ ಮೊದಲಾದವರು ಉಪಸ್ಥಿತರಿದ್ದರು.

ಪೂರ್ವ ಸಿದ್ದತಾ ಸಭೆ:  ಬಳಿಕ ಪಾಪೆ ಬಂಡಿ ಸಮರ್ಪಣೆಯ ಹಿನ್ನಲೆಯಲ್ಲಿ ಪೂರ್ವಸಿದ್ದತಾ ಸಭೆಯು ನಡೆಯಿತು. ಎ.1ರಿಂದ 3 ರ ವರೆಗೆ ಶ್ರೀ ಕ್ಷೇತ್ರದ ಕಾಲಾವಧಿ ಉತ್ಸವ ನಡೆಯಲಿದ್ದು, ಮಾ.30 ರಂದು ಪಾಪೆ ಬಂಡಿಯನ್ನು ಅದ್ದೂರಿಯ ಮೆರವಣಿಗೆಯಲ್ಲಿ ಶ್ರೀಕ್ಷೇತ್ರಕ್ಕೆ ತರಲು ನಿರ್ಧರಿಸಲಾಯಿತು.ಮಾ,30 ರಂದು ಸಂಜೆ ಬಿ.ಸಿ.ರೋಡಿನ ಕೈಕಂಬ ಪೊಳಲಿ ದ್ವಾರದಿಂದ ಆಕರ್ಷಕ ಶೋಭಾಯಾತ್ರೆಯ ಮೂಲಕ ಹೊರಟು ಬಂಟ್ವಾಳ ಬೈಪಾಸ್ ರಸ್ತೆ , ಪೇಟೆಯಾಗಿ ಶ್ರೀಕ್ಷೇತ್ರಕ್ಕೆ ತಲುಪುದು, ಎ.1ರಂದು ಧಾರ್ಮಿಕ ವಿಧಿ ವಿಧಾನ ಪೂರೈಸಿ ಪಾಪೆ ಬಂಡಿಯನ್ನು ದೈವಕ್ಕೆ ಸಮರ್ಪಣೆಯ ಕಾರ್ಯ ನಡೆಯುವುದು ಎಂದು ಆಡಳಿತ ಮಂಡಳಿ ಅಧ್ಯಕ್ಷ ಗಣೇಶ್ ಸುವರ್ಣ ಸಭೆಗೆ ಮಾಹಿತಿ ನೀಡಿದರು. ಕಾರ್ಯದರ್ಶಿ ಪ್ರಕಾಶ್ ಅಂಚನ್ ಸ್ವಾಗತಿಸಿ, ವಂದಿಸಿದರು.

ದೈವ ಇಚ್ಚೆಯಂತೆ ಪಾಪೆಬಂಡಿ: ಶ್ರೀ ಕ್ಷೇತ್ರದ ದೈವದ ಅಪ್ಪಣೆಯಂತೆ ಪೇಟೆ ಸವಾರಿಗೆ ವಿಶೇಷವಾದ ಪಾಪೆ ಬಂಡಿ ನಿರ್ಮಿಸಲಾಗುತ್ತಿದೆ. ಸುಮಾರು 21ಲಕ್ಷ ರೂ. ವೆಚ್ಚದಲ್ಲಿ ಈ ಪಾಪೆ ಬಂಡೊಯನ್ನು ನಿರ್ಮಿಸಲಾಗುತ್ತಿದೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here