ಬಂಟ್ವಾಳ, ಫೆ. ೧೫: ಜಮ್ಮು-ಕಾಶ್ಮೀರದ ಪುಲ್ವಾಮದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ
ಸಿದ್ದಕಟ್ಟೆಯ ಸ್ವಾಮಿ ವಿವೇಕಾನಂದ ಸರ್ಕಲ್ ನಲ್ಲಿ   ದೇಶಾಭಿಮಾನಿಗಳು ಸಿದ್ದಕಟ್ಟೆ ಅವರ ವತಿಯಿಂದ ರಾತ್ರಿ 7.00 ಗಂಟೆಗೆ  ಭಾಷ್ಪಾಂಜಲಿ ಕಾರ್ಯಕ್ರಮ ನಡೆಯಿತು.
 ಘಟನೆಯನ್ನು ಖಂಡಿಸಿ ಮೌನಪ್ರಾರ್ಥನೆ ಸಲ್ಲಿಸಲಾಯಿತು. ‌ಬಳಿಕ ವೀರಯೋಧರ ಭಾವಚಿತ್ರ ಕ್ಕೆ ಪುಷ್ಪಾಂರ್ಚನೆ ಮಾಡಿದರು.‌
ಪ್ರಾಸ್ತಾವಿಕವಾಗಿ ಮಾತನಾಡಿದ ತಾ.ಪಂ. ಸದಸ್ಯ ಪ್ರಭಾಕರ ಪ್ರಭು ,  ರಾಷ್ಟ್ರ ದಲ್ಲಿದ್ದುಕೊಂಡು ರಾಷ್ಟ್ರ ದ್ರೋಹ ಮಾಡುವ ಸಂಘಟನೆಗಳಿಗೆ ವ್ಯಕ್ತಿಗಳಿಗೆ ಸಹಾಯಮಾಡುವುದು ಸರಿಯಲ್ಲ, ಅಂತಹವರಿಗೆ ತಕ್ಕ ಶಿಕ್ಷೆಯಾಗುವವರೆಗೆ ನಾವು ಒಂದಾಗಿ ಹೋರಾಡಬೇಕಾಗಿದೆ ಎಂದರು.
ದೇಶ ಕಾಯುವ ಸೈನಿಕರಿಗೆ ಆತ್ಮ ಸ್ಥೈರ್ಯ ನೀಡುವ ಉದ್ದೇಶದಿಂದ ಇಂತಹ ಭಾಷ್ಫಾಂಜಲಿ ಕಾರ್ಯಕ್ರಮ ಮಾಡುತ್ತೇವೆ.
ಭಯೋತ್ಪಾದನೆ ನಿರ್ಮೂಲನ ಮಾಡಲು ವಿರೋಧ ಪಕ್ಷಗಳು ಕೂಡಾ ಕೈ ಜೋಡಿಸಿದೆ. ನಾವು ನಮ್ಮ ಪ್ರತಿ ಗ್ರಾಮದಲ್ಲಿ ರುವ ಭಯೋತ್ಪಾದನೆ ನಿರ್ಮೂಲನೆ ಮಾಡಲು ಜಾತಿ ಮತ ರಾಜಕೀಯ ಬಿಟ್ಟು ಒಂದಾಗೋಣ ಎಂದು ಅವರು ತಿಳಿಸಿದರು.
ಬಳಿಕ ಮಾತನಾಡಿದ ಡಾ! ಪ್ರಭಾಚಂದ್ರ
ಜೈನ್ ಅವರು ಮಾತನಾಡಿ ವೈರಿ ರಾಷ್ಟ್ರ ದ ಜೊತೆ ಸೇಡು ತೀರಿಸಿಕೊಳ್ಳಲು ಭಾರತೀಯ ರಾದ ಎಲ್ಲರೂ ಒಟ್ಟಾಗಬೇಕು ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.
ನಿವ್ರತ್ತ ಶಿಕ್ಷಕ ನಾರಾಯಣ ನಾಯಕ್ ಕರ್ಪೆ
ಮಾತನಾಡಿ
ಮೋಸದಿಂದ ಕೊಲ್ಲುವುದು ಪಾಪ, ವೈರಿಗಳು ಇಂತಹ ಕ್ರತ್ಯ ಮಾಡಿದ್ದಾರೆ,  ಹಾಗಾಗಿ ವೈರಿ ರಾಷ್ಟ್ರ ದ ಜೊತೆ ಹೊರಾಡುವ ಶಕ್ತಿ ನಮ್ಮ ಸೈನಿಕರಿಕಗೆ ಸಿಗಲಿ ಎಂದು ಹೇಳಿದರು.
ನಿವ್ರತ್ತ ಸೈನಿಕ ಮೋಹನ್ ಕುಲಾಲ್  ಮಾತನಾಡಿ ಅಭಿವೃದ್ಧಿ ಹೊಂದುತ್ತಿರುವ ದೇಶವನ್ನು ಬಗ್ಗು ಬಡಿಯಲು ಶತ್ರು ರಾಷ್ಟ್ರ ದ ಉಗ್ರರು ಭಾರತದ ಸೈನಿಕರ ಮೇಲೆ ದಾಳಿಮಾಡಿದ್ದಾರೆ.
ನಕಾರಾತ್ಮಕ ಮಾತು ಬಿಟ್ಟು ಸಕಾರಾತ್ಮಕ ವಾಗಿ ಮಾತನಾಡಿ , ಸೈನಿಕರಿಗೆ ಆತ್ಮ ಸ್ಥೈರ್ಯ ನೀಡುವ ಮೂಲಕ ರಾಷ್ಟ್ರ ರಕ್ಷಣೆ ಗೆ ಮುಂದಾಗಬೇಕು ಎಂದು ಅವರು ಹೇಳಿದರು.
ನಿವ್ರತ್ತ ಸೈನಿಕ
ಕೇಶವ ಪೂಜಾರಿ ಮಾತನಾಡಿ
ದಾಳಿಗೆ ಒಳಗಾಗಿ ಸಾವನ್ನಪ್ಪಿದ ಯೋದರ
ಕುಟುಂಬ ಸಂಸಾರಕ್ಕೆ ಅಗುವ ನಷ್ಟ ಮತ್ತು ನೋವು ತೊಂದರೆ ಅದು ಅವರಿಗೆ ಮಾತ್ರ ಗೊತ್ತು ಬಿಟ್ಟು ಉಳಿದವರಿಗೆ ಅ ನೋವು ಗೊತ್ತಾಗಲು ಸಾಧ್ಯವಿಲ್ಲ ಎಂದರು.
ದೇಶ ಮುಖ್ಯವೇ ಹೊರತು ಪಾರ್ಟಿ ಮುಖ್ಯವಲ್ಲ, ಹಾಗಾಗಿ ರಾಜಕೀಯ ಬಿಟ್ಟು ದೇಶದ ರಕ್ಷಣೆ ಯಲ್ಲಿ ಒಂದಾಗೋಣ.
ದೇಶ ರಕ್ಷಣೆಯ ಯುವ ಸೈನಿಕರ ಯಾವ ಕಷ್ಟದಲ್ಲಿ ಅಲ್ಲಿ ಕೆಲಸ ಮಾಡುತ್ತಾರೆ ಎಂಬುದು ನೋಡಿದವರಿಗೆ ಮಾತ್ರ ಗೊತ್ತು ಎಂದರು.
ನಮ್ಮ ಸೈನಿಕರನ್ನು ಕೊಂದ ಉಗ್ರ ಸಂಘಟನೆಯ ಮೂಲವನ್ನು ನಿರ್ನಾಮ ಮಾಡುವಂತೆ ವಿನಂತಿ ಮಾಡಿದರು.
ಡಾ! ಯೋಗೀಶ್ ಕೈರೋಡಿ ಮಾತನಾಡಿ ದೇಶಕ್ಕಾಗಿ ಜೀವನವನ್ನು ತ್ಯಾಗಮಾಡಿದ  ವೀರ ಯೋಧ ರ ಕುಟುಂಬಕ್ಕೆ ನೋವು ತಡೆಯುವ ಶಕ್ತಿ ದೇವರು ಕರುಣಿಸಲಿ ಎಂದರು.
 ಮೌನವೇ ಒಂದು ಶಕ್ತಿಯಾಗಿ ಭಯೋತ್ಪಾದಕ ಮನಸ್ಸು ಸಾಯಬೇಕಾಗಿದೆ .
ಈ ಸಂದರ್ಭದಲ್ಲಿ ಸಿದ್ದಕಟ್ಟೆ ಹಾಲು ಉತ್ಪಾದಕ ರ ಸಹಕಾರ ಸಂಘದ ಕಾರ್ಯದರ್ಶಿ ಕೆ.ರತ್ನಾಕುಮಾರ್ ಚೌಟ, ಗ್ರಾ.ಪಂ.ಉಪಾಧ್ಯಕ್ಷ ಸತೀಶ್ ಪೂಜಾರಿ  ಹಲಕ್ಕೆ, ಗ್ರಾ.ಪಂ.ಸದಸ್ಯ ರಾದ
ದೇವಪ್ಪ ಕರ್ಕೇರ, ಸುರೇಶ್ ಕುಲಾಲ್ , ಕೆ. ಮಯ್ಯದಿ, ಮಾದವ ಶೆಟ್ಟಿಗಾರ್, ಎಸ್.ಪಿ.ಶ್ರೀದರ್  ಕ್ರಷಿಕರಾದ ಶಿವಾನಂದ ರೈ, ಉದ್ಯಮಿ ದಿನೇಶ್ ಶೆಟ್ಟಿಗಾರ್, ಮೈಕಲ್ ಡಿ.ಕೋಸ್ತಾ, ಉಪನ್ಯಾಸ ಕ ಶ್ರೀನಪ್ಪ ಎನ್,  ಪ್ರಮುಖರಾದ ಸೀತಾರಾಮ ಶೆಟ್ಟಿ, ಉಮೇಶ್ ಗೌಡ ಮಂಚಕಲ್ಲು , ಅಶೋಕ್ ಆಚಾರ್ಯ, ಲಕ್ಮೀನಾರಾಯಣ ಆಚಾರ್ಯ, ಲೋಕಯ್ಯ ಗಾಡಿ‌ಪಲ್ಕೆ, ಸಂತೋಷ್ ‌ಕುಮಾರ್ ಚೌಟ ಕೊಯಿಲ, ಗೋಪಾಲ ಗೌಡ ಕೋರಿಯಾರ್, ಚಂದ್ರಶೇಖರ್ ಕರ್ಪೆ, ಅಲ್ತಾಪ್ ಗಾಡಿ ಪಲ್ಕೆ , ರೋನಾಲ್ಡ್ ಮೋರಾಸ್ , ರಾಜೇಶ್ ಶೆಟ್ಟಿ ಕೊಲೆರೊಟ್ಟೋ, ಸೀತಾರಾಮ ಶೆಟ್ಟಿ ಅಂಗರಕುಮೇರು, ಜೋಕಿಂ ಪಿಂಟೋ, ರಾಮಕ್ರಷ್ಣ ನಾಯಕ್ ಕಿನ್ನಾಜೆ, ನವೀನ್ ಪೂಜಾರಿ ಕರ್ಪೆ,
ಪಿಡಿಒ ಗಣೇಶ್ ಶೆಟ್ಟಿ, ಉದ್ಯಮಿ‌ಗಳಾದ ಹೇಮಚಂದ್ರ ಗೌಡ, ಪ್ರಶಾಂತ್ ಶೆಟ್ಟಿ ಬಾಕಿಯಾರ್ ಕೋಡಿ, ವರ್ಕಾಡಿ ವಲಯ  ರಿಕ್ಷಾ ಚಾಲಕರ ಸಂಘದ ಅಧ್ಯಕ್ಷ ಯಶೋಧರ ಗೌಡ ಕಲ್ಪನೆ, ಕರ್ಪೆ ವಲಯ ರಿಕ್ಷಾ ಚಾಲಕರ ಘದ ಅಧ್ಯಕ್ಷ  ತಿಮ್ಮಯ್ಯ ಮತ್ತಿತರ ರು ಹಾಜರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here