ಬಂಟ್ವಾಳ: ಪ್ರತಿ ವ್ಯಕ್ತಿಯಲ್ಲೂ ಸ್ವಾಭಿಮಾನ ಎನ್ನುವುದು ಇರಬೇಕು. ಅದು ವೈಯ್ಯಕ್ತಿಕವಾಗಿದ್ದು ನಂತರ ಸಾಮುದಾಯಕ ಸ್ವಾಭಿಮಾನವಾಗಿ ಮುಂದುವರಿದು ನಂತರ ದೇಶದ ಅಭಿಮಾನವಾಗಿ ಹೃದಯದಲ್ಲೂ ಸ್ಥಾಪಿತವಾಗಿರುತ್ತದೆ. ಈ ರೀತಿಯ ಅಭಿಮಾನ, ದೈರ್ಯ ಸ್ಥರ್ಯವುಳ್ಳವ ಮಾತ್ರ ದೇಶ ಕಾಯುವ ಸೈನಿಕನಾಗಲು ಸಾದ್ಯ. ಯಾವುದೇ ನಾಗರಿಕನೂ ಇಂದು ಸ್ವತಂತ್ರವಾಗಿ ನೆಮ್ಮದಿಯಿಂದ ಬದುಕುತ್ತಿದ್ದಾನೆ ಎಂದರೆ ಅದಕ್ಕೆ ಮೂಲ ಕಾರಣ ಸೈನಿಕರು ಎಂದು ಆರ್ಮಿ ರಿಕ್ರೂಟ್‌ಮೆಂಟ್ ಆಫೀಸ್ ಮಂಗಳೂರಿನ ನಿರ್ದೇಶಕರಾದ ಸೇನಾ ಮೆಡಲ್ ಪ್ರಶಸ್ತಿ ಪುರಸ್ಕೃತ ಕರ್ನಲ್‌ರಾಜ್ ಮನ್ನಾರ್ ಹೇಳಿದರು.
ಅವರು ಬಂಟ್ವಾಳದ ಶ್ರೀ ವೆಂಕಟರಮಣ ಸ್ವಾವಿ ಕಾಲೇಜಿನ ಎನ್.ಸಿ.ಸಿ ಘಟಕದ 50ರ ಸಂಭ್ರಮದ ಮಿಲಿಟರಿ ಏವರ್‌ನೆಸ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು ಸೈನ್ಯವನ್ನು ಸೇರಲು ಬೇಕಾದ ಅರ್ಹತೆಗಳು ಮತ್ತು ಸೈನಿಕ ವಲಯದಲ್ಲಿರುವ ವಿವಿಧ ಗ್ರೇಡ್‌ಗಳು ಹಾಗೂ ಸೈನಿಕರಿಗೆ ಸಿಗುವ ವಿವಿಧ ಸೌಲಭ್ಯಗಳನ್ನು ಪ್ರಾತ್ಯಕ್ಷಿಕೆಯ ಮೂಲಕ ವಿವರಿಸಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಇಂಡಿಯನ್ ಆರ್‍ಮಿಯಿಂದ ನಿವೃತ ಕ್ಯಾಪ್ಟನ್ ಡಾ| ಕೆ .ಜಿ. ಶೆಣೈಯವರು ಕಾರ್ಯಕ್ರಮ ಕುರಿತು ಪ್ರಾಸ್ತಾವಿಕ ನುಡಿಗಳೊಂದಿಗೆ ಅತಿಥಿಗಳ ಪರಿಚಯ ಮಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ| ಪಾಂಡುರಂಗ ನಾಯಕ್ ಮಾತನಾಡಿ ದೇಶ ಕಾಯುವ ಸೈನಿಕವಲಯದ ಮಾಹಿತಿ ತಿಳಿದುಕೊಳ್ಳವಲ್ಲಿ ಈ ಕಾರ್ಯಕ್ರಮ ಅರ್ಥಪೂರ್ಣವಾದದ್ದು ಎಂದರು .ನಂತರ ಸೈನಿಕರ ಕ್ಷೇತ್ರದ ವಿವಿಧ ಮೆಡಲ್‌ಗಳ ಪ್ರದರ್ಶನವನ್ನು ಉದ್ಘಾಟಿಸಲಾಯಿತು .
ಕಾಲೇಜಿನ ಉಪಪ್ರಾಂಶುಪಾಲರಾದ ಡಾ| ಎಚ್ ಆರ್ ಸುಜಾತ ಸ್ವಾಗತಿಸಿದರು. ಕಾರ್ಯಕ್ರಮ ಸಂಯೋಜಕ ಎನ್.ಸಿ.ಸಿ ಅಧಿಕಾರಿ ಲೆ| ಸುಂದರ್ ವಂದಿಸಿದರು. ಎನ್.ಸಿ.ಸಿ. ಕೆಡೆಟ್  ಕವನ ಕೆ. ನಾಯಕ್ ಕಾರ್ಯಕ್ರಮ ನಿರೂಪಿಸಿದರು.
ತಾಲೂಕಿನ ವಿವಿಧ ಶಾಲಾ ವಿಧ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಯೋಜನ ಪಡೆದರು. ಕುಮಾರಿ ಮಾನಸ ಪ್ರಾರ್ಥಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here