Wednesday, April 10, 2024

’ಧರ್ಮ ಪಥದ ಮೂಲಕ ಜೀವನ ಪರಮಪದ’-ಒಡಿಯೂರು ಶ್ರೀ

ವಿಟ್ಲ: ಧರ್ಮ ಪಥದ ಮೂಲಕ ಜೀವನ ಎಂಬ ರಥ ಸಾಗಿದಾಗ ಮಾತ್ರ ಬದುಕಿನ ಯಾತ್ರೆ ಪರಮಪದವನ್ನು ಪಡೆಯಬಹುದು. ಸಂಕಷ್ಟ, ಸಮಸ್ಯೆಗಳನ್ನು ಮೆಟ್ಟಿಲುಗಳ ಹಾಗೆ ಬಳಸಿ ಮುನ್ನಡೆಯಬೇಕು. ವಾಸ್ತವದೊಂದಿಗೆ ಬದುಕಿದಾಗ ನಿಜಾರ್ಥದಲ್ಲಿ ಬದುಕಲು ಸಾಧ್ಯ. ದೇಹ ಎನ್ನುವ ರಥವನ್ನು ಮನಸ್ಸೆಂಬ ಹಗ್ಗದಿಂದ ಕಟ್ಟಿ ಬುದ್ಧಿ ಎಂಬ ಸಾರಥಿಯ ಕೈಗೆ ನೀಡಿದಾಗ ಸಲೀಸಾಗಿರುತ್ತದೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.
ಅವರು ಶುಕ್ರವಾರ ಒಡಿಯೂರು ಆತ್ರೇಯ ಮಂಟಪದಲ್ಲಿ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ವತಿಯಿಂದ ನಡೆದ ಶ್ರೀ ಒಡಿಯೂರು ರಥೋತ್ಸವದ ಧಾರ್‍ಮಿಕ ಸಭೆಯನ್ನು ಉದ್ಘಾಟಿಸಿ, ಸಹಾಯಕ ಹಸ್ತ ವಿತರಿಸಿ ಆಶೀರ್ವಚನ ನೀಡಿದರು.
ಯೋಧರ ತ್ಯಾಗದ ಹಿಂದೆ ನಮ್ಮ ಸುಖವಿದೆ. ಎದೆಕೊಟ್ಟು ಸೆಟೆದು ನಿಲ್ಲುವ ಕಾರ್‍ಯ ಯೋಧರಿಂದ ನಡೆಯಲಿ. ಉಗ್ರರು ಕದ್ದು ಮಾಡಿದ ಯುದ್ಧವನ್ನು ಖಂಡಿಸುವ ಜತೆಗೆ ಪ್ರತ್ಯುತ್ತರ ನೀಡುವ ಕಾರ್‍ಯವಾಗಬೇಕು. ನೀಚ ಕೃತ್ಯಕ್ಕೆ ದೇವರ ಬಲ ಯಾವತ್ತೂ ಇರುವುದಿಲ್ಲ. ಯೋಧರಿಗೆ ಸಾಂತ್ವನ ಹೇಳುವ ಕಾರ್‍ಯ ಸಮಾಜ ಮಾಡಬೇಕು. ಉಗ್ರರನ್ನು ಮುಗಿಸಲು ನಮ್ಮ ಸೇನೆಗೆ ಭಗವಂತ ಭೀಮ ಬಲ ನೀಡಲಿ ಎಂದರು.
ಆಶೀರ್ವಚನ ನೀಡಿದ ಸಾಧ್ವಿ ಶ್ರೀಮಾತಾನಂದಮಯಿ ನಂಬಿಕೆಯೇ ಸಂಪತ್ತಿನ ಮೂಲವೆನಿಸಿದೆ. ಸಂತರು ಇರುವಲ್ಲಿ ಆನಂದ ತುಂಬಿರುತ್ತದೆ. ಸಮಷ್ಟಿಯ ಸರ್ವ ಉದ್ಧಾರವೇ ಪೂಜ್ಯ ಗುರುಗಳ ಆಶಯವಾಗಿದೆ ಎಂದು ತಿಳಿಸಿದರು.
ವಿಶೇಷ ಅಭ್ಯಾಗತರಾಗಿ ಭಾಗವಹಿಸಿದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಮಾತನಾಡಿ ಮಠಮಂದಿರಗಳು ಶಾಂತಿಯುತ ಸಮಾಜ ನಿರ್‍ಮಾಣದಲ್ಲಿ ಮಹತ್ತರ ಪಾತ್ರ ವಹಿಸುತ್ತವೆ. ಒಡಿಯೂರು ಗ್ರಾಮ ವಿಕಾಸ ಯೋಜನೆ ನೂರಾರು ಸೇವಾ ಕೈಂಕರ್‍ಯಗಳನ್ನು ನಡೆಸುತ್ತಿದೆ. ಈ ಕ್ಷೇತ್ರದ ಅಭಿವೃದ್ಧಿಗೆ ಸರಕಾರದ ವತಿಯಿಂದ ಅನುದಾನ ತರಲು ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು.

ವಿಶಾಖಪಟ್ಟಣ ಆದಾಯ ತೆರಿಗೆ ಇಲಾಖೆ ಕಮಿಷನರ್ ಟಿ. ಎಸ್. ಎನ್. ಮೂರ್ತಿ, ಮೈಸೂರು ಪೋಲಿಸ್ ತರಬೇತಿ ಪ್ರಿನ್ಸಿಪಾಲ್ ಧರಣೀದೇವಿ ಮಾಲಗತ್ತಿ, ಉದ್ಯಮಿ ವಿಶ್ವನಾಥ ಶೆಟ್ಟಿ ಕರ್ನಿರೆ, ಮುಂಬೈ ಜಾಗತಿಕ ಬಂಟರ ಸಂಘಗಳ ಒಕ್ಕೂಟ ಅಧ್ಯಕ್ಷ ಹರೀಶ್ ಶೆಟ್ಟಿ ಐಕಳ, ಆರ್‌ಟಿಓ ಅಧಿಕಾರಿ ಅಜಿತ್ ಕುಮಾರ್ ಪಂದಳಂ, ಗುರುದೇವ ಸೇವಾಬಳಗದ ವಾಮಯ್ಯ ಬಿ. ಶೆಟ್ಟಿ, ಅಶೋಕ್ ಕುಮಾರ್ ಬಿಜೈ, ಎ. ಸುರೇಶ್ ರೈ, ಕೃಷ್ಣ ಎಲ್. ಶೆಟ್ಟಿ, ಜಯಂತ್ ಜೆ. ಕೋಟ್ಯಾನ್, ವಜ್ರಮಾತಾ ಮಹಿಳಾ ವಿಕಾಸ ಕೇಂದ್ರದ ಸರ್ವಾಣಿ ಪಿ. ಶೆಟ್ಟಿ, ರೇವತಿ ಡಿ. ಶೆಟ್ಟಿ ಇನ್ನಿತರರು ಇದ್ದರು.
ನಿತ್ಯಶ್ರೀ ರೈ ಪ್ರಾರ್ಥಿಸಿದರು. ಯಶವಂತ ವಿಟ್ಲ ಸ್ವಾಗತಿಸಿ ಪ್ರಸ್ತಾವನೆಗೈದರು. ಸದಾಶಿವ ಅಳಿಕೆ ಸಹಾಯಹಸ್ತ ಫಲಾನುಭವಿಗಳ ಪಟ್ಟಿ ಓದಿದರು. ಮಾತೇಶ್ ಭಂಡಾರಿ ವಂದಿಸಿದರು. ಪ್ರಕಾಶ್ ಕೆ. ಶೆಟ್ಟಿ ಪೇಟೆಮನೆ ಕಾರ್‍ಯಕ್ರಮ ನಿರೂಪಿಸಿದರು.
ಇದೇ ಸಂದರ್ಭದಲ್ಲಿ ಶ್ರೀ ಸಂಸ್ಥಾನದ ವತಿಯಿಂದ ನಾನಾ ರೀತಿಯ ಸಹಾಯಹಸ್ತ ವಿತರಿಸಲಾಯಿತು. ವೇ.ಮೂ. ಚಂದ್ರಶೇಖರ ಉಪಾಧ್ಯಾಯ ನೇತೃತ್ವದಲ್ಲಿ ಸಾರ್ವಜನಿಕ ಶ್ರೀ ಲಕ್ಷ್ಮೀಸಹಿತ ಸತ್ಯನಾರಾಯಣ ಪೂಜೆ ನಡೆಯಿತು.

More from the blog

ದ್ವಿತೀಯ ಪಿಯು ಫಲಿತಾಂಶ ಪ್ರಕಟ : ದಕ್ಷಿಣ ಕನ್ನಡ ಜಿಲ್ಲೆಗೆ ಮೊದಲ ಸ್ಥಾನ

ಬೆಂಗಳೂರು: ಮಾರ್ಚ್ 1ರಿಂದ ಮಾರ್ಚ್ 22ರವರೆಗೆ ನಡೆದಿದ್ದ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಬುಧವಾರ ಪ್ರಕಟಗೊಂಡಿದೆ. ಬೆಂಗಳೂರಿನಲ್ಲಿ ಶಿಕ್ಷಣ ಇಲಾಖೆ ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಿದೆ. ಈ ಬಾರಿ, ಶೇ 81.15 ಮಂದಿ ಉತ್ತೀರ್ಣರಾಗಿದ್ದಾರೆ....

ಏ.10ರಂದು ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ…. ರಿಸಲ್ಟ್​ ಚೆಕ್ ಮಾಡೋದು ಹೇಗೆ?

ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶವನ್ನು ನಾಳೆ ಪ್ರಕಟಿಸಲಾಗುತ್ತಿದೆ. ಎಲ್ಲ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮುಕ್ತಾಯವಾದ ಹಿನ್ನಲೆ ನಾಳೆ ಫಲಿತಾಂಶ ಪ್ರಕಟಿಸಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಮುಂದಾಗಿದೆ. ನಾಳೆ...

ಮತ್ತೆ ಏರಿಕೆ ಕಂಡ ಚಿನ್ನದ ಬೆಲೆ : ಇವತ್ತಿನ ‌ಬೆಲೆ ಎಷ್ಟು ಗೊತ್ತಾ…?

ಯುಗಾದಿ ಹಬ್ಬ. ಇದು ಸಂಬಂಧ ಬೆಸೆಯುವ ಹಬ್ಬ. ಅಂದಹಾಗೆಯೇ ದೇಶದಾದ್ಯಂತ ಜನರು ಇಂದು ಸಂಭ್ರಮದಲ್ಲಿದ್ದಾರೆ. ಆದರೆ ಇದರ ನಡುವೆ ಚಿನ್ನದ ಬೆಲೆ ಏರಿಕೆಯ ಬಿಸಿಯಿಂದ ಕೊಂಚ ಬೇಸರವು ಅವರಲ್ಲಿ ಆವರಿಸಿದೆ. ಕಳೆದ ಎರಡು ದಿನಗಳ...

5,8,9,11ನೇ ತರಗತಿ ಪರೀಕ್ಷೆ ಫಲಿತಾಂಶಕ್ಕೆ ಸುಪ್ರೀಂ ತಡೆ

ಹೊಸದಿಲ್ಲಿ: 5, 8, 9 ಮತ್ತು 11 ನೇ ತರಗತಿಗಳ ಬೋರ್ಡ್ ಪರೀಕ್ಷೆಗಳ ಫಲಿತಾಂಶಗಳನ್ನು ಪ್ರಕಟಿಸಲು ಸುಪ್ರೀಂ ಕೋರ್ಟ್ ಸೋಮವಾರ ತಡೆಯಾಜ್ಞೆ ನೀಡಿದೆ. ರಾಜ್ಯದಲ್ಲಿ 5, 8, 9ನೇ ತರಗತಿಗೆ ಬೋರ್ಡ್​ ಪರೀಕ್ಷೆ ಮುಗಿದಿದ್ದು,...