Wednesday, October 18, 2023

ಧರ್ಮಸ್ಥಳ: ಭರತನ ದಿಗ್ವಿಜಯ, ಅಯೋಧ್ಯೆ ಪ್ರವೇಶ ದ್ವಾರದಲ್ಲಿ ಚಕ್ರರತ್ನ ಸ್ಥಗಿತ

Must read

ಉಜಿರೆ: ಭರತ ಚಕ್ರರತ್ನ ಬಳಸಿ ದಿಗ್ವಿಜಯ ಕೈಗೊಂಡು ಷಟ್‌ಖಂಡಗಳನ್ನು ಗೆದ್ದು ಹಿಂದೆ ಬರುವಾಗ ವೃಷಭಾಚಲದಲ್ಲಿ ಶಾಸನ ಬರೆಸಲು ಪ್ರಯತ್ನಿಸುತ್ತಾನೆ. ಆದರೆ ಅಲ್ಲಿ ಈಗಾಗಲೆ ಚಕ್ರವರ್ತಿಗಳ ಹೆಸರು ಬರೆದಿದ್ದು ಈತನ ಹೆಸರು ಬರೆಯಲು ಜಾಗವಿರಲಿಲ್ಲ. ಲಿಪಿಕಾರನನ್ನು ಕರೆಸಿ ತನ್ನ ಹೆಸರು ಬರೆಸಲು ಹೇಳುತ್ತಾರೆ. ಆದರೆ ಅಲ್ಲಿ ಶಾಸನ ದೇವತೆಗಳು ಅದನ್ನು ತಡೆಯುತ್ತಾರೆ. ಆದರೂ ಇತರರ ಹೆಸರು ಅಳಿಸಿ ಭರತ ತನ್ನ ಹೆಸರನ್ನು ಬರೆಸುತ್ತಾನೆ.

ಮುಂದೆ ಅಯೋಧ್ಯೆ ಪ್ರವೇಶ ದ್ವಾರದಲ್ಲಿ ಚಕ್ರರತ್ನ ಸ್ಥಗಿತಗೊಳ್ಳುತ್ತದೆ. ಈ ಬಗ್ಗೆ ಜ್ಯೋತಿಷರಲ್ಲಿ ವಿಮರ್ಶೆ ಮಾಡಿದಾಗ, ತನ್ನ ಸಹೋದರರನ್ನು ಸೋಲಿಸಿಲ್ಲ. ಅವರನ್ನು ಗೆದ್ದರೆ ಮಾತ್ರ ಚಕ್ರವರ್ತಿ ಆಗಬಹುದು ಎಂದು ತಿಳಿದು ಬರುತ್ತದೆ. ಸಹೋದರರು ಕೂಡಾ ತನಗೆ ಕಪ್ಪ ಕಾಣಿಕೆ ಸಲ್ಲಿಸಬೇಕೆಂದು ಭರತ ಚಕ್ರವರ್ತಿ ಅವರಿಗೆ ಓಲೆಯನ್ನು ಕಳುಹಿಸುತ್ತಾನೆ. ಸೈನಿಕರಿಗೆ ವಿಶ್ರಾಂತಿ ಪಡೆಯಲು ಆದೇಶ ನೀಡುತ್ತಾನೆ.

ರತ್ನಗಿರಿಯಲ್ಲಿ ಧಾರ್ಮಿಕ ವಿಧಿ-ವಿಧಾನಗಳು

ಉಜಿರೆ: ಧರ್ಮಸ್ಥಳದಲ್ಲಿ ರತ್ನಗಿರಿಯಲ್ಲಿ ಬುಧವಾರ ೨೧೬ ಕಲಶಗಳಿಂದ ಬಾಹುಬಲಿ ಮೂರ್ತಿಗೆ ಪಾದಾಭಿಷೇಕ ನಡೆಯಿತು.
ಯಜ್ಞ ಶಾಲೆಯಲ್ಲಿ ಜಿನ ಸಹಸ್ರ ನಾಮ ವಿಧಾನ, ಧ್ವಜ ಪೂಜೆ, ಶ್ರೀಬಲಿ ವಿಧಾನ ಮತ್ತು ಮಹಾ ಮಂಗಳಾರತಿ ನಡೆಯಿತು.

More articles

Latest article