


ಮತ್ಸರದ ಜನರ ನಡುವೆ
ಪ್ರೀತಿಯ ಹಂಚುತ ಬಾಳುವ,
ಮೇಲುಕೀಳಿನ ಬೀಜ ಬಿತ್ತುವವರ ಮಧ್ಯೆ
ಸಮಾನತೆ ಕಾಯುತ
ಬಾಳಲನುವು ಮಾಡಿಕೊಡು ಗುರುವೇ..
ತನ್ನವರ ಜರಿವವರ ಜೊತೆ
ಅವರ ಕ್ಷಮಿಸಿ,ತಪ್ಪು ಮರೆಯುವ
ತಾ ತುಳಿದ ಏಣಿಯನೆ ಬೀಳಿಸುವ
ಕೃತಘ್ನರನೂ ಪ್ರೀತಿಸುವ
ಸಹೃದಯವ ಕೊಡು ಗುರುವೇ..
ನೆಮ್ಮದಿಯಲಿ ಬಾಳಲು ಬಿಡದ
ಚಾಡಿಕೋರರ ನೆರಳೆನಗೆ ಬೀಳದೆ,
ಸಹಕಾರವ ಮರೆತು, ಹೃದಯದಿ ಕಹಿ ಕಕ್ಕುವವಗೆ
ಸ್ನೇಹ ಧಾರೆಯೆರೆವ ಮನ ನೀಡು ಗುರುವೇ..
ಮಾತಲಿ ಸರ್ವರ ಮರುಳು ಮಾಡುತ
ತಮ್ಮ ಬೇಳೆ ಬೇಯಿಸಿಕೊಳುತ
ತಾನೆ ಮೇಲೆಂದು ಜಂಬ ಕೊಚ್ಚಿಕೊಳುತಲಿ
ಇತರರ ನೀಚ ದೃಷ್ಟಿಯಿಂದ ನೋಡುವ
ಮನುಜರ ಏಳಿಗೆಯಾಗಲೆಂದು ಪ್ರಾರ್ಥಿಸುವ ಹೃದಯ ನೀಡು ಗುರುವೇ..
@ಪ್ರೇಮ್@





