


ಬಂಟ್ವಾಳ: ಯಶುಕುಮಾರ್ ಡಿ.ಕೃಷ್ಣಾಪುರ ಅಮ್ಟೂರು ಅವರಿಗೆ ಪಿ.ಎಚ್.ಡಿ.ಪದವಿ ಲಭಿಸಿದೆ.
ತುಳುನಾಡಿನ ಅವಳಿವೀರರ ಆರಾಧನೆ: ಸಾಮಾಜಿಕ ಸಂಬಂಧ ಗಳು ಮತ್ತು ಚಾರಿತ್ರಿಕತೆ ಎಂಬ ವಿಷಯ ದ ಕುರಿತು ಮಂಡಿಸಿದ ಪ್ರಬಂಧ ಸಂಕಲನ ಕ್ಕೆ ಮಂಗಳೂರು ಮಹಾ ವಿಶ್ವವಿದ್ಯಾನಿಲಯ ಪಿ.ಎಚ್.ಡಿ.ಪದವಿ ನೀಡಿದೆ.
ಅಮ್ಟೂರು ಕ್ರಷ್ಟಾಪುರ ನಿವಾಸಿ ಭಾರತೀಯ ಸಂಚಾರ ನಿಗಮ ನಿಯಮಿತ ದಲ್ಲಿ ಉದ್ಯೋಗಿಯಾಗಿರುವ ದೇವದಾಸ ಕ್ರಷ್ಣಾಪುರ ಮತ್ತು ಸುಂದರಿ ಅವರ ಪುತ್ರನಾಗಿರುವ ಯಶುಕುಮಾರ್ ಡಿ. ಅವರು ಪ್ರಾಥಮಿಕ ಶಿಕ್ಷಣ ವನ್ನು ಸಂತ ಅಂತೋನಿಯವರ ಹಿರಿಯ ಪ್ರಾಥಮಿಕ ಶಾಲೆ ಅಮ್ಟೂರು, ಪ್ರೌಢಶಿಕ್ಷಣ ವನ್ನು ದೀಪಿಕಾ ಪ್ರೌಢ ಶಾಲೆ ಮೊಡಂಕಾಪು, ಪಿಯುಸಿ ಯನ್ನು ಬಿ.ಇ.ಎಂ.ಪಿ.ಯು.ಕಾಲೇಜು ರಥಬೀದಿ ಮಂಗಳೂರು , ಡಿಗ್ರಿ ಶಿಕ್ಷಣ ವನ್ನು ಮಂಗಳೂರು ಹಂಪಣಕಟ್ಟೆ ಕಾಲೇಜಿನಲ್ಲಿ ಹಾಗೂ ಸ್ನಾತಕೋತ್ತರ ಪದವಿ ಯನ್ನು ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳ ಗಂಗೋತ್ರಿ ಎಸ್.ವಿ.ಪಿ.ಕನ್ನಡ ಅಧ್ಯಯನ ಸಂಸ್ಥೆ ಯಲ್ಲಿ ಪಡೆದಿದ್ದಾರೆ.
ಪ್ರೋ.ಅಭಯಕುಮಾರ್ ಕೆ. ಅವರ ಮಾರ್ಗದರ್ಶನ ದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ.ಕನ್ನಡ ಅಧ್ಯಯನ ಸಂಸ್ಥೆಯ ಲ್ಲಿ ಸಂಶೋಧನೆ ನಡೆಸಿ , ಮಹಾಪ್ರಬಂಧ ಸಿದ್ದಪಡಿಸಿ , ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಸಲ್ಲಿಸಿ ಪಿ.ಎಚ್.ಡಿ.ಪದವಿ ಪಡೆದಿರುತ್ತಾರೆ.
ಅಭಿನಂದನೆ: ” ತುಳುನಾಡಿನ ಅವಳಿವೀರರ ಆರಾಧನೆ: ಸಾಮಾಜಿಕ ಸಂಬಂಧ ಗಳು ಮತ್ತು ಚಾರಿತ್ರಿಕತೆ” ಎಂಬ ವಿಷಯದಲ್ಲಿ ಪ್ರಬಂಧ ಸಂಕಲನ ಮಂಡಿಸಿ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪಿ.ಎಚ್.ಡಿ.ಪದವಿ ಪಡೆದ ಬಂಟ್ವಾಳ ತಾಲೂಕಿನ ಅಮ್ಟೂರು ಕೃಷ್ಣಾಪುರ ನಿವಾಸಿ ಯಶುಕುಮಾರ್ ಡಿ. ಅವರಿಗೆ ಮಾಜಿ ತಾ.ಪಂ.ಉಪಾಧ್ಯಕ್ಷ, ಬಿಜೆಪಿ ಎಸ್ .ಮೋರ್ಚಾದ ಜಿಲ್ಲಾಧ್ಯಕ್ಷ ದಿನೇಶ್ ಅಮ್ಟೂರು ಅಭಿನಂದನೆ ಸಲ್ಲಿಸಿದ್ದಾರೆ.





