ಬಂಟ್ವಾಳ: ಶ್ರೀ ಗುಡ್ಡೆಚಾಮುಂಡಿ ದೈವಸ್ಥಾನ ಗಡಿಸ್ಥಳ- ಕೊಡಾಜೆ, ಮಾಣಿ ಬಂಟ್ವಾಳ ತಾಲೂಕು, ಶ್ರೀ ಗುಡ್ಡೆಚಾಮುಂಡಿ, ಪಂಜುರ್ಲಿ ಮಲೆಕೊರತಿ ದೈವಗಳ ದೊಂಪದಬಲಿ ನೇಮ ಫೆ.13ನೇ ಬುಧವಾರ ನಡೆಯಲಿದೆ.

ಆ ಪ್ರಯುಕ್ತ ಫೆ.10ನೇ ಆದಿತ್ಯವಾರ ಬೆಳಿಗ್ಗೆ 10 ಗಂಟೆಗೆ ಗೊನೆ ಕಡಿಯುವುದು, ಫೆ.13ರ ಬುಧವಾರ ಬೆಳಿಗ್ಗೆ 9 ಗಂಟೆಗೆ ನಾಗತಂಬಿಲ, ಸಂಜೆ 6 ಗಂಟೆಗೆ ಮಾಣಿಗುತ್ತು ಚಾವಡಿಯಿಂದ ಭಂಡಾರ ಹೊರಟು ಮಾಣಿ ಪೇಟೆಯಿಂದಾಗಿ ಗಡಿ ಸ್ಥಳಕ್ಕೆ ಬರುವುದು,ರಾತ್ರಿ 7 ರಿಂದ ಅನ್ನಸಂತರ್ಪಣೆ ಹಾಗೂ ರಾತ್ರಿ 10ರಿಂದ ಶ್ರೀ ಗುಡ್ಡೆಚಾಮುಂಡಿ, ಪಂಜುರ್ಲಿ ಮಲೆಕೊರತಿ ದೈವಗಳ ದೊಂಪದಬಲಿ ನೇಮ ಕೊಡಾಜೆ ಗಡಿಸ್ಥಳದಲ್ಲಿ ಜರಗಲಿದೆ ಎಂದು ಕ್ಷೇತ್ರದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here