ವಿಟ್ಲ: ಧರ್ಮ ಸೂಕ್ಷ್ಮತೆಯನ್ನು ಅನುಭವದ ಮೂಲಕ ಅರಿಯಲು ಸಾಧ್ಯ. ಧಾರ್‍ಮಿಕ ಶ್ರದ್ಧಾ ಕೇಂದ್ರಗಳಲ್ಲಿ ಬದುಕಿಗೆ ದಾರಿ ತೋರಿಸುವ ಕಾರ್‍ಯವಾಗಬೇಕು. ಪ್ರತಿಯೊಬ್ಬರ ಬದುಕು ಸಾತ್ವಿಕತೆ ಮೂಲಕ ಸಾಗಲು ಧಾರ್‍ಮಿಕ ಕಾರ್‍ಯಗಳು ನಿರಂತರವಾಗಿ ನಡೆಯಬೇಕೆಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.
ಅವರು ಬುಧವಾರ ಕುಂಡಡ್ಕ ಶ್ರೀ ವಿಷ್ಣಮೂರ್ತಿ ದೇವಸ್ಥಾನ, ಮಾಡ ಶಿಬರಿಕಲ್ಲ ಶ್ರೀ ಮಲರಾಯ – ಮೂವರ್ ದೈವಂಗಳ ದೈವಸ್ಥಾನ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಅಂಗವಾಗಿ ನಡೆದ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದರು.
ವಿಟ್ಲ ಯೋಗೀಶ್ವರ ಮಠದ ಶ್ರೀ 1008 ಮಠಾಧೀಶ ಶ್ರೀ ರಾಜಗುರು ಶ್ರದ್ಧಾನಾಥಾಜಿ ಮಹಾರಾಜ ಆಶೀರ್ವಚನ ನೀಡಿ ದೇವರ ಅಗೋಚರ ಶಕ್ತಿಯಿಲ್ಲದೇ ಲೋಕದಲ್ಲಿ ಯಾವೊಂದು ಕಾರ್‍ಯವೂ ನಡೆಯದು. ದೇವರ ದೇಗುಲ ಉದ್ಧಾರದ ಮೂಲಕ ಭಕ್ತರು ಮಾತ್ರವಲ್ಲದೇ ಸರ್ವ ಸಮಾಜ ಒಟ್ಟುಗೂಡಿದೆ ಎಂದರು.
ವಿಟ್ಲ ಅರಮನೆಯ ಅರಸ ವಿ.ಜನಾರ್ದನವರ್ಮ ಅರಸರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ದೇವಸ್ಥಾನ ಮತ್ತು ವಾಸ್ತು ಶಿಲ್ಪ ವಿಚಾರದ ಕುರಿತು ಶಿಬರ ಶ್ರೀವತ್ಸ ಕೆದಿಲಾಯರು ಧಾರ್‍ಮಿಕ ಉಪನ್ಯಾಸ ನೀಡಿದರು.
ವಿಟ್ಲ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಎಂ.ಕೆ ಪುರುಷೋತ್ತಮ ಭಟ್ ಬದನಾಜೆ, ಇಡ್ಕಿದು ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಗೋಪಾಲಕೃಷ್ಣ ಭಟ್ ಬೈಪದವು, ನಲಿಕೆ ಯಾನೆ ಪಾನರ ಸಂಘದ ಜಿಲ್ಲಾಧ್ಯಕ್ಷ ಎಂ. ಡಿ. ವೆಂಕಪ್ಪ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಂಟ್ವಾಳ ಯೋಜನಾಧಿಕಾರಿ ಜಯಾನಂದ ಪಿ, ಬಂಟ್ವಾಳ ತಾಲೂಕು ಗೌಡ ಸಮಾಜದ ಅಧ್ಯಕ್ಷರಾದ ಮೋಹನ ಗೌಡ ಕಾಯರ್ ಮಜಲ್, ಉದ್ಯಮಿಗಳಾದ ಜಯಗೋವಿಂದ ಭಟ್, ಅರಸರ ಪವಿತ್ರಪಾಣಿ ಸುಬ್ರಹ್ಮಣ್ಯ ಕೇಳತ್ತಾಯ ಉಪಸ್ಥಿತರಿದ್ದರು.
ಮಹೇಶ ಕೊಳಂಬೆ ಶಂಖನಾದ ಮಾಡಿದರು. ಮೋಹಿನಿ, ಸೌಮ್ಯ, ಅಪ್ಪಿ, ಸೌಮ್ಯಶ್ರೀ, ಪುಷ್ಪಾವತಿ, ಪ್ರಾರ್ಥಿಸಿದರು. ವೇಣುಗೋಪಾಲ ಶೆಟ್ಟಿ ಮರುವಾಳ ಸ್ವಾಗತಿಸಿದರು. ಕೆ. ಟಿ. ವೆಂಕಟೇಶ್ವರ ನೂಜಿ ಪ್ರಸ್ತಾವನೆಗೈದರು. ಗೋವಿಂದ ರಾಜ್ ಪೆರುವಾಜೆ ವಂದಿಸಿದರು. ಚಿದಾನಂದ ಪೆಲತ್ತಿಂಜ ಕಾರ್‍ಯಕ್ರಮ ನಿರೂಪಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here