


ವಿಟ್ಲ: ಜೆಸಿಐ ವಿಟ್ಲ ಇದರ ವತಿಯಿಂದ ತಾಲೂಕಿನಾದ್ಯಂತ ರಾಷ್ಟ್ರೀಯ ಭಾವೈಕ್ಯತಾ ದಿನವನ್ನು ಆಚರಿಸಲಾಯಿತು. ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಗೆ ಜೆಸಿಐ ವಿಟ್ಲ ಘಟಕದ ಸದಸ್ಯರು ರಾಷ್ಟ್ರೀಯ ಭಾವೈಕ್ಯತಾ ಪ್ರತಿಜ್ಞೆ ವಿಧಿಯನ್ನು ಬೋಧಿಸುವುದರೊಂದಿಗೆ ವ್ಯಕ್ತಿತ್ವ ವಿಕಸನ ತರಬೇತಿ ನೀಡಲಾಯಿತು. ವಿಟ್ಲ ವ್ಯಾಪ್ತಿಯ ಸುಮಾರು 20 ಸಾವಿರ ವಿದ್ಯಾಗಳು ಈ ಪ್ರತಿಜ್ಞಾ ವಿಧಿ ಬೋಧಿಸಿದರು.
ವಿಟ್ಲ ಜೆಸಿಐ ಅಧ್ಯಕ್ಷ ಬಾಲಕೃಷ್ಣ ವಿಟ್ಲ, ನಿಕಟ ಪೂರ್ವ ಅಧ್ಯಕ್ಷ ಸೋಮಶೇಖರ್, ಪೂವಾಧ್ಯಕ್ಷರುಗಳಾದ ಮೋಹನ ಮೈರ, ರಮೇಶ್ ಬಿ ಕೆ, ಅಣ್ಣಪ್ಪ ಸಾಸ್ತಾನ, ಜೈಕಿಶನ್, ಈಶ್ವರ ಭಟ್ ಹಾಗೂ ಸದಸ್ಯರು ಭಾಗವಹಿಸಿದ್ದರು.





