ಬಂಟ್ವಾಳ : ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಸೇವಾ ಸಮಿತಿ (ರಿ.), ಬಿ.ಸಿ.ರೋಡು ಇದರ ಆಶ್ರಯದಲ್ಲಿ 18ನೇ ವರ್ಷದ ಜಿ.ಯಸ್.ಬಿ. ಸಮ್ಮಿಲನ-2019 ಫೆಬ್ರವರಿ 3ರಂದು ಗೀತಾಂಜಲಿ ಕಲ್ಯಾಣ ಮಂಟಪ, ಬಿ.ಸಿ.ರೋಡು ಇಲ್ಲಿ ವಾರ್ಷಿಕ ಕ್ರೀಡೋತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು. ಸೇವಾ ಸಮಿತಿಯ ಅಧ್ಯಕ್ಷರಾದ ಯು. ಸುರೇಶ್ ನಾಯಕ್ ಇವರು ದೀಪ ಪ್ರಜ್ವಲನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು. ನತನ ಭಟ್ ಮತ್ತು ಚೈತನಾ ಭಟ್ ಇವರು ಪ್ರಾರ್ಥಿಸಿದರು.
ನಿವೃತ್ತ ಮುಖ್ಯ ಶಿಕ್ಷಕಿ ಜಯಶ್ರೀ ಶೆಣೈ, ನಿವೃತ್ತ ಉಪನ್ಯಾಸಕರಾದ  ಮಧುಕರ ಮಲ್ಯ, ಸಿಂಡಿಕೇಟ್ ಬ್ಯಾಂಕ್‌ನ ನಿವೃತ್ತ ಉದ್ಯೋಗಿ ವಾಮನ ಭಟ್ ಹಾಗೂ ರಾಧಿಕಾ ಶೆಣೈ, ತೀರ್ಪುಗಾರರಾಗಿ ಸಹಕರಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಾಕ್ಷಿ ಹೆಗ್ಡೆ ಇವರ ಉಸ್ತುವಾರಿಯಲ್ಲಿ ಸ್ಥಳೀಯ ಜಿ.ಯಸ್.ಬಿ. ಪ್ರತಿಭೆಗಳಿಂದ ಯಕ್ಷಗಾನ ಹಾಗೂ ವಿವಿಧ ನೃತ್ಯಗಳು. ಮಂಗಳೂರಿನ ಮಾಲತಿ ಯು. ಕಾಮತ್ ಮತ್ತು ಬಳಗದವರಿಂದ ಕೊಂಕಣಿ ನಾಟಕ ಪ್ರದರ್ಶನವಾಯಿತು. ಬಳಿಕ ಸ್ಫಧಾ ವಿಜೇತರಿಗೆ ಸಮಿತಿಯ ಅಧ್ಯಕ್ಷ ಹಾಗೂ ಮಕ್ಕಳ ವೈದ್ಯರಾದ ಡಾ| ಕೆ.ಜಿ. ಶೆಣೈ ಇವರು ಬಹುಮಾನ ವಿತರಿಸಿದರು.
ಈ ಕ್ರೀಡೋತ್ಸವದಲ್ಲಿ ಬಿ.ಸಿ.ರೋಡ್ ಜಿ.ಎಸ್.ಬಿ. ಸಮಾಜದ ಬಾಂಧವ ಭಗಿನಿಯರು ಹಾಗೂ ಮಕ್ಕಳು ಅತೀ ಹೆಚ್ಚು ಸಂಖ್ಯೆಯಲ್ಲಿ ಭಾಗವಹಿಸಿದರು. ಪ್ರಧಾನ ಕಾರ್ಯದರ್ಶಿ ಎಂ. ಸುಬ್ರಹ್ಮಣ್ಯ ಪೈ ಕಾರ್ಯಕ್ರಮ ನಿರೂಪಿಸಿದರು. ಕೋಶಾಧಿಕಾರಿ ರಘುವೀರ್ ಕಾಮತ್, ಸದಸ್ಯರಾದ ದುರ್ಗಾದಾಸ್ ಶೆಣೈ, ನಾಗೇಂದ್ರ ನಾಯಕ್, ಸದಸ್ಯರಾದ ನಾರಾಯಣ ಶೆಣೈ, ವಿವೇಕ್ ಹೆಗ್ಡೆ, ಅನಂತಕೃಷ್ಣ ನಾಯಕ್, ಎಚ್. ನಾರಾಯಣ ಶೆಣೈ, ಪವನ್ ನಾಯಕ್, ಶಿಕ್ಷಕಿ ರಂಜಿತಾ ಕುಮಾರ್ ಭಟ್ ಹಾಗೂ ಸ್ವಾತಿ ನಾಯಕ್ ಇವರು ಸಹಕರಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here