


ಬಂಟ್ವಾಳ: ಸ್ನಾನಕ್ಕೆಂದು ತೆರಳಿದ ವ್ಯಕ್ತಿ ಯೋರ್ವರು ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಬಂಟ್ವಾಳ ಬಿ.ಮೂಡ ಗ್ರಾಮದ ಕಂಚಿಕಾರ್ ಪೇಟೆಯಲ್ಲಿ ನಡೆದಿದೆ.


ಬಂಟ್ವಾಳ ಬೈಪಾಸ್ ನಿವಾಸಿ ಅವಿವಾಹಿತ ಪ್ರವೀಣ್( 37) ಅವರು ಮೃತಪಟ್ಟ ವ್ಯಕ್ತಿ. ಪ್ರವೀಣ್ ಅವರು ಮರದ ಕೆಲಸ ಮಾಡುತ್ತಿದ್ದ ಇವರು ನೇತ್ರಾವತಿ ನದಿಗೆ ಸ್ನಾನಕ್ಕಾಗಿ ಹೋಗಿದ್ದರು.
ಆದರೆ ಸ್ನಾನಕ್ಕೆ ಹೋದವರು ವಾಪಾಸು ಬರದೆ ಇದ್ದು ಹುಡುಕಾಡಿದಾಗ ಕಂಚಿಕಾರ್ ಪೇಟೆ ಸಮೀಪ ನೇತ್ರಾವತಿ ನದಿಯಲ್ಲಿ ಮ್ರತದೇಹ ಪತ್ತೆಯಾಗಿದೆ.
ಸ್ನಾನಕ್ಕೆ ಹೋದ ಪ್ರವೀಣ್ ಅವರ ಅಕಸ್ಮಿಕವಾಗಿ ನದಿಯಲ್ಲಿ ಮುಳುಗಿ ಮ್ರತಪಟ್ಟಿರಬೇಕು ಎಂದು ಶಂಕಿಸಲಾಗಿದೆ.
ಬಂಟ್ವಾಳ ನಗರ ಠಾಣಾ ಎಸ್. ಐ.ಚಂದ್ರಶೇಖರ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿ ಕೊಂಡಿದ್ದಾರೆ.
ಮ್ರತದೇಹವನ್ನು ಬಂಟ್ವಾಳ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸಾಗಿಸಲಾಗಿದೆ.







