ಪುಂಜಾಲಕಟ್ಟೆ: ಇತಿಹಾಸ ಪ್ರಸಿದ್ಧ ಕಾರಣಿಕ ಕ್ಷೇತ್ರವೆಂದು ಪ್ರಸಿದ್ಧಿ ಪಡೆದಿರುವ ಬಂಟ್ವಾಳ ತಾಲೂಕಿನ ಉಳಿ ಗ್ರಾಮದ ಕಕ್ಯಪದವು ಶ್ರೀ ಕಡಂಬಿಲ್ತಾಯಿ, ಶ್ರೀ ಕೊಡಮಣಿತ್ತಾಯಿ ಬ್ರಹ್ಮಬೈದರ್ಕಳ ಗರಡಿ ಕ್ಷೇತ್ರವು ಸುಮಾರು 3 ಕೋ.ರೂ. ವೆಚ್ಚದಲ್ಲಿ ಶಿಲಾಮಯವಾಗಿ  ಪುನನಿರ್ಮಾಣಗೊಳ್ಳುತ್ತಿದ್ದು, ಕ್ಷೇತ್ರಕ್ಕೆ ನೂತನ ಧ್ವಜಸ್ಥಂಭದ ಸಾಗಾಟ ಕಾರ್ಯಕ್ರಮ ಫೆ.1ರಂದು ಜರಗಿತು.
ಬೆಳ್ತಂಗಡಿ ತಾಲೂಕಿನ ತಣ್ಣೀರುಪಂತ ಗ್ರಾಮದ ಪಟ್ಟದಬೈಲು ಕೃಷ್ಣ ಪ್ಪ ಮಾಸ್ಟರ್ ಮತ್ತು ಕುಟುಂಬಸ್ಥರು ದಾನವಾಗಿ ನೀಡಿದ ತೇಗದ ಮರಕ್ಕೆ ವೃಕ್ಷ ಮುಹೂರ್ತ ನಡೆಸಲಾಯಿತು. ಶ್ರೀ ಕ್ಷೇತ್ರ ಕಕ್ಯಬೀಡಿನ ಪ್ರ.ಅರ್ಚಕ, ಗರಡಿ ಕ್ಷೇತ್ರದ ಆಸ್ರಣ್ಣ ಶ್ರೀನಿವಾಸ ಅರ್ಮುಡ್ತಾಯ ಮತ್ತು ರಾಜೇಂದ್ರ ಭಟ್ ಅವರು ಅವರು ವೈದಿಕ ವಿ ವಿಧಾನಗಳನ್ನು ನಡೆಸಿ, ಗರಡಿ ಕ್ಷೇತ್ರದ ನಿರ್ಮಾಣ ಕಾರ್ಯದಲ್ಲಿ ಮರದ ಉಪಯೋಗಕ್ಕಾಗಿ ಮರ ಕಡಿಯಬೇಕಾಗುವುದರಿಂದ ದೇವರನ್ನು ಪೂಜಿಸಿ ವೃಕ್ಷ ಮುಹೂರ್ತ ನಡೆಸುವುದರಿಂದ ನಿರ್ಮಾಣ ಕಾರ್ಯ ಯಶಸ್ವಿಯಾಗಲಿ ಎಂದು ಹೇಳಿದರು. ಬಳಿಕ ಸಾಮೂಹಿಕ ಪ್ರಾರ್ಥನೆ ನಡೆಸಲಾಯಿತು.


ಬಳಿಕ ಲಿಂಗಸ್ಥಳ, ಕರ್ಲಬೀಡು, ತಾಳಿಪಡ್ಪು ರಸ್ತೆಯಾಗಿ ಶ್ರೀ ಪಂಚದುರ್ಗಾ ಪರಮೇಶ್ವರಿಪ್ರೌಢಶಾಲಾ ಬಳಿಯಿಂದ ವಿವಿಧ ವಾಹನ, ಚೆಂಡೆ,ವಾದ್ಯಗಳೊಂದಿಗೆ ಮೆರವಣಿಗೆ ಮೂಲಕ ವಿಜೃಂಭಣೆಯಿಂದ ಶ್ರೀ ಕ್ಷೇತ್ರಕ್ಕೆ 42 ಅಡಿ ಉದ್ದದ ಕೊಡಿಮರದ ಸಾಗಾಟ ನಡೆಯಿತು. ಸಾವಿರಾರು ಭಕ್ತಾಗಳು ಮೆರವಣಿಗೆಯಲ್ಲಿ ಪಾಲ್ಗೊಂಡರು.
ಪುನರ್ ನಿರ್ಮಾಣ ಸಮಿತಿ ಗೌರವಾಧ್ಯಕ್ಷ, ಮಾಜಿ ಸಚಿವ ಬಿ.ರಮಾನಾಥ ರೈ, ಅಧ್ಯಕ್ಷ, ಜಿ.ಪಂ.ಸದಸ್ಯ ಬಿ.ಪದ್ಮಶೇಖರ ಜೈನ್, ಕ್ಷೇತ್ರದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೆ.ಮಾಯಿಲಪ್ಪ ಸಾಲ್ಯಾನ್, ಗೌರವ ಸಲಹೆಗಾರ ರಾಜವೀರ ಜೈನ್, ಉತ್ಸವ ಸಮಿತಿ ಅಧ್ಯಕ್ಷ ವಿಶ್ವನಾಥ ಸಾಲ್ಯಾನ್ ಬಿತ್ತ, ತಾ.ಪಂ.ಸದಸ್ಯೆ ಬೇಬಿ ಕೃಷ್ಣಪ್ಪ, ಪುನರ್ ನಿರ್ಮಾಣ ಸಮಿತಿ ಪದಾಕಾರಿಗಳಾದ ಎಂ. ಮೋನಪ್ಪ ಪೂಜಾರಿ ಕಂಡೆತ್ಯಾರು,ಎ.ಚೆನ್ನಪ್ಪ ಸಾಲ್ಯಾನ್ ಆಜೋಡಿ, ಡಾ| ರಾಜಾರಾಮ ಕೆ.ಬಿ., ಬೇಬಿ ಕುಂದರ್, ಚಂದ್ರಶೇಖರ ಕಂರ್ಬಡ್ಕ, ಗುಣಶೇಖರ ಕೊಡಂಗೆ, ಸಂಜೀವ ಪೂಜಾರಿ ಕೇರ್ಯ, ಡಾ| ದಿನೇಶ್ ಬಂಗೇರ, ಡೀಕಯ ಬಂಗೇರ ಕರ್ಲ, ವೀರೇಂದ್ರ ಕುಮಾರ್ ಜೈನ್,ಜಯ ಶೆಟ್ಟಿ ಕಿಂಜಾಲು, ಸಂಜೀವ ಗೌಡ ಅಗಲ, ನಾರಾಯಣ ಪೂಜಾರಿ ಬಿತ್ತ, ವಿಜಯ ಕುಮಾರ್ ಕೇದಿಗೆ, ಜೀಣರ್ೋದ್ಧಾರ ಸಮಿತಿ ಪದಾಕಾರಿಗಳಾದ ವಾಸುದೇವ ಮಯ್ಯ, ಗಣೇಶ ಕೆ., ಚಿದಾನಂದ ರೈ, ಶ್ರೀಧರ ಆಚಾರ್ಯ, ಸದಾನಂದ ಗೌಡ, ಚೇತನ್ಎಚ್., ಜಯಾನಂದ ಪೂಜಾರಿ, ಡೀಕಯ್ಯ ಕುಲಾಲ್, ಚಂದ್ರಶೇಖರ ಕೆ., ಗುರುಪ್ರಕಾಶ್, ರಾಜೀವ, ಸುಂದರ ದೇವಾಡಿಗ, ಪ್ರದೀಪ್ ಉತ್ಸವ ಸಮಿತಿಯ ಪರಮೇಶ್ವರ, ರಾಮಯ್ಯ ಭಂಡಾರಿ, ರಾಜೇಂದ್ರ, ಡೀಕಯ್ಯ ಪೂಜಾರಿ, ವಸಂತ, ನವೀನ್ ಶೆಟ್ಟಿ ಮತ್ತಿತರರು ಭಾಗವಹಿಸಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here