ಬಂಟ್ವಾಳ: ಬೆಂಗಳೂರು ಸಮರ್ಪಣ್ ಟ್ರಸ್ಟ್‌ ಇನ್ಪೋಸಿಸ್ ಇವರ ವತಿಯಿಂದ ಬಂಟ್ವಾಳ ತಾಲೂಕಿನ  ಸರಕಾರಿ ಶಾಲೆ ಗಳಿಗೆ ಉಚಿತ ವಿಜ್ಞಾನ ಶೈಕ್ಷಣಿಕ ಪರಿಕರಗಳ ವಿತರಣಾ ಸಮಾರಂಭ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ನಡೆಯಿತು.
ಕಾರ್ಯಕ್ರಮ ದ ಅಧ್ಯಕ್ಷತೆಯ ನ್ನು ವಹಿಸಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಶಿವಪ್ರಕಾಶ್
ವಿಜ್ಞಾನ ದ ಬೋಧನೆ ಪರಿಣಾಮಕಾರಿಯಾಗಿ ಯಾವ ರೀತಿಯಲ್ಲಿ ಮಾಡಬಹುದು ಎಂಬುದನ್ನು ಅರಿತುಕೊಂಡು ಉತ್ತಮ ವಾದ ಕಾರ್ಯ ಕ್ರಮವನ್ನು ಇನ್ಫೋಸಿಸ್ ಸಮರ್ಪಣ್ ಟ್ರಸ್ಟ್ ಮಾಡಿದೆ.
ವಿಜ್ಞಾನ ಇರುವುದು ಜೀವನದ ಗುಣಮಟ್ಟವನ್ನು ಹೆಚ್ಚಿಸಲು , ಮಕ್ಕಳಿಗೆ ಶಿಕ್ಷಣವನ್ನು ಹೇರುವ ಬದಲು ಇಂತಹ ಪರಿಕರಗಳನ್ನು ಬಳಸಿಕೊಂಡು ಪಾಠ ಮಾಡುವುದು ಜೀವನ ಪರ್ಯಂತ ನೆನಪು ಉಳಿಯುವಂತೆ ಮಾಡುತ್ತದೆ ಎಂದರು. ಬೋಧನಾ ವಿಧಾನ ಬದಲಿಸಬೇಕು, ಪುಸ್ತಕದ ಜೊತೆ ವಸ್ತುಗಳ ಬಳಕೆ ಮಾಡುವ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವ ಕೆಲಸಗಳು ಆಗಬೇಕಾಗಿದೆ.
ವಿಜ್ಞಾನ ಬೋಧನೆ ಸರಳವಾಗಿ ಮಕ್ಕಳಿಗೆ ಅರ್ಥವಾಗುವ ರೀತಿಯಲ್ಲಿ ಬೋಧನೆ ಮಾಡಲು ಟ್ರಸ್ಟ್ ನೀಡಿದ ಪರಿಕರಗಳು ಫಲಿತಾಂಶಕ್ಕೆ ಪರಿಣಾಮ ಬೀಳಬಹುದು ಎಂದರು.
ಶೈಕ್ಷಣಿಕವಾಗಿ ಸಾಮಾಜಿಕ ಕಳಕಳಿಯಿಂದ ನೀಡಿದ ಪರಿಕರಗಳನ್ನು
ಶಿಕ್ಷಕರು ಪ್ರಮಾಣಿಕವಾಗಿ ಬಳಕೆ ಮಾಡಲು ತಿಳಿಸಿದರು.
ಇದರಿಂದ ಮುಂದಿನ ತಾಲೂಕಿನ ಶಿಕ್ಷಣದ ಗುಣಮಟ್ಟ ಹೆಚ್ಚಬಹುದು ಎಂಬ ವಿಶ್ವಾಸ ವ್ಯಕ್ತಪಡಿಸಿದರು.
 ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಿವಪ್ರಸಾದ್ ಶೆಟ್ಟಿ, ಮುಖ್ಯ ಶಿಕ್ಷಕರ ಸಂಘದ ಅದ್ಯಕ್ಷ ರಮಾನಂದ, ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ  ಜೋಯೆಲ್ ಲೋಬೊ, ಇನ್ಫೋಸಿಸ್ ಟ್ರಸ್ಟ್ ನ ಪ್ರಮುಖರಾದ ಶೇಖರ್ , ಕೋಮಲ, ಶ್ವೇತಾ, ಡಿ.ಸಿ.ಸಿ.ಬ್ಯಾಂಕ್ ಸಿಬ್ಬಂದಿ ಪದ್ಮನಾಭ ಶೆಟ್ಟಿ, ಪಂಜಿಕಲ್ಲು ಶಾಲಾ ಶಿಕ್ಷಕ ಇಂಮ್ತಿಯಾಜ್  ಬೆಂಗಳೂರು ಇನ್ಪೊಸಿಸ್ ಸಮರ್ಪಣ್ ಟ್ರಸ್ಟ್ ನ ಕೋರ್ ಟೀಂ ಸದಸ್ಯ ರಿತೇಶ್ ಪ್ರಸ್ತಾವನೆ ನೀಡಿ
ಈಗಾಗಲೇ 22 ಜಿಲ್ಲೆಗಳಲ್ಲಿ ಪರಿಕರಗಳ ನ್ನು ವಿತರಣೆ ಮಾಡಲಾಗಿದೆ.
ಫಲಾನುಭವಿಗಳ ಸ್ಪಂದನೆ ಯನ್ನು  ತಿಳಿದುಕೊಂಡು ಮುಂದಿನ ದಿನಗಳಲ್ಲಿ ಬೇರೆ ಬೇರೆ ಶೈಕ್ಷಣಿಕ ಕಾರ್ಯಕ್ರಮ ಗಳನ್ನು ಮಾಡಲು ಅವಕಾಶ ಮಾಡಿ ಕೊಡಿ ಎಂದರು.
ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕ ರಮೇಶ್ ನಾಯಕ್ ರಾಯಿ ಸ್ವಾಗತಿಸಿದರು. ಸಿ.ಇ.ಒ ಸುಶೀಲಾ ವಂದಿಸಿದರು.
ಗೋಪಾಲ ಅಂಚನ್ ಕಾರ್ಯಕ್ರಮ ನಿರೂಪಿಸಿದರು. ‌

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here