


ಬಂಟ್ವಾಳ : ಬಂಟ್ವಾಳ ತಾಲೂಕಿನ ಕರಾವಳಿ ಕುಲಾಲ ಕುಂಬಾರರ ಯುವ ವೇದಿಕೆ ಬಂಟ್ವಾಳ ವಿಧಾನಸಭಾ ಕ್ಷೇತ್ರ ಇದರ ವತಿಯಿಂದ ಫೆಬ್ರವರಿ 20ರ ಸರ್ವಜ್ಞ ಜಯಂತಿ ಪ್ರಯುಕ್ತ ಬಂಟ್ವಾಳ ತಾಲೂಕು ಮಟ್ಟದ ಸ್ವಜಾತಿ ಬಾಂಧವರ 4 ಚಕ್ರ ವಾಹನ ಜಾಥಾ ಹಾಗೂ ‘ಸರ್ವಜ್ಞ ಟ್ರೋಫಿ-2019’ ಕ್ರಿಕೆಟ್ ಪಂದ್ಯಾಟದ ಆಮಂತ್ರಣ ಪತ್ರಿಕೆಯನ್ನು ಶುಕ್ರವಾರ ಕುಲಾಲ-ಮಠ ಕುಂಬೋಧರಿ ದೇವಸ್ಥಾನದಲ್ಲಿ ಯುವವೇದಿಕೆಯ ಗೌರವ ಸಲಹೆಗಾರ ಸೇಷಪ್ಪ ಮೂಲ್ಯ ಬಿಡುಗಡೆಗೊಳಿಸಿದರು. ಬಂಟ್ವಾಳ ಕುಲಾಲ ಯುವವೇದಿಕೆಯ ಅಧ್ಯಕ್ಷ ಸುಕುಮಾರ್ ಬಂಟ್ವಾಳ, ಕುಂಬೋಧರಿ ಜೀರ್ಣೋದ್ಧಾರ ಸಮಿತಿ ಸದಸ್ಯ ಸೇಸಪ್ಪ ಕೈಕುಂಜ, ಯುವವೇದಿಕೆಯ ಗೌರವ ಸಲಹೆಗಾರ ಸೋಮನಾಥ ಸಾಲ್ಯಾನ್, ಪ್ರಧಾನ ಕಾರ್ಯದರ್ಶಿ ಹರಿಪ್ರಸಾದ್ ಭಂಡಾರಿಬೆಟ್ಟು, ಸಾಂಸ್ಕೃತಿಕ ಕಾರ್ಯದರ್ಶಿ ಯಾದವ ಕುಲಾಲ್ ಉಪಸ್ಥಿತರಿದ್ದರು.
ಫೆ.10ರಂದು ಬಿ.ಸಿ.ರೋಡಿನ ರಕ್ತೇಶ್ವರಿ ದೇವಸ್ಥಾನದ ಬಳಿಯಿಂದ ಕುಲಾಲ ಸಮುದಾಯ ಬಾಂಧವರ ನಾಲ್ಕು ಚಕ್ರಗಳ ವಾಹನ ಜಾಥಾವನ್ನು ಮಂಗಳೂರು ಬರ್ಕೆಯ ಯಜ್ಞೇಶ್ ಕುಲಾಲ್ ಉದ್ಘಾಟಿಸಲಿದ್ದಾರೆ. ನಂತರ ಬಂಟ್ವಾಳ ಎಸ್ವಿಎಸ್ ಪ್ರೌಢ ಶಾಲಾ ಮೈದಾನದಲ್ಲಿ ನಡೆಯುವ ಸಭಾಕಾರ್ಯಕ್ರಮದ ಉದ್ಘಾಟನೆಯನ್ನು ಬೆಂಗಳೂರಿನ ಐಪಾಸ್ ಇಂಡಿಯಾದ ಸೀನಿಯರ್ ಡೈರೆಕ್ಟರ್ ಗೋಪಾಲ ಗೋವಿಂದೋಟ ನೆರವೇರಿಸಲಿದ್ದು, ಅಧ್ಯಕ್ಷತೆಯನ್ನು ಬಂಟ್ವಾಳ ಯುವವೇದಿಕೆಯ ಅಧ್ಯಕ್ಷ ಸುಕುಮಾರ್ ಬಂಟ್ವಾಳ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ರಾಜ್ಯ ಕರಾವಳಿ ಕುಲಾಲ-ಕುಂಬಾರರ ಯುವ ವೇದಿಕೆಯ ಸ್ಥಾಪಕಾಧ್ಯಕ್ಷ ಡಾ| ಅಣ್ಣಯ್ಯ ಕುಲಾಲ್ ಉಳ್ತೂರು, ಕರಾವಳಿ ಕುಲಾಲ-ಕುಂಬಾರರ ಯುವವೇದಿಕೆಯ ರಾಜ್ಯಾಧ್ಯಕ್ಷ ತೇಜಸ್ವಿರಾಜ್, ದ.ಕ. ಜಿಲ್ಲಾ ಕರಾವಳಿ-ಕುಂಬಾರರ ಯುವವೇದಿಕೆಯ ಅಧ್ಯಕ್ಷ ಜಯೇಶ್ ಗೋವಿಂದ್, ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘದ ಅಧ್ಯಕ್ಷ ಡಿ.ಎಂ. ಕುಲಾಲ್, ಮಂಗಳೂರಿನ ಉದ್ಯಮಿ ಸದಾನಂದ ನಾವರ, ಉದ್ಯಮಿ ಎಸ್. ಗೋಪಾಲ ಮೂಲ್ಯ, ನೆಲ್ಲಿ-ಶಂಭುಗ ಮಂಗಳೂರಿನ ಸೈಬರ್ ಕ್ರೈಂ ಪೊಲೀಸ್ ಠಾಣೆಯ ಹೆಡ್ಕಾನ್ಸ್ಟೇಬಲ್ ಕೃಷ್ಣ ಕುಲಾಲ್, ವೇಣೂರು ಠಾಣೆಯ ಹೆಡ್ಕಾನ್ಸ್ಟೇಬಲ್ ರಾಜೇಶ್ ಮುಳಿಯ, ರಘುನಾಥ ಸಾಲ್ಯಾನ್ ಭಂಡಾರಿಬೆಟ್ಟು ಭಾಗವಹಿಸಲಿದ್ದಾರೆ.
ಶೌರ್ಯ ಮೆರೆದ ಯುವ ರಾಜೇಶ್ ನರಿಕೊಂಬುರವರಿಗೆ ಸನ್ಮಾನ ಕಾರ್ಯಕ್ರಮ, ಸದಸ್ಯರ ಗುರುತಿನ ಚೀಟಿ ವಿತರಣೆ, ತಾಲೂಕು ಮಟ್ಟದ ಜನಗಣತಿಯ ನೋಂದಣಿ ಅರ್ಜಿ ಬಿಡುಗಡೆ ಹಾಗೂ ಕೆದಿಲ ಗ್ರಾಮದ ಕಾಂಜಲಿಕೆಯ ವಿದ್ಯಾರ್ಥಿ ಮಿತೇಶ್ ವೈದ್ಯಕೀಯ ನೆರವು ಕಾರ್ಯಕ್ರಮ ನಡೆಯಲಿದೆ.
ಕ್ರಿಕೆಟ್ ಪಂದ್ಯಾಟ : ಸಭಾಕಾರ್ಯಕ್ರಮದ ಬಳಿಕ ಬಂಟ್ವಾಳ ತಾಲೂಕಿನ ಸ್ವಜಾತಿ ಬಾಂದವರಿಗಾಗಿ ಕ್ರಿಕೆಟ್ ಪಂದ್ಯಾಟ ನಡೆಯಲಿದ್ದು ಪ್ರಥಮ 7777, ದ್ವಿತೀಯ 5555, ತೃತೀಯ 3333, ಚತುರ್ಥ 1111 ಹಾಗೂ ಸರ್ವಜ್ಞ ಟ್ರೋಫಿಯೊಂದಿಗೆ ಪಂದ್ಯ ಶ್ರೇಷ್ಠ, ಸರಣಿ ಶ್ರೇಷ್ಠ, ಉತ್ತಮ ದಾಂಡಿಗ,
ಉತ್ತಮ ಎಸೆತಗಾರ, ಶಿಸ್ತಿನ ತಂಡ ಪ್ರಶಸ್ತಿ ನೀಡಲಾಗುವುದು. ಸಂಜೆ ಸಮಾರೋಪ ಸಮಾರಂಭದಲ್ಲಿ ಬಂಟ್ವಾಳ ಅಬಕಾರಿ ಇಲಾಖೆ ಇನ್ಸ್ಪೆಕ್ಟರ್ ಚಂದ್ರಕಾಂತ್, ಸಿದ್ದಾಪುರ ವಾರಾಹಿ ನೀರಾವರಿ ಯೋಜನೆ ಕಿರಿಯ ಇಂಜಿನಿಯರ್ ನಾಗೇಶ್ ಅಗ್ರಬೈಲು, ಮಳಲಿ ಕುಂಬಾರರ ಗುಡಿ ಕೈಗಾರಿಕಾ ಸಂಘದ ಅಧ್ಯಕ್ಷ ಸುಂದರ ಬಿ. ಬಂಗೇರ, ಅದ್ಯಪ್ಪಾಡಿ, ಕಲ್ಲಡ್ಕ ವಿಘ್ನೇಶ್ ಬೋರ್ವೆಲ್ನ ಮಾಲಕ ಕೃಷ್ಣಪ್ಪ ಬಿ., ಕಲ್ಲಡ್ಕ ಸಂಭ್ರಮ ಇಲೆಕ್ಟ್ರಾನಿಕ್ಸ್ನ ಮಾಲಕ ಗಿರೀಶ್, ಬಂಟ್ವಾಳ ಸೌತಡ್ಕ ಫರ್ನಿಚರ್ಸ್ನ ಮಾಲಕ ನಾಗೇಶ್ ಸಾಲ್ಯಾನ್, ಬಂಟ್ವಾಳ ಸ.ಸೇ.ಸ.ಬ್ಯಾಂಕಿನ ಅಧ್ಯಕ್ಷ ಸುರೇಶ್ ಕುಲಾಲ್, ಸಿವಿಲ್ ಇಂಜಿನಿಯರ್ ವಜ್ರೇಶ್ ಕುಲಾಲ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.





