ಪೊಳಲಿ: ಪೊಳಲಿ ಶ್ರೀ ರಾಜರಾಜೇಶ್ವರೀನ ದೇವಸ್ಥಾನಕ್ಕೆ ಬಿಲ್ಲವ ಸಮಾಜದವರು ಸೇವಾರೂಪದಲ್ಲಿ ನೀಡುವ ನೂತನ ಧ್ವಜಸ್ಥಂಭದ ಕಂಚಿನ ಕೆಲಸಕಾರ್ಯಗಾರವನ್ನು ಕಾಂಞಗಾಡಿನ ಶಿಲ್ಪಿ ವಿಪಿ ಪ್ರಕಾಶ್ ಅವರ ನೇತೃತ್ವದಲ್ಲಿ ಪಂಚಲೋಹದಿಂದ ಚಿನ್ನದ ಲೇಪನವಿರುವ ನವೀಲು. ಧ್ವಜಸ್ಥಂಭದ ಬುಡದಲ್ಲಿ ಅಷ್ಠದಿಗ್ಪಾಲಕರು ಸೇರಿ 3.500 ಕೆಜಿ ಕಂಚಿನಲ್ಲಿ ಬಹಳ ಸುಂದರವಾದ ಶಿಲಾಕೃತಿಯೊಂದಿಗೆ ತಯಾರಿಸಲ್ಪಟ್ಟ ಕಂಚಿನ ಹೊದಿಕೆಯ ಕೆಲಸವನ್ನು ಕೊಡಿಮರಕ್ಕೆ ಬುಧವಾರ ಪ್ರಾರಂಭಗೊಂಡಿತು.


ಈ ಸಂದರ್ಭದಲ್ಲಿ ಪೊಳಲಿ ದೇವಳದ ಸುಬ್ರಹ್ಮಣ್ಯ ತಂತ್ರಿ ದೇವಳದ ಅರ್ಚಕ ಪರಮೇಶ್ವರಭಟ್, ದೇವಳದ ಕಾರ್ಯನಿರ್ವಹಣಾಧಿಕಾರಿ ಪ್ರವೀಣ್, ಸುಬ್ರಾಯ ಕಾರಂತ,ವೆಂಕಟೇಶ್ ನಾವಡ, ಸಮಿತಿಯ ಗೌರವಾಧ್ಯಕ್ಷ ರಾಮದಾಸ ಕೋಟ್ಯಾನ್,ಭುವನೇಶ್ ಪಚಿನಡ್ಕ ,ಪುರುಷ ಸಾಲ್ಯಾನ್, ಶೇಖರ ಬಳ್ಳಿ, ಚಂದಪ್ಪ ಅಂಚನ್,ಯಶವಂತ ಪೊಳಲಿ, ಗೋಪಾಲಕೃಷ್ಣ ಕೈಕಂಬ ,ನಾರಾಯಣ ಬಡಕಬೈಲ್ , ಉಮೇಶ ಬಾರಿಂಜ,ರಾಮಪ್ಪಪೂಜಾರಿ,ಗಣೇಶ ಪೂಜಾರಿ, ಪ್ರಶಾಂತ್ ವಿಮಲಕೋಡಿ, ಸದಾಶಿವಕರ್ಕೇರಾ ಕಾಜಿಲ,ಲೋಕೇಶ್ ಭರಣಿ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here