


ವಿಟ್ಲ: ದ.ಕ ಗ್ಯಾರೇಜ್ ಮಾಲಕರ ಸಂಘ ಮಂಗಳೂರು (ದ ಕ ಮತ್ತು ಉಡುಪಿ ಜಿಲ್ಲೆ) ವಿಟ್ಲ ವಲಯ ಇದರ ವತಿಯಿಂದ ಕನ್ಯಾನ ಭಾರತ್ ಸೇವಾಶ್ರಮ ನಿವಾಸಿಗಳೊಂದಿಗೆ ಸ್ನೇಹ ಸಮ್ಮಿಲನ ಕಾರ್ಯಕ್ರಮ ನಡೆಯಿತು.
ಮಂಗಳೂರು ದ ಕ ಮತ್ತು ಉಡುಪಿ ಜಿಲ್ಲಾ ಗ್ಯಾರೇಜ್ ಮಾಲಕರ ಸಂಘದ ಅಧ್ಯಕ್ಷ ಗುಣಪಾಲ್ ಎಂ. ದೀಪ ಬೆಳಗಿಸಿ ಚಾಲನೆ ನೀಡಿದರು.
ವಿಟ್ಲ ವಲಯದ ಅಧ್ಯಕ್ಷ ಲಕ್ಷ್ಮಣ ಪೂಜಾರಿ ಆರ್.ಎಸ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಭಾರತ್ ಸೇವಾಶ್ರಮದ ಕಾರ್ಯದರ್ಶಿ ಈಶ್ವರ ಭಟ್, ತುಂಬೆ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಡಿ.ಬಿ ಅಬ್ದುಲ್ ರಹಿಮಾನ್, ಶಂಭೂರು ಸರಕಾರಿ ಪ್ರೌಢಶಾಲೆಯ ಶಿಕ್ಷಕ ಸದಾಶಿವ ನಾಯಕ್, ಗ್ಯಾರೇಜ್ ಮಾಲಕರ ಸಂಘ ದ.ಕ ಮತ್ತು ಉಡುಪಿ ಜಿಲ್ಲೆಯ ಉಪಾಧ್ಯಕ್ಷ ಉದಯಕಿರಣ್ ಮತ್ತು ಬೀಡಿ ಕಾಂಟ್ರಾಕ್ಟರ್ ನೋಣಯ್ಯ ಪೂಜಾರಿ ಇವರು ಭಾಗವಹಿಸಿದ್ದರು. ವಿಟ್ಲ ವಲಯದ ಗೌರವಾಧ್ಯಕ್ಷ ಹರೀಶ್ ಆಚಾರ್ಯ ವಿ. ವೇದಿಕೆಯಲ್ಲಿದ್ದರು.
ಆಶ್ರಮದ ಪ್ರಮೀಳ ಮತ್ತು ಬಳಗದವರು ಆಶಯಗೀತೆ ಹಾಡಿದರು. ವಿಟ್ಲ ವಲಯದ ಗೌರವ ಸಲಹೆಗಾರ ಸುಂದರ ಆಚಾರ್ಯ ನೆಗಳಗುಳಿ ಸ್ವಾಗತಿಸಿ ಪ್ರಸ್ತಾವಿಸಿದರು. ಕಾರ್ಯದರ್ಶಿ ಪ್ರಕಾಶ್ ಅಣ್ಣಡ್ಕ ವಂದಿಸಿದರು. ಪರಮೇಶ್ವರ ಆಚಾರ್ಯ ಮಂಕುಡೆ ನೆಡ್ಯಾಳ ಕಾರ್ಯಕ್ರಮ ನಿರೂಪಿಸಿದರು.





